Car Modification: ಹೊಸ ಕಾರ್ ಖರೀದಿಸುವವರಿಗೆ ಹೊಸ ಟ್ರಾಫಿಕ್ ನಿಯಮ, ಈ ತಪ್ಪು ಮಾಡಿದರೆ ಕಾರ್ ಸೀಜ್ ಜೊತೆಗೆ ದಂಡ.
ಕಾರ್ ಮಾಡಿಫಿಕೇಷನ್ ಮಾಡುವವರಿಗೆ ಸರ್ಕಾರದಿಂದ ಹೊಸ ನಿಯಮ.
Car Modification Rules In India: ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಲೇ ಇರುತ್ತದೆ. ಮಾರುಕಟ್ಟೆಯಲ್ಲಿ ಹೊಸ ಕಾರ್ ಪರಿಚಯವಾಗುತ್ತಿದ್ದಂತೆ ಎಲ್ಲರು ಖರೀದಿಸಲು ಬಯಸುತ್ತಾರೆ.
ಇನ್ನು ಕೆಲವೊಮ್ಮೆ ಕಾರ್ ಗಳನ್ನೂ ಮೋಡಿಫೈ ಮಾಡುವುದು ಇದ್ದೆ ಇರುತ್ತದೆ. ಈ ಕಾರ್ ಗಳ ಮೋಡಿಫಿಕೇಷನ್ ಗೆ ಅದರದ್ದೇ ಆದ ನಿಯಮಗಳಿವೆ. ಇದೀಗ ಕಾರ್ ನ ಮೋಡಿಫಿಕೇಷನ್ ಕುರಿತು ಒಂದಿಷ್ಟು ಮಾಹಿತಿ ತಿಳಿಯೋಣ.
ಭಾರತದಲ್ಲಿ ಕಾರುಗಳನ್ನು ಮಾರ್ಪಡಿಸುವುದು ಕಾನೂನುಬದ್ಧವಾಗಿದೆಯೇ?
ವಿದೇಶಗಳಲ್ಲಿ ಕಾರುಗಳನ್ನು ಮಾರ್ಪಡಿಸುವುದು ತುಂಬಾ ಸಾಮಾನ್ಯವಾದ ವಿಷಯ. ಹಾಗೆಯೆ ಭಾರತದಲ್ಲಿಯೂ ಹೆಚ್ಚು ಮಾರ್ಪಡಿಸಿದ ಅನೇಕ ಕಾರುಗಳನ್ನು ನೋಡಬಹುದಾಗಿದೆ. ಆದರೆ ಕಾರುಗಳನ್ನು ಮಾರ್ಪಡಿಸುವುದು (Modification) ಕಾನೂನುಬದ್ಧವಾಗಿದೆಯೇ? ಎನ್ನುವ ಪ್ರಶ್ನೆ ಉತ್ತರ ಸಾಕಷ್ಟು ಜನರಿಗೆ ತಿಳಿದಿಲ್ಲ.
ಇನ್ನು ಭಾರತದಲ್ಲಿ ಕಾರುಗಳನ್ನು ಮಾರ್ಪಡಿಸುವುದು ಕಾನೂನುಬದ್ಧವಾಗಿದೆಯೇ? ಅಥವಾ ಕಾನೂನುಬಾಹಿರವೇ? ಎನ್ನುವುದು ಗೊಂದಲದ ಪ್ರಶ್ನೆಯಾಗಿದೆ. ತೆರಿಗೆ ಬದಲಾವಣೆಯ ನಿಯಮಗಳು ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿವೆ. ದೆಹಲಿಯಲ್ಲಿ ಕಾರನ್ನು ಮೋಡಿಫೈ ಮಾಡಲು ಸಾಧ್ಯವಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಕಾರನ್ನು ಸ್ವಲ್ಪ ಮಟ್ಟಿಗೆ ಮಾರ್ಪಡಿಸಬಹುದು. ಆದಾಗ್ಯೂ, ಎಲ್ಲರೂ ಮಾಡುವ ಕೆಲವು ಸಾಮಾನ್ಯ ಮಾರ್ಪಾಡುಗಳಿವೆ ಮತ್ತು ಅದು ಭಾರೀ ದಂಡಕ್ಕೆ ಗೆ ಕಾರಣವಾಗಬಹುದು.
ಈ ತಪ್ಪು ಮಾಡಿದರೆ ಕಾರ್ ಸೀಜ್ ಜೊತೆಗೆ ದಂಡ
*Number plate modification
ಫ್ಯಾನ್ಸಿ ನಂಬರ್ ಪ್ಲೇಟ್ ಗಳಿರುವುದು ಸರ್ವೇಸಾಮಾನ್ಯ. ಹಳ್ಳಿಯಿಂದ ನಗರಕ್ಕೆ, ನೀವು ಅನೇಕ ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳಲ್ಲಿ ಇಂತಹ ವಿಚಿತ್ರ ನಂಬರ್ ಪ್ಲೇಟ್‌ಗಳನ್ನು ನೋಡುತ್ತೀರಿ. ಇದು ಕಾನೂನುಬಾಹಿರವಾಗಿದ್ದು, ನೀವು ಸಿಕ್ಕಿಬಿದ್ದರೆ, ಪೊಲೀಸರು ನಿಮಗೆ ಚಲನ್ ನೀಡಬಹುದು.
*Crash Guard Is Illegal
ಕಾರಿನ ಮುಂಭಾಗದಲ್ಲಿ ಬುಲ್ ವಾರ್ ಅಥವಾ ಕ್ರ್ಯಾಶ್ ಕಾರ್ಡ್ ಇರುವುದು ತುಂಬಾ ಸಾಮಾನ್ಯವಾಗಿತ್ತು. ಇದು ಪ್ರಯಾಣಿಕರಿಗೆ ಅಸುರಕ್ಷಿತ ಎನ್ನುವ ಕಾರಣಕ್ಕೆ ಸುಪ್ರೀಂ ಕೋರ್ಟ್ ಇದನ್ನು ಕಾನೂನುಬಾಹಿರ ಎಂದು ಘೋಷಿಸಿದೆ. ಕ್ರ್ಯಾಶ್ ಗಾರ್ಡ್ ನಲ್ಲಿ ಬಂಪರ್ ಮೇಲೆ ಯಾವುದೇ ಒತ್ತಡ ಇರಲಿಲ್ಲ ಮತ್ತು ಏರ್ ಬ್ಯಾಗ್ ಗಳನ್ನು ನಿಯೋಜಿಸದಿರುವ ಕಾರಣ ಕ್ರ್ಯಾಶ್ ಗಾರ್ಡ್ ಅಕ್ರಮವಾಗಿದೆ.