High Court: ದೇಶದಲ್ಲಿ ಗಂಡ ಹೆಂಡತಿಗೆ ಬಂತು ಇನ್ನೊಂದು ಕಾನೂನು, ಮಹತ್ವದ ತೀರ್ಪು ನೀಡಿದ ಹೈಕೋರ್ಟ್.
ಪತ್ನಿಯ ವಿರುದ್ಧ ವಂಚನೆಯ ಆರೋಪದ ಆಬಗ್ಗೆ ಮಹತ್ವದ ತೀರ್ಪು ನೀಡಿದ ಹೈಕೋರ್ಟ್.
Calcutta High Court: ಭಾರತೀಯ ಕಾನೂನಿನಲ್ಲಿ ಮದುವೆಗೆ ಸಂಬಂಧಿಸದಂತೆ ಅನೇಕ ರೀತಿಯ ನಿಯಮಗಳಿವೆ. ಯಾರೊಬ್ಬರೂ ಕೂಡ ಮದುವೆಯಾಗಬೇಕಿದ್ದರು ಕಾನೂನಿನ ನಿಯಮದ ಪ್ರಕಾರವೇ ಮದುವೆ ಮಾಡಿಕೊಳ್ಳಬೇಕು. ಮದುವೆಯ ಬಳಿಕ ವಿವಾಹ ನೋಂದಣಿಯನ್ನು ಮಾಡಿಕೊಳ್ಳಬೇಕು.
ಇನ್ನು ಭಾರತೀಯ ಕಾನೂನಿನಲ್ಲಿ ವಿಚ್ಛೇದನದ ಪ್ರಕರಣಗಳು ಸಾಕಷ್ಟಿವೆ. ವಿಚ್ಛೇದನದ ಜೊತೆಗೆ ಗಂಡ ಹೆಂಡತಿ ನಡುವಿನ ಜಗಳ, ಮನಸ್ತಾಪ, ಹೊಂದಾಣಿಕೆ ಇಲ್ಲದೆ ಇದ್ದರು ಕೂಡ ದಂಪತಿಗಳು ನ್ಯಾಯಾಲಯದ ಮೆಟ್ಟಿಲೇರುತ್ತಾರೆ.
ಇನ್ನು ಭಾರತೀಯ ನ್ಯಾಯಾಲಯ ವಿಚ್ಛೇದನದ ನಂತರ ಪತಿ ಪತ್ನಿಯ ಆಸ್ತಿಯ ಹಕ್ಕಿನ ಬಗ್ಗೆ ಕೂಡ ವಿವಿಧ ರೀತಿಯ ತಿದ್ದುಪಡಿಯನ್ನು ತಂದಿದೆ. ಪತಿಯಿಂದ ಪತ್ನಿಯು ದೂರವಾದ ಬಳಿಕ ಪತ್ನಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಕಾನೂನಿನ ನಿಯಮಗಳನ್ನು ರೂಪಿಸಲಾಗಿದೆ. ಇನ್ನು ದಂಪತಿಗಳ ನಡುವಿನ ಜಗಳದ ಸಮಯದಲ್ಲಿ ಕೋರ್ಟ್ ಮೆಟ್ಟಿಲೇರುತ್ತಾರೆ. ಇದೀಗ ಪತಿಯು ತನ್ನ ಪತ್ನಿಯ ವಿರುದ್ಧ ವಂಚನೆಯ ದೂರನ್ನು ದಾಖಲಿಸಿರುವ ಘಟನೆ ನಡೆದಿದೆ.
ಪತ್ನಿಯ ವಿರುದ್ಧ ಪತಿಯ ವಂಚನೆಯ ಆರೋಪ
“ಮನೆಯನ್ನು ತೊರೆಯುವಾಗ ಬೆಲೆಬಾಳುವ ಆಭರಣ ಮತ್ತು ಫೋನ್ ಗಳನ್ನೂ ತೆಗೆದುಕೊಂಡು ಹೋಗಿದ್ದಾಳೆ ಎಂದು ಪತಿಯೊಬ್ಬ ತನ್ನ ಪತ್ನಿಯ ವಿರುದ್ಧ ವಂಚನೆಯ ಪ್ರಕರಣವನ್ನು ದಾಖಲಿಸಿದ್ದಾರೆ”. ಈ ಪ್ರಕರಣದ ತನಿಖೆ ಕೋಲ್ಕತ್ತಾ ನ್ಯಾಯಾಲಯದಲ್ಲಿ ಚರ್ಚಿಸಲಾಗಿದೆ.
ದೇಶದಲ್ಲಿ ಗಂಡ ಹೆಂಡತಿಗೆ ಬಂತು ಇನ್ನೊಂದು ಕಾನೂನು
ಬೆಲೆಬಾಳುವ ಆಭರಣಗಳು ಮತ್ತು ಫೋನ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣವನ್ನು ಕಲ್ಕತ್ತಾ ಹೈಕೋರ್ಟ್ (Calcutta High Court) ಇತ್ತೀಚೆಗೆ ರದ್ದುಗೊಳಿಸಿದೆ. ಪ್ರಕರಣದ ತನಿಖೆ ನಡೆಸಿದ ಕೋಲ್ಕತ್ತಾ ನ್ಯಾಯಾಲಯ ಮಹಿಳೆಯ ವಿರುದ್ಧ ನೀಡಲಾದ ವಂಚನೆಯ ಆರೋಪವನ್ನು ರದ್ದುಮಾಡಿದೆ.
ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆಗೊಳಗಾದ ಬಳಿಕ ಮಹಿಳೆಯು ತನ್ನ ಮನೆಯನ್ನು ತೊರೆದಿದ್ದಾಳೆ ಎನ್ನುವ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಆದೇಶ ನೀಡಲಾಗಿದೆ.
ವಂಚನೆಯ ಪ್ರಕರಣ ವಿವರ
ಮಹಿಳೆ ಚಿನ್ನದ ಬಳೆ ಸೇರಿದಂತೆ ಬೆಲೆ ಬಾಳುವ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾಳೆ. ಎರಡು ಮೊಬೈಲ್ ಫೋನ್ ಗಳು, ತನ್ನ ಮಗನ ಒಂದು ಚಿನ್ನದ ಸರ ಮತ್ತು ತನ್ನದೇ ಆದ ಒಂದು ಚಿನ್ನದ ಹಾರವನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಪ್ರಕರಣ ದಾಖಲಾಗಿದೆ.
ಇನ್ನು ಆ ಆಭರಣಗಳು ಸಾಮಾನ್ಯವಾಗಿ ಮದುವೆಯ ಆಭರಣಗಳಾಗಿವೆ ಮತ್ತು ಸಾಂಪ್ರದಾಯಿಕ ಬಂಗಾಳಿ ವಿವಾಹಿತ ಮಹಿಳೆಯರು ಧರಿಸುತ್ತಾರೆ ಎಂದು ನ್ಯಾಯಪೀಠ ಗಮನಿಸಿದೆ.
ಕೋಲ್ಕತ್ತಾ ನ್ಯಾಯಾಲಯದ ಆದೇಶ
ಆಭರಣಗಳು ಸಾಂಪ್ರದಾಯಿಕ ಬಂಗಾಳಿ ವಿವಾಹಿತ ಮಹಿಳೆ ನಿಯಮಿತವಾಗಿ ಧರಿಸುತ್ತಾರೆ. ಅವರು ಅವುಗಳನ್ನು ಧರಿಸಲು ಆಯ್ಕೆ ಮಾಡುತ್ತಾರೆ. ಆಕೆಯ ಸ್ವಂತ ಬಳಕೆಗಾಗಿ ಮತ್ತು ವಿವರಿಸಿದಂತೆ ಆಭರಣಗಳು ವಿವಾಹಿತ ದಂಪತಿಗಳ ನಡುವಿನ ಕ್ರಿಮಿನಲ್ ಪ್ರಕರಣಕ್ಕೆ ಆಧಾರವಾಗಲು ಸಾಧ್ಯವಿಲ್ಲ. ಅದು ಮದುವೆಯಾದ 29 ವರ್ಷಗಳ ನಂತರ ಎಂದು ನ್ಯಾಯಾಲಯ ಆದೇಶವನ್ನು ನೀಡಿದೆ. ಈ ಮೂಲಕ ಪತ್ನಿ ವಿರುದ್ದ ಪತಿ ಹಾಕಿದ ವಂಚನೆಯ ಪ್ರಕರಣವನ್ನು ಕೋಲ್ಕತ್ತಾ ನ್ಯಾಯಾಲಯ ರದ್ದುಪಡಿಸಿದೆ.