Car Price Hike: ಹೊಸ ಕಾರ್ ಖರೀದಿ ಮಾಡುವವರಿಗೆ ಬೇಸರದ ಸುದ್ದಿ, ಈ ಕಾರುಗಳ ಬೆಲೆ ಹೆಚ್ಚಳ.

ಹೊಸ ಕಾರ್ ಖರೀದಿ ಮಾಡುವವರಿಗೆ ಬೇಸರದ ಸುದ್ದಿ

Car Price Hike In India: ಸದ್ಯ ದೇಶದಲ್ಲಿ ವಸ್ತುಗಳ ಬೆಲೆ ಒಂದೊಂದಾಗಿಯೇ ಹೆಚ್ಚಾಗುತ್ತಿದೆ. ಜನಸಾಮಾನ್ಯರು ಬೆಲೆ ಏರಿಕೆಯ್ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ. ಸದ್ಯ ಭಾರತೀಯ ಆಟೋ ವಲಯದಲ್ಲಿ ಕೂಡ ಈ ಬೆಲೆ ಏರಿಕೆ ಬಿಸಿ ತಲುಪಿದೆ. ಕಾರ್ ತಯಾರಕ ಕಂಪನಿಗಳು ಕೂಡ ತನ್ನ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸುತ್ತಿದೆ.

ಹೌದು, ಶೀಘ್ರದಲ್ಲೇ ಕಾರ್ ಗಳ ಬೆಲೆಯಲ್ಲಿ ಏರಿಕೆ ದಾಖಲಗಲಿದೆ. ನೀವು ಕಾರ್ ಖರೀದಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ ಆದಷ್ಟು ಬೇಗ ಕಾರ್ ಅನ್ನು ಖರೀದಿಸುವುದು ಉತ್ತಮ. ಏಕೆಂದ್ರೆ ಇನ್ನೂ ಕೆಲವೇ ತಿಂಗಳಿನಲ್ಲಿ ದೇಶದಲ್ಲಿ ಮಾರಾಟವಾಗುವ ಎಲ್ಲ ಕಾರ್ ಗಳ ಬೆಲೆ ಹೆಚ್ಚಾಗಲಿದೆ.

Car Price Hike In India
Image Credit: Business-Standard

ಹೊಸ ಕಾರ್ ಖರೀದಿ ಮಾಡುವವರಿಗೆ ಬೇಸರದ ಸುದ್ದಿ
ಪ್ರತಿ ವರ್ಷ ಕಾರುಗಳ ಬೆಲೆಗಳು ಹೆಚ್ಚಾಗುತ್ತವೆ ಮತ್ತು ಈ ಬೆಲೆ ಏರಿಕೆಯ ಹಿಂದೆ ಹಲವು ಕಾರಣಗಳಿವೆ. ಕಾರ್ಪೊರೇಟ್ ಸರಾಸರಿ ಇಂಧನ ದಕ್ಷತೆಯ ಮಾನದಂಡಗಳ ಅಡಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಕಾರ್ಬನ್ ಹೊರಸೂಸುವಿಕೆಯನ್ನು ಮೂರನೇ ಒಂದು ಭಾಗದಷ್ಟು ಕಡಿತಗೊಳಿಸಬೇಕು ಅಥವಾ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ವಿಧಿಸುವ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಭಾರತದ ಇಂಧನ ದಕ್ಷತೆ ಮತ್ತು ಸಂರಕ್ಷಣಾ ಸಂಸ್ಥೆ ಒತ್ತಾಯಿಸುತ್ತಿದೆ.

ಭಾರತದ ಎನರ್ಜಿ ಎಫಿಶಿಯೆನ್ಸಿ ಮತ್ತು ಕನ್ಸರ್ವೇಶನ್ ಏಜೆನ್ಸಿಯು ಭಾರತ್ ಸ್ಟೇಜ್ 6 ಅನ್ನು ಏಪ್ರಿಲ್ 2020 ರಲ್ಲಿ ಜಾರಿಗೊಳಿಸಿತು. ಭಾರತ್ ಸ್ಟೇಜ್ 6 RDE ಅನ್ನು ಏಪ್ರಿಲ್ 2023 ರಲ್ಲಿ ಅಳವಡಿಸಲಾಯಿತು. ಭಾರತ್ ಸ್ಟೇಜ್ 6 ಮತ್ತು ಭಾರತ್ ಸ್ಟೇಜ್ 6 RDE ಪ್ರಾಥಮಿಕವಾಗಿ ಕಾರುಗಳ ನೈಜ-ಸಮಯದ ಹೊರಸೂಸುವಿಕೆಯನ್ನು ಪರಿಶೀಲಿಸುತ್ತದೆ. ಈಗ ಅದು ಕೆಫೆ 3 ಮತ್ತು ಕೆಫೆ 4 ಎಮಿಷನ್ ಮಾನದಂಡಗಳನ್ನು ತಂದಿದೆ.

Car Price Hike News
Image Credit: Mypunepulse

ಈ ಕಾರುಗಳ ಬೆಲೆ ಹೆಚ್ಚಳ
ಕೆಫೆ 3 ಮಾನದಂಡಗಳನ್ನು ಏಪ್ರಿಲ್ 2027 ರಿಂದ ಜಾರಿಗೆ ತರಲಾಗುವುದು. ಇದಕ್ಕಾಗಿ, ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಉದ್ಯಮದ ಪಾಲುದಾರರನ್ನು ಜುಲೈ ಮೊದಲ ವಾರದೊಳಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸುವಂತೆ ಕೇಳಿದೆ, ನಂತರ ಅಂತಿಮ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು.

Join Nadunudi News WhatsApp Group

ಈ ಹೊಸ ನಿಯಮಗಳು ಕಾರಿನ ಇಂಧನ ದಕ್ಷತೆಯನ್ನು 100 ಕಿ.ಮೀಗೆ 0.2 ಲೀಟರ್ ಹೆಚ್ಚಿಸಿದರೆ, ಪ್ರತಿ ವಾಹನದ ಮೇಲೆ 25 ಸಾವಿರ ರೂ. ಹೆಚ್ಚಾಗುತ್ತದೆ. ಮತ್ತೊಂದೆಡೆ, ಇಂಧನ ಕ್ಷಮತೆ ಇದಕ್ಕಿಂತ ಉತ್ತಮವಾಗಿದ್ದರೆ, ಹೆಚ್ಚಳವು 50 ಸಾವಿರ ರೂಪಾಯಿಗಳಿಗೆ ಏರಬಹುದು. ಈ ಕೆಫೆ ನಿಯಮಗಳು ಎಲ್ಲಾ ಕಾರು ತಯಾರಕರಿಗೆ ಅನ್ವಯಿಸುತ್ತವೆ.

Car Price Hike New Update
Image Credit: Times Bull

Join Nadunudi News WhatsApp Group