Account Minimum Balance: ಕೆನರಾ ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಹೊಸ ರೂಲ್ಸ್, ಇನ್ಮುಂದೆ ಖಾತೆಯಲ್ಲಿ ಇಷ್ಟು ಹಣ ಇರಲೇಬೇಕು
ಕೆನರಾ ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಹೊಸ ರೂಲ್ಸ್
Canara Bank Account Minimum Balance: ಸಾಮಾನ್ಯವಾಗಿ ಎಲ್ಲರು ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದಿರುತ್ತಾರೆ. ಖಾತೆಗಳನ್ನು ತೆರೆಯುದರ ಜೊತೆಗೆ ಅದರ ನಿರ್ವಹಣೆ ಮಾಡುವುದು ಕೂಡ ಮುಖ್ಯವಾಗಿರುತ್ತದೆ. Account ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರಿಸುದು ಅತಿ ಅಗತ್ಯವಾಗಿದೆ. Minimum Balance ಇಲ್ಲದ ಖಾತೆಗಳಿಗೆ ಎಲ್ಲಾ ಬ್ಯಾಂಕುಗಳು ದಂಡ ವಿಧಿಸುತ್ತವೆ.
ಇನ್ನು ದೇಶದಲ್ಲಿ ಕೋಟ್ಯಾಂತರ ಜನರು ಕೆನರಾ ಬ್ಯಾಂಕ್ ನಲ್ಲಿ ತಮ್ಮ ಖಾತೆಯನ್ನು ತೆರೆದಿರುತ್ತಾರೆ. ಕೆನರಾ ಬ್ಯಾಂಕ್ ಖಾತೆದಾರರು ಕೂಡ ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡುವುದು ಅಗತ್ಯವಾಗಿದೆ. ಸದ್ಯ ನಾವೀಗ ಈ ಲೇಖನದಲ್ಲಿ ಕೆನರಾ ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ ನ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕೆನರಾ ಬ್ಯಾಂಕಿನಲ್ಲಿ ಖಾತೆ ಇದ್ದವರಿಗೆ ಹೊಸ ರೂಲ್ಸ್
Saving Bank Account ನಲ್ಲಿ ಹಣವು Minimum Balance ಕ್ಕಿಂತ ಕಡಿಮೆ ಇದ್ದಾಗ ಬ್ಯಾಂಕ್ ಗಳು ಏಕಾಏಕಿ ದಂಡ ವಿಧಿಸುವಂತಿಲ್ಲ. ಈ ಸಂದರ್ಭದಲ್ಲಿ ಗ್ರಾಹಕರಿಗೆ SMS ಅಥವಾ Email ಮೂಲಕ ಸಂದೇಶ ಕಳುಹಿಸಬೇಕು. ಹಾಗೆ Minimum Balance ತುಂಬಲು ಗ್ರಾಹಕರಿಗೆ ಒಂದು ತಿಂಗಳುಗಳ ಕಾಲ ಸಮಯಾವಕಾಶವನ್ನು ನೀಡಬೇಕು. ನಂತರ ದಂಡವನ್ನು ಹಾಕಬಹುದು ಎಂದು RBI 2014ರಲ್ಲಿ ರೂಪಿಸಿದ ನಿಯಮದಲ್ಲಿ ಸ್ಪಷ್ಟಪಡಿಸಿದೆ.
ಇದಲ್ಲದೆ ಎಲ್ಲಾ ಪ್ರಕರಣದಲ್ಲೂ ಒಂದೇ ರೀತಿಯ ದಂಡ ವಿಧಿಸುವಂತಿಲ್ಲ. ಕನಿಷ್ಠ ಮೊತ್ತಕ್ಕಿಂತ ಎಷ್ಟು ಕಡಿಮೆ ಇದೆ ಎಂದು ತಿಳಿದು ಅದಕ್ಕೆ ಅನುಗುಣವಾದ ದಂಡವನ್ನು ವಿಧಿಸಬೇಕು ಎಂದು RBI ನಿಯಮ ಹೇಳುತ್ತದೆ.
ಇನ್ಮುಂದೆ ಖಾತೆಯಲ್ಲಿ ಇಷ್ಟು ಹಣ ಇರಲೇಬೇಕು
ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಪ್ರತಿಯೊಬ್ಬರೂ ಕೂಡ ಮಿನಿಮಮ್ ಬ್ಯಾಲನ್ಸ್ ನಿರ್ವಹಣೆ ಮಾಡುವುದು ಅಗತ್ಯವಾಗಿದೆ. ಕೆನರಾ ಬ್ಯಾಂಕ್ ಕೂಡ ತನ್ನ ಗ್ರಾಹಕರಿಗೆ ಮಿನಿಮಮ್ ಬ್ಯಾಲನ್ಸ್ ಕಾಯ್ದಿರಿಸುವಲ್ಲಿ ನಿಯಮವನ್ನು ರೂಪಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಕೆನರಾ ಬ್ಯಾಂಕ್ ಖಾತೆ ಹೊಂದಿರುವವರು ಮಿನಿಮಮ್ ಬ್ಯಾಲೆನ್ಸ್ ಆಗಿ 500 ರೂ. ಹಾಗೂ ನಗರ ಪ್ರದೇಶದಲ್ಲಿ ಖಾತೆ ಹೊಂದಿರುವವರು 1000 ರೂ. ಮಿನಿಮಿಮ್ ಬ್ಯಾಲೆನ್ಸ್ ನಿರ್ವಹಿಸಬೇಕಾಗಿದೆ.