Cargo Service: ಇನ್ನುಮುಂದೆ KSRTC ಬಸ್ಸುಗಳ ಜೊತೆಗೆ ರಸ್ತೆಗೆ ಬರಲಿದೆ KSRTC ಇನ್ನೊಂದು ವಾಹನ, ಸರ್ಕಾರದ ಹೊಸ ಪ್ಲ್ಯಾನ್.
ಬಸ್ಸುಗಳ ಸೇವೆಯ ಜೊತೆಗೆ ಇನ್ನೊಂದು ಸೇವೆ ಆರಂಭಮಾಡಲು ಮುಂದಾದ KSRTC.
KSRTC Cargo Service In KSRTC: ರಾಜ್ಯದಲ್ಲಿ ಕಾಂಗ್ರೆಸ್(Congress) ಸರ್ಕಾರದ ಅಧಿಕಾರವಧಿಯಿಂದ ಐದು ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರ ಬ್ಯುಸಿ ಆಗಿದೆ. ಈಗಾಗ್ಲೇ ರಾರ್ಜ್ಯದಲ್ಲಿ ಕಾಂಗ್ರೆಸ್ ನ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಯೋಜನೆಗಳು ಅನುಷ್ಠಾನಗೊಂಡು ಇನ್ನು ಕೇವಲ ಯುವ ನಿಧಿ ಯೋಜನೆ ಅನುಷ್ಠಾನಕ್ಕೆ ಬಾಕಿ ಇದೆ.
ಯುವ ನಿಧಿ ಯೋಜನೆ ಕೂಡ ಸದ್ಯದ್ಲಲೇ ಜಾರಿಯಾಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಯೋಜಾನೆಗಳ ಅನುಷ್ಠಾನಕ್ಕೆ ಸರ್ಕಾರ ಸಾವಿರ ಕೋಟಿ ಹಣ ಹಣ ಖರ್ಚು ಮಾಡುತ್ತಿದೆ. ಉಚಿತ ಭಾಗ್ಯಗಳ ಅನುಷ್ಠಾನದ ಕಾರಣ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಹೊರೆ ಎದುರಾಗಿದೆ ಎಂದರೆ ತಪ್ಪಾಗಲಾರದು.
ಆದಾಯ ಹೆಚ್ಚಿಸಿಕೊಳ್ಳಲು ಸಾರಿಗೆ ಇಲಾಖೆ ಹೊಸ ಪ್ಲಾನ್
ಇನ್ನು ರಾಜ್ಯದಲ್ಲಿ ಮೊದಲು ಮಹಿಳೆಯರ ಉಚಿತ ಪ್ರಯಾಣಕ್ಕಾಗಿ Shakti Yojane ಜಾರಿಯಾಗಿತ್ತು. ಈ ಯೋಜನೆಯ ಜಾರಿಯಿಂದಾಗಿ ಸಾಕಷ್ಟು ಹಣ ಖರ್ಚಾಗಿತ್ತು. ಅದರಲ್ಲೂ KSRTC ಬಸ್ಸುಗಳ ಆದಾಯ ಶಕ್ತಿ ಯೋಜನೆಗಳಿಂದಾಗಿ ಕಡಿಮೆ ಆಗಿದೆ.
ಇದೀಗ ಸಾರಿಗೆ ಇಲಾಖೆ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಹೊಸ ಉಪಾಯವನ್ನು ಹೂಡಿದೆ. ಇನ್ನುಮುಂದೆ KSRTC ಬಸ್ಸುಗಳ ಜೊತೆಗೆ KSRTC ಇನ್ನೊಂದು ವಾಹನ ಕೂಡ ರಸ್ತೆಗಿಳಿಯಲಿದೆ. ಈ ಮೂಲಕ ಸರ್ಕಾರದ ಯೋಜನೆಗಳಿಂದ ಉಂಟಾದ ನಷ್ಟದ ಪ್ರಮಾಣವನ್ನು ಭರಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ಇನ್ನುಮುಂದೆ KSRTC ಬಸ್ಸುಗಳ ಜೊತೆಗೆ ರಸ್ತೆಗೆ ಬರಲಿದೆ KSRTC ಇನ್ನೊಂದು ವಾಹನ
ಇನ್ನುಮುಂದೆ ರಾಜ್ಯದಲ್ಲಿ KSRTC ಬಸ್ಸುಗಳ ಜೊತೆಗೆ KSRTC ಯಿಂದ Cargo Service ಗಾಗಿ KSRTC ಲಾರಿಗಳನ್ನು ಪರಿಚಯಿಸಲು ಸಾರಿಗೆ ಇಲಾಖೆ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ Cargo Service ನೀಡಲು 20 ಟ್ರಕ್ ಗಳನ್ನು ಖರೀದಿಸಲು ಇಲಾಖೆ ಮುಂದಾಗಿದೆ. ಈ ಮೂಲಕ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾರಿಗೆ ಇಲಾಖೆ KSRTC ಲಾರಿಗಳನ್ನು ರಸ್ತೆಗಿಳಿಸಲಿದೆ.