Gold Purchase: ಈಗ ಮನೆಯಲ್ಲಿ ಕುಳಿತು ಕೇವಲ 10 ರೂ ನಲ್ಲಿ ಚಿನ್ನ ಖರೀದಿಸಬಹುದು, ಆಭರಣ ಪ್ರಿಯರಿಗೆ ದೀಪಾವಳಿ ಆಫರ್.

ಚಿನ್ನ ಪ್ರಿಯರಿಗೆ ಇದೊಂದು ಭರ್ಜರಿ ಆಫರ್, ಈಗ ಕೇವಲ 10 ರೂಪಾಯಿಗೂ ಕೂಡ ಚಿನ್ನ ಖರೀದಿ ಮಾಡಬಹುದು.

Buy Gold For 10 Rupees: ಭಾರತದ ಜನಪ್ರಿಯ ಹಬ್ಬಗಳಲ್ಲಿ ದೀಪಾವಳಿ ಹಬ್ಬ (Diwali Festival) ಕೂಡ ಒಂದಾಗಿದೆ. ದೇಶದಾದ್ಯಂತ ಈ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಹಬ್ಬದ ದಿನದಂದು ಜನರು ಚಿನ್ನ, ಬೆಳ್ಳಿ, ಪಾತ್ರೆಗಳು, ಹಾಗೆ ಇನ್ನಿತರ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಏಕೆಂದರೆ ಈ ದಿನವನ್ನು ಭಾರತದಲ್ಲಿ ಶಾಪಿಂಗ್ ಮಾಡಲು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

Buy Gold For 10 Rupees
Imager Credit: NDTV

ಚಿನ್ನ ಪ್ರಿಯರಿಗೆ ಭರ್ಜರಿ ಆಫರ್
ಭಾರತೀಯರಿಗೆ ಚಿನ್ನ ಎಂದರೆ ಎಷ್ಟು ಪ್ರೀತಿ ಎನ್ನುವ ವಿಚಾರ ಎಲ್ಲರಿಗು ಗೊತ್ತಿದೆ. ಕಷ್ಟದ ಸಮಯದಲ್ಲಿ, ಚಿನ್ನವು ಆರ್ಥಿಕ ಬೆಂಬಲವಾಗಿ ನೆರವಾಗುತ್ತದೆ.  ಆದ್ದರಿಂದ ಇದನ್ನು ಆಭರಣಗಳ ಜೊತೆಗೆ ಹೂಡಿಕೆಯ ಆಯ್ಕೆಯಾಗಿ ನೋಡಲಾಗುತ್ತದೆ. ಇದೀಗ ಇನ್ನು ಬೆರಳೆಣಿಕೆಯ ದಿನದಲ್ಲಿ ದೀಪಾವಳಿ ಹಬ್ಬ ಬರಲಿದೆ. ಈ ಹಬ್ಬಕ್ಕೆ ಜನರು ವಿಶೇಷವಾಗಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಾರೆ.

ಈ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿ ಅಂಗಡಿಗಳಲ್ಲಿ ಬಹಳಷ್ಟು ಜನಸಂದಣಿ ಕಂಡು ಬರುತ್ತದೆ. ಆದರೆ ಈ ಬಾರಿ ನೀವು ಗಂಟೆಗಟ್ಟಲೆ ಚಿನ್ನದಂಗಡಿಯ ಎದುರು ನಿಲ್ಲುವ ಅಗತ್ಯವಿಲ್ಲ. ಹೌದು ಇದೀಗ ನೀವು ಮನೆಯಲ್ಲಿಯೇ ಕುಳಿತು ಚಿನ್ನವನ್ನು ಖರೀದಿಸಬಹುದು. ಅದು ಹೇಗೆಂದು ನಾವೀಗ ತಿಳಿದುಕೊಳ್ಳೋಣ.

Gold Purchase In 10 Rupees
Image Credit: Economictimes

ಡಿಜಿಟಲ್ ಚಿನ್ನದ ಹೂಡಿಕೆ
ಹೌದು ನೀವೀಗ ಮನೆಯಲ್ಲಿ ಕುಳಿತು ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಯಾವಾಗ ಬೇಕಾದರೂ ನಿಮ್ಮ ಚಿನ್ನವನ್ನು ಮಾರಾಟ ಮಾಡಬಹುದು. ಡಿಜಿಟಲ್ ಚಿನ್ನವನ್ನು ಖರೀದಿಸುವ ಸೌಲಭ್ಯವನ್ನು ಒದಗಿಸುವ ಅನೇಕ ಅಪ್ಲಿಕೇಶನ್‌ಗಳು ಮಾರುಕಟ್ಟೆಯಲ್ಲಿವೆ. ಕೆಲವು ಅಪ್ಲಿಕೇಶನ್‌ ಗಳು ಈಗಾಗಲೇ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಇದೆ, ಅವುಗಳನ್ನು ಪ್ರತ್ಯೇಕವಾಗಿ ಡೌನ್ಲೋಡ್ ಮಾಡುವ ಅಗತ್ಯವಿಲ್ಲ.

ಕೇವಲ 10 ರೂಪಾಯಿಗೆ ಚಿನ್ನ ಖರೀದಿಸುವ ವಿಧಾನ
* Paytm ಮೂಲಕ ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡಬಹುದು. Paytm MMTC -PAMP ಸಹಯೋಗದೊಂದಿಗೆ 24 ಕ್ಯಾರೆಟ್ ಮತ್ತು 99.9% ಶುದ್ಧತೆಯ ಡಿಜಿಟಲ್ ಚಿನ್ನವನ್ನು ನೀಡುತ್ತದೆ. ನೀವು ಚಿನ್ನವನ್ನು ಖರೀದಿಸಬಹುದು, ಮಾರಾಟ ಮಾಡಬಹುದು ಅಥವಾ ಉಡುಗೊರೆಯಾಗಿ ಇಲ್ಲಿಂದ ಭೌತಿಕ ವಿತರಣೆಯನ್ನು ತೆಗೆದುಕೊಳ್ಳಬಹುದು. ನೀವು Paytm ನಲ್ಲಿ 0.001 ಗ್ರಾಂ ಅನ್ನು ಕೇವಲ 10 ರೂಪಾಯಿಗೆ ಖರೀದಿಸಬಹುದು.

Join Nadunudi News WhatsApp Group

digital gold investment
Image Credit: Paytm

* Google Pay ಕೂಡ MMTC -PAMP ಅಡಿಯಲ್ಲಿ ಚಿನ್ನವನ್ನು ಖರೀದಿಸಲು, ಮಾರಾಟ ಮಾಡಲು ಮತ್ತು ವಿನಿಮಯ ಮಾಡಿಕೊಳ್ಳುವ ಆಯ್ಕೆಯನ್ನು ನೀಡುತ್ತಿದೆ. 99.9% ಶುದ್ಧತೆಯೊಂದಿಗೆ ಬರುವ 24 ಕ್ಯಾರೆಟ್ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ನೀವು ಹೂಡಿಕೆ ಮಾಡಿದ ಮೌಲ್ಯವನ್ನು ಡಿಜಿಟಲ್ ರೂಪದಲ್ಲಿ ಉಳಿಸಲಾಗುತ್ತದೆ ಮತ್ತು ನೀವು ಯಾವಾಗ ಬೇಕಾದರೂ ಅದನ್ನು ನಗದು ರೂಪದಲ್ಲಿ ಪರಿವರ್ತಿಸಬಹುದಾಗಿದೆ.

* UPI ಅಪ್ಲಿಕೇಶನ್ ಸಹ ನಿಮ್ಮ ಫೋನ್‌ ನಲ್ಲಿ 24 ಕ್ಯಾರೆಟ್ ಚಿನ್ನದಲ್ಲಿ ಹೂಡಿಕೆ ಮಾಡುವ ಆಯ್ಕೆಯನ್ನು ನೀಡುತ್ತಿದೆ.

* ನೀವು ಏರ್ಟೆಲ್ ಪೇಮೆಂಟ್ ಬ್ಯಾಂಕ್ ಖಾತೆಯ ಮೂಲಕ ಡಿಜಿಟಲ್ ರೂಪದಲ್ಲಿ 24 ಕ್ಯಾರೆಟ್ ಚಿನ್ನವನ್ನು ಖರೀದಿಸಬಹುದು. ನೀವು ಕೇವಲ 100 ರೂಗಳಲ್ಲಿ ಖರೀದಿಸಲು ಪ್ರಾರಂಭಿಸಬಹುದು ಮತ್ತು ನಿಮಗೆ ಬೇಕಾದಾಗ ನಿಮ್ಮ ಚಿನ್ನವನ್ನು ನಗದು ರೂಪದಲ್ಲಿ ಪರಿವರ್ತಿಸಬಹುದು.

Join Nadunudi News WhatsApp Group