BYD Ev: ಬೆಲೆ ಕೇವಲ 9 ಲಕ್ಷ ರೂ, ಆದರೆ ಮೈಲೇಜ್ 405 Km, ಭಾರತದಲ್ಲಿ ಈ ಕಾರಿಗೆ ಹೆಚ್ಚಾಗಿದೆ ಬೇಡಿಕೆ.

ಒಮ್ಮೆ ಚಾರ್ಜ್ ಮಾಡಿದರೆ 405 Km ರೇಂಜ್ ನೀಡುವ ಎಲೆಕ್ಟ್ರಿಕ್ ಕಾರ್

BYD Seagull EV: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ವಿಭಿನ್ನ ರೀತಿಯ ಎಲೆಕ್ಟ್ರಿಕ್ ಕಾರ್ ಗಳನ್ನೂ ಪರಿಚಯಿಸಿದೆ. ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ಹೆಚ್ಚುತ್ತಿದ್ದಂತೆ ಸಾಕಷ್ಟು ಅಗ್ಗದ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇನ್ನು ಅನೇಕ ವಿಭಾಗದಲ್ಲಿ ಅನೇಕ ಕಂಪನಿಗಳು ದುಬಾರಿ ಕಾರ್ ಗಳನ್ನೂ ಪರಿಚಯಿಸಿದೆ. ಮಧ್ಯಮ ವರ್ಗದ ಜನರಿಗೆ ದುಬಾರಿ ಕಾರ್ ಗಳ ಖರೀದಿ ಕಷ್ಟವಾಗುತ್ತದೆ.

ಹೀಗಿರುವಾಗ ಕೆಲವು ಕಂಪನಿಗಳು ವಿವಿಧ ಹಣಕಾಸಿನ ಯೋಜನೆಯನ್ನು ಗ್ರಾಹಕರಿಗೆ ನೀಡುತ್ತದೆ. ಕಡಿಮೆ ಡೌನ್ ಪೇಮೆಂಟ್ ಮಾಡುವ ಮೂಲಕ ಗ್ರಾಹಕರು 30 ಲಕ್ಷಕ್ಕೂ ಅಧಿಕ ಬೆಲೆಯ ಕಾರ್ ಅನ್ನು ಖರೀದಿಸಬಹುದಾಗಿದೆ. ಇದೀಗ ಮಾರುಕಟ್ಟೆಯಲ್ಲಿ BYD ಕಂಪನಿ ಎಲೆಕ್ಟ್ರಿಕ್ ಕಾರ್ ಗಳ ಜೊತೆ ಸ್ಪರ್ದಿಸಲು ನೂತನ ಮಾದರಿಯ ಕಾರ್ ಅನ್ನು ಪರಿಚಯಿಸುತ್ತಿದೆ.

BYD Seagull electric car is special feature
Image Credit: Insideevs

BYD ಸೀಗಲ್ ಎಲೆಕ್ಟ್ರಿಕ್ ಕಾರ್ (BYD Seagull EV) 
ಇನ್ನು BYD ಕಂಪನಿಯು ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳನ್ನೂ ಬಿಡುಗಡೆ ಮಾಡಿವೆ. ನೀವು ಎಲೆಕ್ಟ್ರಿಕ್ ಕಾರ್ ಗಳನ್ನೂ ಖರೀದಿಸಲು ಬಯಸುತ್ತಿದ್ದರೆ BYD ಕಂಪನಿಯ BYD Seagull ಎಲೆಕ್ಟ್ರಿಕ್ ಕಾರ್ ನಿಮಗೆ ಉತ್ತಮ ಬಜೆಟ್ ನಲ್ಲಿ ಸಿಗಲಿದೆ. ಈ ಕಾರ್ ಹೆಚ್ಚಿನ ಮೇಲ್ ನೀಡಲಿದ್ದು ನೂತನ ವಿನ್ಯಾಸದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ BYD ಸೀಗಲ್ ಎಲೆಕ್ಟ್ರಿಕ್ ಕಾರ್ ಗೆ 9 ರಿಂದ 11 ಲಕ್ಷ ರೂ. ನಿಗದಿಪಡಿಸಲಾಗಿದೆ.

ಒಮ್ಮೆ ಚಾರ್ಜ್ ಮಾಡಿದರೆ 405 Km ರೇಂಜ್ ನೀಡುವ ಕಾರ್
ಇದೀಗ BYD ತನ್ನ ಹೊಸ ಮಾದರಿಯ ಸೀಗಲ್ ಎಲೆಕ್ಟ್ರಿಕ್ ಕಾರ್ ಅನ್ನು ಪರಿಚಯಿಸಿದೆ. ಈ ಎಲೆಕ್ಟ್ರಿಕ್ ಕಾರ್ ನಲ್ಲಿ ಶಕ್ತಿಯುತ ಬ್ಯಾಟರಿಯನ್ನು ನೀಡಲಾಗಿದ್ದು, ಒಂದೇ ಚಾರ್ಜ್ ನಲ್ಲಿ 405 ಕಿಲೋಮೀಟರ್ ಚಲಿಸಲಿದೆ. BYD ಸೀಗಲ್ ಎಲೆಕ್ಟ್ರಿಕ್ ಕಾರ್ ನಲ್ಲಿ 70 kW ಎಲೆಕ್ಟ್ರಿಕ್ ಮೋಟಾರ್ ಅನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಕಾರ್ ಗ್ರಾಹಕರಿಗೆ ಹೆಚ್ಚಿನ ವೇಗವನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಮೋಟಾರ್ ನಿಂದ 204 ಬಿಎಚ್ ಪಿ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

The car has a range of 405 Km on a single charge
Image Credit: Insideevs

BYD Seagull ಎಲೆಕ್ಟ್ರಿಕ್ ಕಾರ್ ವಿಶೇಷತೆ
ಈ ಎಲೆಕ್ಟ್ರಿಕ್ ಕಾರ್ ನಲ್ಲಿ ಎರಡು ಬ್ಯಾಟರಿ ಆಯ್ಕೆಯನ್ನು ನೀಡಲಾಗುತ್ತದೆ. ಮೊದಲನೆಯ ಬ್ಯಾಟರಿ ಆಯ್ಕೆ 30 kWh ಆಗಿದ್ದು 305 ಕಿಲೋಮೀಟರ್ ವ್ಯಾಪ್ತಿಯನ್ನು ನೀಡಲಿದೆ. ಎರಡನೇ ಆಯ್ಕೆಯ ಬ್ಯಾಟರಿ 38 kWh ಆಗಿದ್ದು 405 ಕಿಲೋಮೀಟರ್ ವ್ಯಾಪ್ತಿಯನ್ನು ನೀಡಲಿದೆ.

Join Nadunudi News WhatsApp Group

ಈ ಕಾರಿನ ಗರಿಷ್ಟ ವೇಗವು ಗಂಟೆಗೆ 130 ಕಿಲೋಮೀಟರ್ ಆಗಿರುತ್ತದೆ. ಈ ಕಾರ್ ನಲ್ಲಿ 5 ಆಸನಗಳನ್ನು ಅಳವಡಿಸಲಾಗಿದ್ದು ಗ್ರಾಹಕರ ಸುರಕ್ಷತೆಗಾಗಿ ಹೆಚ್ಚಿನ ವೈಶಿಷ್ಟ್ಯಗಳನ್ನು ಇರಿಸಲಾಗಿದೆ. ಇನ್ನು 12.8 ಇಂಚಿನ ಟಚ್ ಸ್ಕ್ರೀನ್ ಇನ್ ಪೋಟ್ರೈನ್ ಮೆಂಟ್ ಸಿಸ್ಟಮ್ ಮತ್ತು 5 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆಯುತ್ತದೆ.

Join Nadunudi News WhatsApp Group