RC Transfer Rules In India: ದೆಹಲಿಯ ಕೆಂಪುಕೋಟೆಯ ಬಳಿ ಕಾರ್ ಸ್ಪೋಟವಾದ ನಂತರ ಸರ್ಕಾರ ಈಗ ಸಾಕಷ್ಟು ಎಚ್ಛೆತ್ತುಕೊಂಡಿದೆ. ದೆಹಲಿ ಕೆಂಪುಕೋಟೆಯ ಮೆಟ್ರೋ ನಿಲ್ದಾಣದ ಬಳಿ ಕಾರ್ ಸ್ಪೋಟವಾಗಿ ಸುಮಾರು 10 ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡರೆ, ಹಲವರು ತೀವ್ರವಾದ ಗಾಯದಿಂದ ಆಸತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.ಈ ಸ್ಪೋಟದ ಹಿಂದೆ ಉಗ್ರರ ಕೈವಾಡ ಇದ್ದು ಸದ್ಯ ಅಧಿಕಾರಿಗಳು ಅವರ ಹುಡುಕಾಟದಲ್ಲಿದ್ದಾರೆ. ಈ ನಡುವೆ ಕಾರುಗಳ ಮಾಲೀಕರು ಕೆಲವು ಎಚ್ಚರಿಕೆಯನ್ನು ಕೊಡಲಾಗಿದೆ. ಇನ್ನುಮುಂದೆ ಕಾರ್ ಮಾರಾಟ ಮಾಡುವವರು ಮತ್ತು ಸೆಕೆಂಡ್ ಹ್ಯಾಂಡ್ ಕಾರ್ ಖರೀದಿ ಮಾಡುವವರು ಈ ಮಾಲೀಕತ್ವ ವರ್ಗಾವಣೆ ಕೆಲಸವನ್ನು ತಕ್ಷಣವೇ ಮಾಡಬೇಕು.
ವಾಹನದ ಮಾಲೀಕತ್ವ ವರ್ಗಾವಣೆ ಅಂದರೆ ಏನು?
ಯಾವುದೇ ಕಾರ್ ಅಥವಾ ಯಾವುದೇ ವಾಹನ ಮಾರಾಟವಾದ ನಂತರ ಆ ವಾಹನದ ಮಾಲೀಕತ್ವ ವರ್ಗಾವಣೆ ಮಾಡುವುದು ಕಡ್ಡಾಯವಾಗಿದೆ. ಮಾಲೀಕತ್ವ ವರ್ಗಾವಣೆ ಆಗದೆ ಅಪಘಾತ, ಸಂಚಾರ ನಿಯಮ ಉಲ್ಲಂಘನೆ ಅಥವಾ ಬೇರೆ ಯಾವುದೇ ಕಾನೂನು ಬಾಹಿರ ಕೆಲಸ ಆ ವಾಹನದ ಮೂಲಕ ಮಾಡಿದರೆ ವಾಹನ ಮೂಲ ಮಾಲೀಕ ಆ ತಪ್ಪಿಗೆ ಹೊಣೆಯಾಗುತ್ತಾನೆ. ಈ ಕಾರಣಗಳಿಂದ ವಾಹನ ಮಾರಾಟ ಮಾಡಿದ ನಂತರ ಅದರ ಮಾಲೀಕತ್ವ ವರ್ಗಾವಣೆ ಕೆಲಸ ತಪ್ಪದೆ ಮಾಡಬೇಕು.
ಮಹನದ ಮಾಲೀಕತ್ವ ವರ್ಗಾವಣೆ ಕಡ್ಡಾಯ ಏಕೆ?
ಭಾರತದಲ್ಲಿ ಮೋಟಾರು ವಾಹನ ಕಾಯ್ದೆ 1988 ರ ಸೆಕ್ಷನ್ 50 ಪ್ರಕಾರ, ಕಾರು ಮಾರಾಟವಾದ 14 ದಿನಗಳ ಒಳಗೆ ಹೊಸ ಮಾಲೀಕರ ಹೆಸರಿಗೆ RC ವರ್ಗಾವಣೆ ಮಾಡಬೇಕು. ಈ ನಿಯಮ ಎಲ್ಲಾ ವಾಹನಗಳಿಗೆ, ಅಂದರೆ ಬೈಕ್, ಕಾರ್, ಆಟೋ ರಿಕ್ಷಾ, ಬಸ್, ಲಾರಿ ಸೇರಿದಂತೆ ಎಲ್ಲಾ ವಾಹನಗಳಿಗೆ ಅನ್ವಯ ಆಗಲಿದೆ. ಹಳೆಯ ಮಾಲೀಕ ಮತ್ತು ಹೊಸ ಮಾಲೀಕ ಇಬ್ಬರು ಕೂಡ Form 29 ಮತ್ತು Form 30 ಅನ್ನು ತುಂಬಿ RTO ಗೆ ಸಲ್ಲಿಸಬೇಕು. ಒಂದುವೇಳೆ ಈ ಕೆಲಸ ಮಾಡದೆ ಇದ್ದರೆ ಆ ವಾಹನ ಹಳೆಯ ಮಾಲೀಕನ ಸೇರಿನಲ್ಲೇ ಮುಂದುವರೆಯಲಿದೆ.
ಎದುರಿಸಬೇಕಾದ ಸಮಸ್ಯೆಗಳು ಏನು?
ವಾಹನ ಮಾರಾಟವಾದ ನಂತರ ಮಾಲೀಕತ್ವ ವರ್ಗಾವಣೆ ಮಾಡದೆ ಇದ್ದರೆ ಕೆಲವು ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ. ಮೊದಲನೆಯದಾಗಿ, ಹೊಸ ಮಾಲೀಕ ವಾಹನವನ್ನು ಬಳಸುತ್ತಿದ್ದರೂ, ಎಲ್ಲಾ ತೆರಿಗೆ, ಇನ್ಶೂರೆನ್ಸ್ ಮತ್ತು PUC ಸಂಬಂಧಿತ ಸಮಸ್ಯೆಗಳು ಹಳೆಯ ಮಾಲೀಕರ ಹೆಸರಿನಲ್ಲಿ ಉಳಿದುಕೊಳ್ಳುತ್ತೆ ಮತ್ತು ವಾಹನಕ್ಕೆ ಅಪಘಾತವಾದಾಗ ವಾಹನದ ಹಳೆಯ ಮಾಲೀಕನ ಮನೆಗೆ ಪೊಲೀಸ್ ಅಥವಾ ನ್ಯಾಯಾಲಯದ ನೋಟೀಸ್ ಬರುತ್ತೆ.
ವಾಹನದ ಮಾಲೀಕತ್ವ ವರ್ಗಾವಣೆ ಮಾಡುವ ವಿಧಾನ
* ಯಾವುದೇ ವಾಹನ ಮಾರಾಟವಾದ ತಕ್ಷಣ ಮಾರಾಟ ಮಾಡುವವರು ಮತ್ತು ಖರೀದಿ ಮಾಡುವವರು Form 29 (ನೋಟೀಸ್) ಮತ್ತು Form 30 (ಅರ್ಜಿ) ಭರ್ತಿಮಾಡಿ ಸಹಿ ಮಾಡಬೇಕು
* RC, ಇನ್ಶೂರೆನ್ಸ್, PUC, NOC ಸೇರಿದಂತೆ ವಾಹನಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಯನ್ನು RTO ಕಚೇರಿಗೆ ಕೊಡಬೇಕು.
* ಆಯಾ ರಾಜ್ಯಕ್ಕೆ ಅನುಸರಿಸುವಂತೆ RTO ಶುಲ್ಕ ಪಾವತಿ ಮಾಡಬೇಕು
* ವಾಹನದ ಹೊಸ ಮಾಲೀಕರಿಗೆ ಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ಹೊಸ RC ಪೋಸ್ಟ್ ಮೂಲಕ ಕಳುಹಿಸಲಾಗುತ್ತದೆ.
ದೆಹಲಿ ಸ್ಪೋಟದಲ್ಲಿ ಆಗಿದೆ ಇದೆ ತಪ್ಪು
ದೆಹಲಿ ಕಾರ್ ಸ್ಪೋಟದಲ್ಲಿ ಕೂಡ ಇದೆ ತಪ್ಪಾಗಿದೆ. ಕಾರಿನ ಹಳೆಯ ಮಾಲೀಕ ಕಾರಣ ಮಾಡಿದ್ದು ಇನ್ನೂ ಕೂಡ ಕಾರ್ ಹೊಸ ಮಾಲೀಕನ ಹೆಸರಿಗೆ ವರ್ಗಾವಣೆ ಆಗಿಲ್ಲ. ಸದ್ಯ ಹಳೆಯ ಮಾಲೀಕ ಈಗ ಎಲ್ಲಾ ತಪ್ಪಿಗೆ ಹೊಣೆ ಹೊರಬೇಕಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

