Card Tokenization: ATM ಕಾರ್ಡ್ ಮತ್ತು ಕ್ರೆಡಿಟ್ ಬಳಸುವವರಿಗೆ ಇಂದಿನಿಂದ ಹೊಸ ಸೇವೆ ಆರಂಭ, RBI ಘೋಷಣೆ.
RBI ATM ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಹೊಸ ಸೌಲಭ್ಯವನ್ನು ಪರಿಚಯಿಸಲು ಮುಂದಾಗಿದೆ.
Card-On-File Tokenization Facility: Reserve Bank Of India October ನಲ್ಲಿ ಮತ್ತೆ Repo ದರವನ್ನು ಪರಿಷ್ಕರಿಸಿದೆ. ಸದ್ಯ ದೇಶದಲ್ಲಿನ ಹಣದುಬ್ಬರತೆಯ ಪರಿಸ್ಥಿಯನ್ನು ಗಮನದಲ್ಲಿಸಿಕೊಂಡು RBI ತನ್ನ Repo ದರದಲ್ಲಿ ಸ್ಥಿರತೆ ಕಂಡುಕೊಂಡಿದೆ. ಸದ್ಯ ದೇಶದಲ್ಲಿ Repo ದರ 6.50 ರಷ್ಟಿದೆ. ರೆಪೋ ದರ ಯಥಾಸ್ಥಿತಿಯಲ್ಲಿರುವ ಬಗ್ಗೆ RBI ಗವರ್ನರ್ ಶಕ್ತಿಕಾಂತ್ ದಾಸ್ (Shaktikanta Das) ಮಾಹಿತಿ ನೀಡಿದ್ದಾರೆ.
ಸದ್ಯ ದೇಶದ್ಲಲಿ ರೆಪೋ ದರವನ್ನು ಪರಿಷ್ಕರಿಸಿದ ಬೆನ್ನಲ್ಲೇ RBI ಇದೀಗ ATM ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಹೊಸ ಸೌಲಭ್ಯವನ್ನು ಪರಿಚಯಿಸಲು ಮುಂದಾಗಿದೆ. RBI ನ ಈ ಹೊಸ ಸೌಲಭ್ಯ ಕೋಟ್ಯಾಂತರ ಬಳಕೆದಾರರಿಗೆ ಸಹಾಯವಾಗಲಿದೆ.
ATM ಕಾರ್ಡ್ ಮತ್ತು ಕ್ರೆಡಿಟ್ ಬಳಸುವವರಿಗೆ ಇಂದಿನಿಂದ ಹೊಸ ಸೇವೆ ಆರಂಭ
ಇದೀಗ RBI ದೇಶದಲ್ಲಿ Card-On-File Tokenization ಅಥವಾ ಬ್ಯಾಂಕ್ ಮಟ್ಟದಲ್ಲಿ ಟೋಕನ್ ರಚನೆಯ ಸೌಲಭ್ಯವನ್ನು ವಿಸ್ತರಿಸಿದೆ. ಇದು ಮರ್ಚೆಂಟ್ ಅಪ್ಲಿಕೇಶನ್ ಗಳು ಅಥವಾ ವೆಬ್ ಸೈಟ್ ನಲ್ಲಿ ಮಾತ್ರ ಲಭ್ಯವಾಗಲಿದೆ. ಅಂದರೆ ಗ್ರಾಹಕರು ತಮ್ಮ ಕಾರ್ಡ್ ಗಳನ್ನೂ ಮರ್ಚೆಂಟ್ ಗಳ ಮೂಲಕ ಟೋಕನೈಸ್ ಮಾಡುವ ಬದಲಾಗಿ ನೇರವಾಗಿ ತಮ್ಮ ಪಿನ್ ಗಳೊಂದಿಗೆ ಟೋಕನೈಸ್ ಮಾಡಬಹುದಾಗಿದೆ. ಈ ಟೋಕನೈಸಷನ್ ಪ್ರಕ್ರಿಯೆಯು ಗ್ರಾಹಕರಿಗೆ ಹೆಚ್ಚು ಅನುಕೂಲ ಮಾಡಿಕೊಡಲಿದೆ.
ಟೋಕನೈಸೇಷನ್ ಹೇಗೆ ಕಾರ್ಯನಿರ್ವಹಿಸಲಿದೆ..?
ಟೋಕನೈಸೇಷನ್ ಎನ್ನುವುದು ಕಾರ್ಡ್ ನ 16 ಅಂಕಿಯ ಸಂಖ್ಯೆಯನ್ನು ಯುನಿಕ್ ಕಾರ್ಡ್ ಸಂಖ್ಯೆ ಅಥವಾ ಟೋಕನ್ ನೊಂದಿಗೆ ಬದಲಾಯಿಸುವ ಪ್ರಕ್ರಿಯೆಯಾಗಿದೆ. ನಿಜವಾದ ಕಾರ್ಡ್ ಸಂಖ್ಯೆಯನ್ನು ಬಹಿರಂಗಪಡಿಸದೆ ಪಾವತಿಗಳನ್ನು ಮಾಡಲು ಈ ಟೋಕನ್ ಅನ್ನು ಬಳಸಬಹುದು. ಇದು ಆನ್ಲೈನ್ ಪಾವತಿಯನ್ನು ಮಾಡಲು ಟೋಕನೈಸೇಷನ್ ಅನ್ನು ಹೆಚ್ಚು ಸುರಕ್ಷಿತ ಮಾರ್ಗವನ್ನಾಗಿ ಮಾಡುತ್ತದೆ. ವ್ಯಾಪಾರಿಗಳಿಗೆ ಟೋಕನೈಸೇಷನ್ ವಂಚನೆ ಮತ್ತು ಚಾರ್ಜ್ ಬ್ಯಾಕ್ ಗಳನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ.