Saving Account Rule: ಇನ್ಮುಂದೆ ಇಷ್ಟು ಹಣವನ್ನ ಮಾತ್ರ ಉಳಿತಾಯ ಖಾತೆಯಲ್ಲಿ ಇಡಬಹುದು, ಹೊಸ ತೆರಿಗೆ ನಿಯಮ ಜಾರಿ.
ಇನ್ಮುಂದೆ ಇಷ್ಟು ಹಣವನ್ನ ಮಾತ್ರ ಉಳಿತಾಯ ಖಾತೆಯಲ್ಲಿ ಇಡಬಹುದು
Cash Deposit Limit In Saving Account: ಸಾಮಾನ್ಯವಾಗಿ ಬ್ಯಾಂಕ್ ಗಳಲ್ಲಿ ಗ್ರಾಹಕರು ಹೆಚ್ಚಾಗಿ Saving Account ತೆರೆಯುತ್ತಾರೆ. ಉಳಿತಾಯ ಖಾತೆಯು ಪ್ರಾಥಮಿಕ ಖಾತೆಯಾಗಿದೆ. ಉಳಿತಾಯ ಖಾತೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ಬಡ್ಡಿ ದೊರೆಯಲಿದೆ. ಈ ಕಾರಣಕ್ಕೆ ಹೆಚ್ಚಿನ ಜನರು ಉಳಿತಾಯ ಖಾತೆಯನ್ನೇ ಆರಿಸುತ್ತಾರೆ.
ಇನ್ನು ಉಳಿತಾಯ ಖಾತೆಯಲ್ಲಿ ಹೊಂದಬಹುದಾದ ಮೊತ್ತಕ್ಕೂ ಕೂಡ ಆದಾಯ ಇಲಾಖೆಯು ಮಿತಿಯನ್ನು ವಿಧಿಸಿದೆ. ಉಳಿತಾಯ ಖಾತೆಯಲ್ಲಿ ಖಾತೆದಾರರು ಎಷ್ಟು ಹಣವನ್ನು ಠೇವಣಿ ಮಾಡಬಹುದು ಎನ್ನುವುದಕ್ಕೆ ಆದಾಯ ಇಲಾಖೆಯು ಪ್ರತ್ಯೇಕ ನಿಯಮವನ್ನು ಪರಿಚಯಿಸಿದೆ. ಉಳಿತಾಯ ಖಾತೆಯಲ್ಲಿ ಠೇವಣಿ ಇಡಬಹುದಾದ ಮೊತ್ತಕ್ಕೆ ಆದಾಯ ಇಲಾಖೆ ಯಾವ ರೀತಿಯ ನಿಯಮ ರೂಪಿಸಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಇನ್ಮುಂದೆ ಇಷ್ಟು ಹಣವನ್ನ ಮಾತ್ರ ಉಳಿತಾಯ ಖಾತೆಯಲ್ಲಿ ಇಡಬಹುದು
ಉಳಿತಾಯ ಖಾತೆಯಲ್ಲಿ ಇರಿಸಬಹುದಾದ ಹಣಕ್ಕೆ RBI ಯಾವುದೇ ಮಿತಿಯನ್ನು ನೀಡಿಲ್ಲ. ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಬೇಕಾದರೂ ಇರಿಸಬಹುದಾಗಿದೆ. ಆದರೆ ನೀವು ITR ಸಲ್ಲಿಸುತ್ತಿದ್ದರೆ ಉಳಿತಾಯ ಖಾತೆಯ ಎಲ್ಲ ವಿವರವನ್ನು ನೀಡಬೇಕಾಗುತ್ತದೆ. ಆದಾಯ ಇಲಾಖೆಯು ನಿಮ್ಮ ಖಾತೆಯಲ್ಲಿ ಹೆಚ್ಚಿನ ಹಣ ಇದ್ದರೆ ಅದಕ್ಕೆ ಸರಿಯಾದ ದಾಖಲೆಯನ್ನು ಕೇಳುತ್ತದೆ.
ತೆರಿಗೆ ಇಲಾಖೆಯು ಹಣಕಾಸು ವರ್ಷದಲ್ಲಿ 10 ಲಕ್ಷ ರೂ. ಗಿಂತ ಹೆಚ್ಚಿನ ನಗದು ಠೇವಣಿಯ ಬಗ್ಗೆ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಿದೆ. ಈ ಮಿತಿಯು FDs, Mutual Funds, Bonds and Shares ಗಳಲ್ಲಿನ ಹೂಡಿಕೆಗಳಿಗೂ ಅನ್ವಯಿಸುತ್ತದೆ. ಉಳಿತಾಯ ಖಾತೆಯಲ್ಲಿ ಪಡೆದ ಬಡ್ಡಿಯ ಮೇಲೆ ತೆರಿಗೆಯನ್ನು ಸಹ ಪಾವತಿಸಬೇಕಾಗುತ್ತದೆ. ನಿಮ್ಮ ಉಳಿತಾಯ ಖಾತೆಯಲ್ಲಿ ಎಷ್ಟು ಬಡ್ಡಿಯನ್ನು ಸ್ವೀಕರಿಸಲಾಗಿದೆ ಎಂಬುದರ ಕುರಿತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ.
ಹೊಸ ತೆರಿಗೆ ನಿಯಮ ಜಾರಿ
*ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80TTA ಅಡಿಯಲ್ಲಿ ಆರ್ಥಿಕ ವರ್ಷದಲ್ಲಿ ಉಳಿತಾಯ ಖಾತೆಯಲ್ಲಿ ಗಳಿಸಿದ 10,000 ರೂ. ವರೆಗಿನ ಬಡ್ಡಿಗೆ ಸಾಮಾನ್ಯ ಜನರಿಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.
*ಬಡ್ಡಿ ಮೊತ್ತ ಇದಕ್ಕಿಂತ ಹೆಚ್ಚಾದರೆ ತೆರಿಗೆ ಕಟ್ಟಬೇಕಾಗುತ್ತದೆ. ಆದರೆ, ಹಿರಿಯ ನಾಗರಿಕರಿಗೆ 50 ಸಾವಿರ ರೂ. ತೆರಿಗೆ ಮಿತಿ ನೀಡಲಾಗಿದೆ.
*ದೇಶದ ಪ್ರಮುಖ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳು ಉಳಿತಾಯ ಖಾತೆಗಳ ಮೇಲೆ 2.70 ಪ್ರತಿಶತದಿಂದ 4 ಪ್ರತಿಶತದವರೆಗೆ ಬಡ್ಡಿಯನ್ನು ನೀಡುತ್ತಿವೆ.
*ಇನ್ನು 10 ಕೋಟಿ ರೂ. ವರೆಗಿನ ಬ್ಯಾಲೆನ್ಸ್ ಹೊಂದಿರುವ ಉಳಿತಾಯ ಖಾತೆಯ ಮೇಲಿನ ಬಡ್ಡಿ ದರ ಶೇ. 2.70 ಆಗಿದೆ. ಅನೇಕ ಸಣ್ಣ ಹಣಕಾಸು ಬ್ಯಾಂಕ್ ಗಳು ಷರತ್ತುಗಳೊಂದಿಗೆ ಉಳಿತಾಯ ಖಾತೆಗಳ ಮೇಲೆ 7 ಪ್ರತಿಶತದ ವರೆಗೆ ಬಡ್ಡಿಯನ್ನು ನೀಡುತ್ತಿವೆ.