Bus Travel Fare: ಬಸ್ಸಿನಲ್ಲಿ ಪ್ರಯಾಣ ಮಾಡುವ ಪುರುಷರಿಗೆ ಇನ್ನೊಂದು ಬೇಸರದ ಸುದ್ದಿ, ರಾಜ್ಯ ಸರ್ಕಾರದ ಇನ್ನೊಂದು ನಿರ್ಧಾರ.
ಮಹಿಳೆಯರಿಗೆ ಉಚಿತ ಬಸ್ ನೀಡಿದ ಸರ್ಕಾರ ಈಗ ಬೆಲೆ ಏರಿಕೆಯ ಆದೇಶವನ್ನ ಹೊರಡಿಸಲು ಮುಂದಾಗಿದೆ.
Bus Travel Fare Hike: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದಾಗಿನಿಂದ ರಾಜ್ಯ ಒಂದು ರೀತಿಯಲ್ಲಿ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ ಎನ್ನಬಹುದು. ಜನಸಾಮಾನ್ಯರು ಇತ್ತೀಚಿಗೆ ಹಣದುಬ್ಬರದ ಪರಿಸ್ಥಿಯನ್ನು ಎದುರಿಸುವಂತಾಗಿದೆ. ದಿನ ಬಳಕೆಯ ವಸ್ತುಗಳಿಂದ ಹಿಡಿದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೂಡ ಏರಿಕೆಯಾಗುತ್ತಿದೆ ಎನ್ನಬಹುದು. ಇನ್ನು ರಾಜ್ಯದಲ್ಲಿ ಈಗಾಗಲೇ ಮಹಿಳೆಯರಿಗೆ ಉಚಿತ ಪ್ರಯಾಣ ಚಾಲ್ತಿಯಲ್ಲಿದೆ ಆದರೆ ಪುರುಷರು ಬಸ್ ಪ್ರಯಾಣಕ್ಕೆ ಹಣವನ್ನು ಪಾವತಿಸಲೇಬೇಕು.
ಇನ್ನು ಗೃಹ ಜ್ಯೋತಿ ವಿದ್ಯುತ್ ಅಡಿ ಉಚಿತ ವಿದ್ಯುತ್ ನೀಡಿದ್ದು, ಯೋಜನೆ ಜಾರಿಯಾದ ಬೆನ್ನಲ್ಲೇ ವಿದ್ಯುತ್ ದರವನ್ನು ಸರ್ಕಾರ ಬಾರಿ ಹೆಚ್ಚಿಸಿತ್ತು. ಇದೀಗ ವಿದ್ಯುತ್ ದರವನ್ನು ಹೆಚ್ಚಿಸಿರುವ ಸರ್ಕಾರ ಉಚಿತ ಬಸ್ ಪ್ರಯಾಣ ಇರುವ ಕಾರಣ ಮತ್ತೆ ಬಸ್ ಪ್ರಯಾಣದ ದರವನ್ನು ಏರಿಕೆ ಮಾಡಲು ನಿರ್ಧರಿಸಿದೆ. ಈ ಮೂಲಕ ರಾಜ್ಯದ ಜನತೆಗೆ ಮತ್ತೊಂದು ಶಾಕ್ ನೀಡಿದೆ.
ರಾಜ್ಯದ ಜನತೆಗೆ ಮತ್ತೊಂದು ಶಾಕ್
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರ ನಿಗದಿಗೆ ಪ್ರತ್ಯೇಕ ನಿಯಂತ್ರಣ ಆಯೋಗ ರಚನೆ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಡೀಸೆಲ್, ಬಸ್ ಗಳ ಬಿಡಿಭಾಗಗಳ ಬೆಲೆ ಏರಿಕೆ, ನೌಕರರ ವೇತನ ಹೆಚ್ಚಳ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಾಲ್ಕೂ ನಿಗಮಗಳ ಆರ್ಥಿಕ ಪರಿಸ್ಥಿತಿ ಹಾಳಾಗಿದೆ.
ಹೀಗಾಗಿ ಇದನ್ನು ಸುಧಾರಿಸಲು ಇಲಾಖೆಯು ಸಾರಿಗೆ ಬಸ್ ಗಳ ಪ್ರಯಾಣ ದರವನ್ನು ವಿದ್ಯುತ್ ದರದಂತೆ ಪ್ರತಿ ವರ್ಷ ಏರಿಕೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಬೆಲೆ ಏರಿಕೆಯ ಹೊರೆ ನೇರವಾಗಿ ಜನರ ಮೇಲೆ ಬೀಳಲಿದೆ ಎಂದು ಹೇಳಿದರೆ ತಪ್ಪಾಗಲ್ಲ.
ವಿದ್ಯುತ್ ದರದ ಏರಿಕೆಯ ಬೆನ್ನಲ್ಲೇ ಬಸ್ ಪ್ರಯಾಣ ದರ ಏರಿಕೆ
ಡೀಸೆಲ್ ದರ ಏರಿಕೆ, ಬಸ್ ಗಳ ಬಿಡಿ ಭಾಗಗಳು, ನೌಕರರ ವೇತನ ಹೆಚ್ಚಳ ಮತ್ತಿತರ ಕಾರಣಗಳಿಂದಾಗಿ ಎಲ್ಲ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಹೀಗಾಗಿ ಇದನ್ನು ಸುಧಾರಿಸಲು ಸಾರಿಗೆ ಬಸ್ ಗಳ ಪ್ರಯಾಣ ದರವನ್ನು ವಿದ್ಯುತ್ ದರದಂತೆ ಪ್ರತಿ ವರ್ಷ ಹೆಚ್ಚಿಸಲು ಇಲಾಖೆ ನಿರ್ಧರಿಸಿದೆ. ಪ್ರತಿ ವರ್ಷ ನಿಗಮಗಳ ಆರ್ಥಿಕ ಸ್ಥಿತಿಗತಿಯನ್ನು ನಿಯಂತ್ರಣ ಆಯೋಗದ ಮುಂದೆ ಸಲ್ಲಿಸಿ ಬಸ್ ಪ್ರಯಾಣ ದರ ಏರಿಕೆಗೆ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ.