Camphor Business: 70 ಸಾವಿರಕ್ಕೆ ಈ ಮಷೀನ್ ಖರೀದಿಸಿ ಆರಂಭಿಸಿ ಕರ್ಪೂರದ ಬಿಸಿನೆಸ್, ದಿನಕ್ಕೆ 2000 ರೂ ಆದಾಯ

ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವಂಥ ಈ ಕರ್ಪೂರದ ಬಿಸಿನೆಸ್ ಆರಂಭಿಸಿದರೆ ತಿಂಗಳಿಗೆ ಹೆಚ್ಚಿನ ಆದಾಯವನ್ನು ಗಳಿಸಬಹುದು.

Camphor Business Details: ಸಾಕಷ್ಟು ಜನರು ಸ್ವಂತ ಉದ್ಯೋಗದ ಕನಸನ್ನು ಕಾಣುತ್ತಾರೆ. ಬೇರೆ ಕಡೆ ಕೆಲಸ ಮಾಡಲು ಆಗದೆ ಸ್ವಂತ ಉದ್ಯೋಗ ಮಾಡಲು ಹೂಡಿಕೆ, ಆಯ್ಕೆ ಇಲ್ಲದೆ ಸಾಕಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ ಎನ್ನಬಹುದು. ಇನ್ನು ಸ್ವಂತ ಉದ್ಯೋಗದ ಕನಸಿಗೆ ಸಾಕಷ್ಟು ಆಯ್ಕೆಗಳಿರುತ್ತದೆ. ಉದ್ಯೋಗ ಮಾಡಲು ವಿವಿಧ ಆಯ್ಕೆ ಇದೆ ಎಂದಾಕ್ಷಣ ಎಲ್ಲ ಉದ್ಯೋಗವನ್ನು ಮಾಡಲು ಮುಂದಾಗಬಾರದು.

ಉದ್ಯೋಗ ಮಾಡಲು ಮುಖ್ಯವಾಗಿ ಬಂಡವಾಳದ ಅಗತ್ಯವಿದೆ. ಉದ್ಯೋಗದ ಬಂಡವಾಳಕ್ಕೂ, ಉದ್ಯೋಗದ ಲಾಭಕ್ಕೂ ತಾಳೆ ಹಾಕುವುದು ಮುಖ್ಯವಾಗುತ್ತದೆ. ಇನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವಂತಹ ವ್ಯವಹಾರಕ್ಕೆ ಕೈಹಾಕಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು. ನಾವೀಗ ಈ ಲೇಖನದಲ್ಲಿ ಸ್ವಂತ ಉದ್ಯೋಗದ ಕನಸು ಕಾಣುವವರಿಗಾಗಿ ಉತ್ತಮ ವ್ಯವಹಾರದ ಬಗ್ಗೆ ಮಾಹಿತಿ ಹೇಳಲಿದ್ದೇವೆ.

Camphor Business Details
Image Credit: Nilgiris

ಮನೆಯಲ್ಲಿಯೇ ಕುಳಿತು ಈ ಚಿಕ್ಕ ಬಿಸಿನೆಸ್ ಅನ್ನು ಮಾಡಬಹುದು
ಹೌದು, ನಾವೀಗ ಈ ಲೇಖನದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವಂಥ ಕರ್ಪೂರ (Camphor) ವ್ಯವಹಾರದ ಬಗೆ ಹೇಳಲಿದ್ದೇವೆ. ಈ ಕರ್ಪೂರವು ಪೂಜಾ ಸಮಯದಲ್ಲಿ ಬೇಕಾಗುವ ಮುಖ್ಯ ವಸ್ತುವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಕರ್ಪೂರಕ್ಕೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹದು.

ಒಂದು ಕೆಜಿ ಕರ್ಪೂರದ ಮೇಲೆ ನೀವು 200 ರೂ. ಲಾಭವನ್ನು ಗಳಿಸಬಹುದು. ಹೆಚ್ಚು ಹೆಚ್ಚು ಕರ್ಪೂರದ ಮಾರಾಟದಿಂದ ನೀವು ಲಕ್ಷ ಲಕ್ಷ ಗಳಿಸುವ ಅವಕಾಶವಿದೆ. ಇನ್ನು ಕರ್ಪೂರ ತಯಾರಿಕೆಗೆ ನಿಮಗೆ ಮುಖ್ಯವಾಗಿ ಮೆಷಿನ್ ನ ಅಗತ್ಯವಿದೆ. ಚಿಕ್ಕ ಮೆಷಿನ್ ಅಥವಾ ದೊಡ್ಡ ಮೆಷಿನ್ ಅನ್ನು ಕೂಡ ನೀವು ಖರೀದಿಸಬಹುದು. ನಿಮ್ಮ ಬಂಡವಾಳಕ್ಕೆ ತಕ್ಕಂತೆ ಮೆಷಿನ್ ಆಯ್ಕೆಯನ್ನು ಮಾಡಬಹುದು. ಮೆಷಿನ್ ನ ಆರಂಭಿಕ ಬೆಲೆಯೂ 70 ಸಾವಿರದಿಂದ ಆರಂಭವಾಗುತ್ತದೆ.

Camphor Making Machine
Image Credit: Squarespace-cdn

ಕರ್ಪೂರದ ಬಿಸಿನೆಸ್ ಮಾಡಲು ಏನೆಲ್ಲಾ ಅಗತ್ಯವಿದೆ…?
ಇನ್ನು ಮೆಷಿನ್ ನಲ್ಲಿ ವಿವಿಧ ರೀತಿಯ್ ಶೇಪ್ ಅನ್ನು ನೀಡುವ ಮೆಷಿನ್ ಗಳಿರುತ್ತದೆ. ಇನ್ನು ಕರ್ಪೂರ ತಯಾರಿಕೆಗೆ ಮುಖ್ಯವಾಗಿ ಮಂಗಳಂ ಪೌಡರ್ ಮತ್ತು ಎಕ್ಸಮಿನ್ ಪೌಡರ್ ಅನ್ನು ಮೆಟಿರಿಯಲ್ ಆಗಿ ಬಳಸಲಾಗುತ್ತದೆ. ಈ ಎರಡು ಕಚ್ಚಾ ವಸ್ತುಗಳಿಂದ ಕರ್ಪೂರವನ್ನು ತಯಾರಿಸಬಹುದು.

Join Nadunudi News WhatsApp Group

ಇನ್ನು ನೀವು Online ನಲ್ಲಿ ಕರ್ಪೂರ ತಯಾರಿಕೆಗೆ ಬೇಕಾದ ಮೆಟಿರಿಯಲ್ ಅನ್ನು ತರಿಸಿಕೊಳ್ಳಬಹುದು. ಮಂಗಳಂ ಪೌಡರ್ ಕೆಜಿಗೆ 600 ರಿಂದ 700 ರೂ. ಇರುತ್ತದೆ. ಹಾಗೆಯೆ ಎಕ್ಸಮಿನ್ ಪೌಡರ್ ಕೆಜಿಗೆ 150 ರಿಂದ 200 ರೂ. ಇರುತ್ತದೆ. ಮನೆಯಲ್ಲಿಯೇ ಮೆಷಿನ್ ಅನ್ನು ಇಟ್ಟುಕೊಂಡು ಸುಲಭವಾಗಿ ಕರ್ಪೂರವನ್ನು ತಯಾರಿಸಬಹುದು. ಈ ಕರ್ಪೂರ ತಯಾರಿಕೆಯಿಂದ ನೀವು ಒಂದು ದಿನದಲ್ಲಿ 2,000 ಹಣವನ್ನು ಗಳಿಸುವ ಅವಕಾಶವಿದೆ. ಇದರಿಂದಾಗಿ ತಿಂಗಳಿನಲ್ಲಿ ಹೆಚ್ಚು ಆದಾಯವನ್ನು ಗಳಿಸಬಹುದು.

Camphor Business Profit
Image Credit: India Mart

Join Nadunudi News WhatsApp Group