Canara Bank 25 Lakh Home Loan EMI: ಮಧ್ಯಮ ವರ್ಗದ ಜನರಿಗೆ ಮನೆಯನ್ನು ಕಟ್ಟುವುದು ಅಥವಾ ಖರೀದಿಸುವುದು ದೊಡ್ಡ ಕನಸಾಗಿರುತ್ತದೆ. ಈ ಕನಸನ್ನು ಈಡೇರಿಸಿಕೊಳ್ಳುವ ಸಲುವಾಗಿ ಗೃಹ ಸಾಲವನ್ನು ಪಡೆದುಕೊಳ್ಳುತ್ತಾರೆ. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಗೃಹ ಸಾಲದ ಬಡ್ಡಿದರದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಯಾವ ಬ್ಯಾಂಕ್ ಕಡಿಮೆ ಬಡ್ಡಿಗೆ ಗೃಹ ಸಾಲವನ್ನು ನೀಡುತ್ತಿದೆ ಎಂದು ತಿಳಿದುಕೊಂಡು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದು ಉತ್ತಮ. ಮೂಲದಿಂದ ತಿಳಿದುಬಂದ ಮಾಹಿತಿ ಪ್ರಕಾರ, ಕೆನರಾ ಬ್ಯಾಂಕ್ ಕಡಿಮೆ ಬಡ್ಡಿದರ ಮತ್ತು ಸುಲಭ ಅರ್ಹತೆ ಮೂಲಕ ಸಾಲ ನೀಡುತ್ತದೆ. ಹಾಗಾದರೆ ಕೆನರಾ ಬ್ಯಾಂಕಿನಲ್ಲಿ ಅಂದಾಜಿಗೆ 25 ಲಕ್ಷ ರೂಪಾಯಿ ಗೃಹಸಾಲ ಮಾಡಿದರೆ ತಿಂಗಳ EMI ಎಷ್ಟು ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಕೆನರಾ ಬ್ಯಾಂಕ್ ಗೃಹ ಸಾಲ
ಕೆನರಾ ಬ್ಯಾಂಕ್ 5 ರಿಂದ 30 ವರ್ಷಗಳ ವರೆಗೆ ಗೃಹ ಸಾಲವನ್ನು ನೀಡುತ್ತದೆ. ಇನ್ನು ಕೆನರಾ ಬ್ಯಾಂಕ್ ನ ಗೃಹ ಸಾಲದ ಬಡ್ಡಿದರ ಸುಮಾರು 7.15% ನಿಂದ ಆರಂಭವಾಗುತ್ತದೆ. ಬಡ್ಡಿದರಗಳು ಸಾಮಾನ್ಯವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಆದಾಯಕ್ಕೆ ತಕ್ಕಂತೆ ಬದಲಾವಣೆ ಆಗುತ್ತದೆ ಹಾಗಾಗಿ ಬಡ್ಡಿದರ ಸರಾಸರಿ 8.5% ನಿಂದ ಆರಂಭವಾಗುತ್ತದೆ. https://canarabank.bank.in/housing-loan ವೆಬ್ ಸೈಟ್ ಗೆ ಭೇಟಿನೀಡುವ ಮೂಲಕ ಬಡ್ಡಿದರ ತಿಳಿದುಕೊಂಡು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇದೀಗ ನಾವು ಕೆನರಾ ಬ್ಯಾಂಕ್ ನಲ್ಲಿ 25 ಲಕ್ಷ ಗೃಹ ಸಾಲ ಪಡೆದುಕೊಳ್ಳಲು ಎಷ್ಟು ಸಂಬಳ ಪಡೆಯುತ್ತಿರಬೇಕು ಹಾಗೆ ತಿಂಗಳಿಗೆ ಎಷ್ಟು EMI ಪಾವತಿ ಮಾಡಬೇಕು ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳೋಣ.
25 ಲಕ್ಷ ಗೃಹ ಸಾಲಕ್ಕೆ ಸಂಬಳ ಎಷ್ಟಿರಬೇಕು ಮತ್ತು EMI ಎಷ್ಟಾಗುತ್ತದೆ..?
ಕೆನರಾ ಬ್ಯಾಂಕ್ ನ ಪ್ರಸ್ತುತ ಗೃಹ ಸಾಲ ಬಡ್ಡಿದರ ಸುಮಾರು 8.5% ರಿಂದ ಶುರುವಾಗುತ್ತದೆ. 25 ಲಕ್ಷ ಸಾಲಕ್ಕೆ 20 ರಿಂದ 30 ವರ್ಷ ಆಯ್ಕೆ ಮಾಡಿದರೆ EMI ಕಡಿಮೆ ಬರುತ್ತದೆ. ಆದರೆ ಒಟ್ಟು ಬಡ್ಡಿ ಹೆಚ್ಚಾಗುತ್ತದೆ. ಇದು ಅಂದಾಜು ಲೆಕ್ಕಾಚಾರ ಅಷ್ಟೇ, ಸಾಲ ಪಡೆದುಕೊಳ್ಳುವ ಮುನ್ನ ಬ್ಯಾಂಕ್ ನ ಅಧಿಕೃತ EMI ಕ್ಯಾಲ್ಕುಲೇಟರ್ ಬಳಸಿ ಲೆಕ್ಕಾಚಾರ ಮಾಡಿ.
- 25 ಲಕ್ಷ ಸಾಲವನ್ನು 8.5 % ಬಡ್ಡಿದರದಲ್ಲಿ 20 ವರ್ಷ ಅವಧಿಗೆ ತೆಗೆದುಕೊಂಡರೆ ತಿಂಗಳಿಗೆ ಸುಮಾರು 21,700 ರೂ. EMI ಪಾವತಿ ಮಾಡಬೇಕಾಗುತ್ತದೆ. ಈ ಸಾಲಕ್ಕೆ ಕನಿಷ್ಠ 40,000 ರಿಂದ 50,000 ರೂ. ತಿಂಗಳಿಗೆ ಸಂಬಳ ಪಡೆದುಕೊಳ್ಳಬೇಕು.
- 25 ಲಕ್ಷ ಸಾಲವನ್ನು 8.5 % ಬಡ್ಡಿದರದಲ್ಲಿ 30 ವರ್ಷ ಅವಧಿಗೆ ತೆಗೆದುಕೊಂಡರೆ ತಿಂಗಳಿಗೆ ಸುಮಾರು 19,200 ರೂ. EMI ಪಾವತಿ ಮಾಡಬೇಕಾಗುತ್ತದೆ. ಈ ಸಾಲಕ್ಕೆ ಕನಿಷ್ಠ 35,000 ರಿಂದ 45,000 ರೂ. ತಿಂಗಳಿಗೆ ಸಂಬಳ ಪಡೆದುಕೊಳ್ಳಬೇಕು.
Canara Bank ಸಾಲಕ್ಕೆ ಅಗತ್ಯ ದಾಖಲೆಗಳು
- ಪಾನ್ ಕಾರ್ಡ್
- ಆಧಾರ್ ಕಾರ್ಡ್
- ಭಾವಚಿತ್ರ
- ಆಸ್ತಿ ದಾಖಲೆಗಳು
- ಯುಟಿಲಿಟಿ ಬಿಲ್ ಅಥವಾ ರೆಂಟ್ ಅಗ್ರಿಮೆಂಟ್
- ಕಳೆದ 3-6 ತಿಂಗಳ ಸಂಬಳ ಸ್ಲಿಪ್
- ಬ್ಯಾಂಕ್ ಪಾಸ್ ಬುಕ್
- ಸ್ವಯಂ ಉದ್ಯೋಗಿಗಳು ಹೆಚ್ಚುವರಿಯಾಗಿ, IT Returns, Balance Sheet ನೀಡಬೇಕು.
ಆನ್ಲೈನ್ ಮೂಲಕ ಈ ರೀತಿಯಾಗಿ ಅರ್ಜಿ ಸಲ್ಲಿಸಿ
- ಮೊದಲು https://www.canarabank.bank.in/ ಗೆ ಭೇಟಿ ನೀಡಿ
- ಮೊಬೈಲ್ ನಂಬರ್ ಹಾಕಿ ನಂತರ OTP ನಮೂದಿಸಬೇಕು
- ವಯಕ್ತಿಕ ದಾಖಲೆ, ಉದ್ಯೋಗ, ಆದಾಯ ವಿವರವನ್ನು ಭರ್ತಿ ಮಾಡಬೇಕು
- ನಂತರ ದಾಖಲೆಗಳನ್ನು ಅಪ್ಲೋಡ್ ಮಾಡಿ KYC ಪೂರ್ಣಗೊಳಿಸಬೇಕು
- ನಿಮಗೆ 24 ರಿಂದ 48 ಗಂಟೆಗಳಲ್ಲಿ ಸಾಲ ಮಂಜೂರಾತಿ ಪತ್ರ ಬರುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

