Ads By Google

Cardless Cash Withdrawal: ATM ನಲ್ಲಿ UPI ಬಳಸಿ ಹಣ ಪಡೆಯುವುದು ಹೇಗೆ…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

UPI ATM Facility in india

Image Credit: Original Source

Ads By Google

Cardless Cash Withdrawal By Using UPI: ಪ್ರಸ್ತುತ ದೇಶದಲ್ಲಿ ಎಲ್ಲ ರೀತಿಯ ಹಣದ ವಹಿವಾಟುಗಳು ಡಿಜಿಟಲ್ ಆಗುತ್ತಿದೆ ಎನ್ನಬಹುದು. ಈ ಹಿಂದೆ ಮಾಡಲಾಗುತ್ತಿದ್ದ ಹಣದ ವಹಿವಾಟುಗಳಿಗೆ ಹೋಲಿಸಿದರೆ ಪ್ರಸ್ತುತ ಹಣದ ವಹಿವಾಟುಗಳು ಬಹ ಸುಲಭವಾಗಿದೆ. ಹಣದ ವಹಿವಾಟುಗಳು ಸುಲಭಗೊಳ್ಳಲು ಪ್ರಮುಖ ಕಾರಣವೆಂದರೆ ಅದು UPI ಅಪ್ಲಿಕೇಶನ್ ಗಳು.

ಹೌದು, UPI ಅಪ್ಲಿಕೇಶನ್ ಗಳು ಬಂದ ಮೇಲೆ ದೇಶದಲ್ಲಿ ನಗದು ರಹಿತ ವಹಿವಾಟು ಹೆಚ್ಚುತ್ತಿದೆ ಎನ್ನಬಹುದು. ಈಗಂತೂ ಅನೇಕ ಫೀಚರ್ ಗಳನ್ನೂ ನೀವು UPI ವಹಿವಾಟಿನಲ್ಲಿ ನೋಡಬಹುದು. ಸದ್ಯ UPI ಅಪ್ಲಿಕೇಶನ್ ATM Card ನ ಕೆಲಸವನ್ನು ಕೂಡ ಕಡಿಮೆ ಮಾಡಲಿದೆ. ಹೌದು, ಇನ್ನುಮುಂದೆ ನೀವು ATM ಕಾರ್ಡ್ ಇಲ್ಲದೆಯೂ ಕೂಡ ATM ನಲ್ಲಿ ಹಣವನ್ನು ಪಡೆಯಬಹುದು.

Image Credit: Entrackr

ಇನ್ನುಮುಂದೆ ಹಣ ತೆಗೆಯಲು ATM ಕಾರ್ಡ್ ನ ಅಗತ್ಯ ಇಲ್ಲ
ಇನ್ನುಮುಂದೆ Google Pay, Paytm, PhonePe ಮೂಲಕ ನೀವು ATM Card ಇಲ್ಲದೆ ಹಣವನ್ನು ಪಡೆಯಬಹುದು. Union Bank Of India ಮತ್ತು NPCI ಸಹಯೋಗದೊಂದಿಗೆ UPI ATM ಕಾರ್ಡ್ ರಹಿತ ನಗದು ಹಿಂಪಡೆಯುವ ಯಂತ್ರವನ್ನು ಮಾಡಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಇಂಟರ್ ಆಪರೇಬಲ್ ಕಾರ್ಡ್ ಲೆಸ್ ಕ್ಯಾಶ್ ಹಿಂಪಡೆಯುವಿಕೆಯ ವೈಶಿಷ್ಟ್ಯವನ್ನು ಪರಿಚಯಿಸಲಿದೆ.

ಇದರಿಂದಾಗಿ ಜನರು ತಮ್ಮ UPI Application ಅನ್ನು ಬಳಸಿಕೊಂಡು ಎಟಿಎಂ ನ ಮೂಲಕ ಹಣವನ್ನು ಪಡೆಯಬಹುದು. ATM ಮಷಿನ್ UPI ವಿಥ್ ಡ್ರಾ ಸೇವೆಯ ಆಯ್ಕೆಯನ್ನು ಹೊಂದಿರಬೇಕು. ಒಂದು ದಿನದಲ್ಲಿ ಗರಿಷ್ಟ 5000 ರೂ ಹಣವನ್ನು ಹಾಗೂ ಒಂದು ದಿನದಲ್ಲಿ ಎರಡು ವಹಿವಾಟುಗಳನ್ನು ಮಾಡಲು ಮಾತ್ರ ಅನುಮತಿ ಇರುತ್ತದೆ. ಅಂದರೆ ಕಾರ್ಡ್ ಲೆಸ್ ಕ್ಯಾಶ್ ಹಿಂಪಡೆಯುವಿಕೆಯ ವೈಶಿಷ್ಟ್ಯವನ್ನು ಬಳಸಿಕೊಂಡು 10000 ರೂ ಹಣವನ್ನು ಪಡೆಯಬಹುದು.

Image Credit: Jaihindjanab

ATM ನಲ್ಲಿ UPI ಬಳಸಿ ಹಣ ಪಡೆಯುವುದು ಹೇಗೆ…?
•ಗ್ರಾಹಕರು ಎಟಿಎಂನಲ್ಲಿ ‘ಯುಪಿಐ ನಗದು ವಿತ್ ಡ್ರಾವಲ್’ ಆಯ್ಕೆಯನ್ನು ಆರಿಸಿದಾಗ, ಅವರು ಹಿಂಪಡೆಯಲು ಬಯಸುವ ಮೊತ್ತವನ್ನು ನಮೂದಿಸಲು ಅದು ಅವರನ್ನು ಕೇಳುತ್ತದೆ.

•ಗ್ರಾಹಕರು ಬಯಸಿದ ಮೊತ್ತವನ್ನು ನಮೂದಿಸಿದ ನಂತರ, ATM ಪರದೆಯ ಮೇಲೆ ವಿಶಿಷ್ಟ ಡೈನಾಮಿಕ್ QR ಕೋಡ್ (ಸಹಿ) ಕಾಣಿಸಿಕೊಳ್ಳುತ್ತದೆ.

•ವಹಿವಾಟು ಮುಂದುವರಿಸಲು, ಗ್ರಾಹಕರು ಈ QR ಕೋಡ್ ಅನ್ನು ಸ್ಕ್ಯಾನ್ ಮಾಡಲು ಯಾವುದೇ UPI ಅಪ್ಲಿಕೇಶನ್ ಅನ್ನು ಬಳಸಬಹುದು.

•ಸ್ಕ್ಯಾನ್ ಮಾಡಿದ ನಂತರ, ಗ್ರಾಹಕರು ಎಟಿಎಂನಿಂದ ಹಣವನ್ನು ಹಿಂಪಡೆಯಲು UPI ಅಪ್ಲಿಕೇಶನ್ ಅನ್ನು ಬಳಸಿಕೊಂಡು ತಮ್ಮ ಮೊಬೈಲ್ ಸಾಧನದಲ್ಲಿ UPI ಪಿನ್ ಅನ್ನು ನಮೂದಿಸುವ ಮೂಲಕ ವಹಿವಾಟನ್ನು ದೃಢೀಕರಿಸಬೇಕು.

Image Credit: TV9hindi
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in