Royal Enfield Bullet 350 EMI: Royal Enfield Bullet 350 ಎಂದರೆ ಭಾರತೀಯರಿಗೆ ಕೇವಲ ಬೈಕ್ ಅಲ್ಲ, ಒಂದು ಭಾವನೆ. ಮಾರುಕಟ್ಟೆಯಲ್ಲಿ Royal Enfield ತನ್ನ ಸೌಂಡ್ ಮತ್ತು ಶಕ್ತಿಯುತ ಎಂಜಿನ್‌ಗಳಿಗೆ ಹೆಸರುವಾಸಿಯಾಗಿದೆ. Royal Enfield ಮಾರುಕಟ್ಟೆಯಲ್ಲಿ ಯುವಕರ ನೆಚ್ಚಿನ ಬೈಕ್ ಆಗಿ ಹೊರಹೊಮ್ಮಿದೆ ಅಂದರೆ ತಪ್ಪಾಗಲ್ಲ. ಇದೀಗ 2026 ರಲ್ಲಿ Royal Enfield Bullet 350 ಖರೀದಿಸಬೇಕು ಅಂದುಕೊಂಡವರಿಗೆ ಈ ಮಾಹಿತಿ ಉಪಯುಕ್ತವಾಗಲಿದೆ. ಈ ಲೇಖನದಲ್ಲಿ 1 ಲಕ್ಷ ರೂಪಾಯಿ ಸಾಲ ಮಾಡಿ ಬುಲೆಟ್ 350 ಬೈಕ್ ಖರೀದಿಸಿದರೆ ತಿಂಗಳ EMI ಎಷ್ಟು ಅನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
Royal Enfield Bullet 350 ಖರೀದಿ
Royal Enfield ಭಾರತೀಯರ ಕನಸಿನ ಬೈಕ್ ಆಗಿದೆ. ಒಮ್ಮೆ ಆದರೂ ಜೀವನದಲ್ಲಿ Royal Enfield ಖರೀದಿಸಬೇಕು ಅನ್ನುವ ಅಸೆ ಎಲ್ಲರಲ್ಲೂ ಇರುತ್ತದೆ. ಆದರೆ ಈಗ 2026 ರಲ್ಲಿ Royal Enfield Bullet 350 ಬೈಕ್ ಬೆಲೆ ಸ್ವಲ್ಪ ದುಬಾರಿ ಆಗಿದೆ. ಹೀಗಾಗಿ ನೀವು ಸಾಲ ಮಾಡಿ ಖರೀದಿಸುವುದು ಉತ್ತಮವಾಗಿದೆ. ಇದೀಗ ನೀವು ಈ ಬೈಕ್ ಖರೀದಿ ಮಾಡಲು 1 ಲಕ್ಷ ಸಾಲ ಮಾಡಿದರೆ ತಿಂಗಳಿಗೆ ಎಷ್ಟು EMI ಪಾವತಿ ಮಾಡಬೇಕು ಅನ್ನುವ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
Royal Enfield Bullet 350 Price
Royal Enfield Bullet 350 ಭಾರತೀಯ ಮಾರುಕಟ್ಟೆಯಲ್ಲಿ ಹಲವು ವೆರಿಯಂಟ್ ಗಳಲ್ಲಿ ಲಭ್ಯವಿದೆ. ಎಕ್ಸ್ ಶೋರೂಮ್ ಪ್ರಕಾರ,
- ಬೇಸ್ ವೇರಿಯಂಟ್ ಬೆಲೆ 1.62 ಲಕ್ಷ ರೂಪಾಯಿ ಆಗಿದೆ
- ಮಿಡ್ ವೇರಿಯಂಟ್ ಬೆಲೆ 1.85 ಲಕ್ಷ ರೂಪಾಯಿ ಆಗಿದೆ
- ಟಾಪ್ ವೇರಿಯಂಟ್ ಬೆಲೆ 2.02 ಲಕ್ಷ ರೂಪಾಯಿ ಆಗಿದೆ
ಕರ್ನಾಟಕದ ಬೆಂಗಳೂರಿನಲ್ಲಿ ಆನ್ ರೋಡ್ ಬೆಲೆ ಬೆಲೆ ಮಾಡೆಲ್ ನಿಂದ ಟಾಪ್ ಮಾಡೆಲ್ ಗೆ 2.09 ಲಕ್ಷದಿಂದ 2.57 ಲಕ್ಷ ಆಗಿದೆ. ಇದರಲ್ಲಿ RTO ಮತ್ತು Insurance ಸೇರಿಕೊಳ್ಳುತ್ತದೆ.
1 ಲಕ್ಷ ಸಾಲಕ್ಕೆ ಎಷ್ಟು EMI ಪಾವತಿ ಮಾಡಬೇಕು?
ಬೈಕ್ ಸಾಲದ ಬಡ್ಡಿದರ HDFC, SBI, ಬಜಾಜ್ ಫೈನಾನ್ಸ್ ಗಳಲ್ಲಿ 11% ರಿಂದ 14% ವರೆಗೆ ಇದೆ. ಇದೀಗ ನೀವು 5 ವರ್ಷ ಅವಧಿಗೆ 1 ಲಕ್ಷ ಸಾಲವನ್ನು 12% ಬಡ್ಡಿ ದರದಲ್ಲಿ ಪಡೆದುಕೊಂಡರೆ ತಿಂಗಳಿಗೆ 2,225 ರೂಪಾಯಿ EMI ಪಾವತಿ ಮಾಡಬೇಕಾಗುತ್ತದೆ. ಆದರೆ ಒಟ್ಟು ಬಡ್ಡಿ 33,500 ರೂಪಾಯಿ ಆಗುತ್ತದೆ. ಅಂದರೆ ನೀವು ಒಟ್ಟಾಗಿ 1.33 ಲಕ್ಷ ರೂಪಾಯಿ ಮರುಪಾವತಿ ಮಾಡಬೇಕು.
- ಅದೇ ರೀತಿ ನೀವು 5 ವರ್ಷ ಅವಧಿಗೆ 1 ಲಕ್ಷ ಸಾಲವನ್ನು 11% ಬಡ್ಡಿ ದರದಲ್ಲಿ ಪಡೆದುಕೊಂಡರೆ ತಿಂಗಳಿಗೆ 2,175 ರೂಪಾಯಿ EMI ಪಾವತಿ ಮಾಡಬೇಕಾಗುತ್ತದೆ.
- ಇನ್ನು ನೀವು 5 ವರ್ಷ ಅವಧಿಗೆ 1 ಲಕ್ಷ ಸಾಲವನ್ನು 14% ಬಡ್ಡಿ ದರದಲ್ಲಿ ಪಡೆದುಕೊಂಡರೆ ತಿಂಗಳಿಗೆ 2,325 ರೂಪಾಯಿ EMI ಪಾವತಿ ಮಾಡಬೇಕಾಗುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಆದರದ ಮೇಲೆ ಬಡ್ಡಿ ನಿರ್ಧಾರವಾಗುತ್ತದೆ.
Royal Enfield Bullet 350 Features
Royal Enfield Bullet 350 ನಲ್ಲಿ 349cc J-ಸೀರೀಸ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು 20.2 bhp ಪವರ್ ಮತ್ತು 27 Nm ಟಾರ್ಕ್ ಉತ್ಪದಿಸುತ್ತದೆ. ಪ್ರತಿ ಲೀಟರ್ ಗೆ 37 ರಿಂದ 40 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಇನ್ನು Royal Enfield Bullet 350 ನಲ್ಲಿ ಡ್ಯುಯಲ್ ಚಾನಲ್ ABS, Digi-analog instrument cluster, Tripper navigation ಜೊತೆಗೆ ಹಲವಾರು ವೈಶಿಷ್ಟ್ಯವನ್ನು ಅಳವಡಿಸಲಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

