Cash Payment Limit : ಹೊಸ ಆಸ್ತಿ ಮತ್ತು ಮನೆ ಖರೀದಿ ಮಾಡುವವರಿಗೆ ಕೇಂದ್ರದಿಂದ ಹೊಸ ನಿಯಮ, ಈ ರೀತಿ ಹಣ ಕೊಡುವಂತಿಲ್ಲ.

ಆಸ್ತಿಯನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಇರುವ ನಗದು ವಹಿವಾಟಿನ ನಿಯಮ.

Cash Payment Limit In Property Purchase: ಆಸ್ತಿ ಖರೀದಿಯು ಒಂದು ರೀತಿಯಲ್ಲಿ ಉತ್ತಮ ಹೂಡಿಕೆ ಎನ್ನಬಹುದು. ಉಳಿತಾಯ ಯೋಜನೆ, ಮ್ಯೂಚುವಲ್ ಫಂಡ್ ಯೋಜನೆ, ಚಿನ್ನದ ಮೇಲಿನ ಹೂಡಿಕೆಗಿಂತ ಆಸ್ತಿ ಖರೀದಿಸಿ (Property Purchase) ಹಣವನ್ನು ಉಳಿಸುವುದು ಹೆಚ್ಚಿನ ಲಾಭವನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ಜನರು ಹೆಚ್ಚಾಗಿ ತಮ್ಮ ಬಳಿ ಇರುವ ಹಣವನ್ನು ಆಸ್ತಿ ಖರೀದಿಗೆ ವ್ಯಯಿಸಲು ಬಯಸುತ್ತಾರೆ. ಇನ್ನು ಭಾರತೀಯ ಕಾನೂನಿನಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳಿವೆ.

Cash Payment Limit In Property Purchase
Image Credit: Indiafilings

ಹೊಸ ಆಸ್ತಿ ಮತ್ತು ಮನೆ ಖರೀದಿ ಮಾಡುವವರಿಗೆ ಕೇಂದ್ರದಿಂದ ಹೊಸ ನಿಯಮ
ಆಸ್ತಿ ಖರೀದಿಯಲ್ಲಿ ಯಾವುದೇ ರೀತಿಯ ಸಣ್ಣ ತಪ್ಪಾದರೂ ಕೂಡ ಆಸ್ತಿ ಕೈ ತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ಏಕೆಂದರೆ ಇತ್ತೀಚಿಗೆ ಆಸ್ತಿ ನೋಂದಣಿ ವಿಚಾರವಾಗಿ ಸಾಕಷ್ಟು ವಂಚನೆಗಳು ನಡೆಯುತ್ತಿವೆ. ಇನ್ನು ಆಸ್ತಿಯನ್ನು ಖರೀದಿಸಲು ಅಥವಾ ಮಾರಾಟ ಮಾಡಲು ನೀವು ನಗದು ವಹಿವಾಟಿನ ನಿಯಮಗಳನ್ನು ತಿಳಿದಿರಬೇಕು. ಆಸ್ತಿ ವ್ಯವಹಾರಗಳಲ್ಲಿ ನಗದು ಬಳಕೆಗೆ ಸಂಬಂಧಿಸಿದಂತೆ ಸರ್ಕಾರವು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಿದೆ. ನೀವು ಆಸ್ತಿಯಲ್ಲಿ ನಗದು ಪಾವತಿಯ ಮಿತಿಯ ಬಗ್ಗೆ ಮಾಹಿತಿ ತಿಳಿಯದೆ ಆಸ್ತಿಯ ಖರೀದಿ ಅಥವಾ ಮಾರಾಟ ಮಾಡಿದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಆಸ್ತಿ ಖರೀದಿಯಲ್ಲಿ ನಗದು ಪಾವತಿಯ ಮಿತಿ
ಆಸ್ತಿ ಖರೀದಿ ಅಥವಾ ಮಾರಾಟಕ್ಕೂ ಮುನ್ನ ಆಸ್ತಿಯ ನಿಯಮದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಆಸ್ತಿ ಖರೀದಿಯಲ್ಲಿ ಹೆಚ್ಚಿನ ಜನರು ನಗದು ವ್ಯವಹರಕ್ಕೆ ಮುಂದಾಗುತ್ತಾರೆ. ಆಸ್ತಿಯ ಸಂಪೂರ್ಣ ಬೆಲೆಯನ್ನು ನಗದು ರೂಪದಲ್ಲಿ ಪಾವತಿಸುವುದು ಒಂದು ರೀತಿಯಲ್ಲಿ ಅಪಾಯವನ್ನುಂಟುಮಾಡಬಹುದು. ಆಸ್ತಿ ಖರೀದಿಯಲ್ಲಿ ನಗದು ವಹಿವಾಟಿನ ಮಿತಿ ದಾಟಿದರೆ ಆದಾಯ ಇಲಾಖೆ ಅಂತಹ ವಹಿವಾಟಿನ ವಿರುದ್ಧ ವಿರುದ್ಧ ಕ್ರಮ ಕೈಗೊಳ್ಳುತ್ತದೆ.

Property Purchase
Image Credit: Housing

ಆಸ್ತಿ ಖರೀದಿಯಲ್ಲಿ ನಗದು ಪಾವತಿಯ ಮಿತಿ ಎಷ್ಟಿದೆ ಗೊತ್ತಾ..?
ನೀವು ಎಷ್ಟೇ ಆಸ್ತಿ ಖರೀದಿ ಮಾಡಿದರೂ 19,999 ರೂ.ಗಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ತೆಗೆದುಕೊಳ್ಳುವಂತಿಲ್ಲ. ಇದಕ್ಕಾಗಿ 2015 ರಲ್ಲಿ ಆದಾಯ ತೆರಿಗೆ ಕಾಯಿದೆಯ 269SS, 269T, 271D ಮತ್ತು 271E ಸೆಕ್ಷನ್‌ ಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಈ ಪೈಕಿ 269SS ನಲ್ಲಿ ಮಾಡಿದ ಬದಲಾವಣೆಯು ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸಿದರೆ ಹೆಚ್ಚಿನ ದಂಡ ಪಾವತಿಸಬೇಕಾಗುತ್ತದೆ. ದೇಶದಲ್ಲಿನ ಅಕ್ರಮ ಹಣದ ವಹಿವಾಟಿನ ತೆಡೆಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ನಿಯಮ ಉಲ್ಲಂಘಿಸಿದರೆ ಇಷ್ಟು ದಂಡ ಪಾವತಿಸಬೇಕು
ಇನ್ನು ಸೆಕ್ಷನ್ 269 SS ಅಡಿಯಲ್ಲಿ ಒಬ್ಬ ವ್ಯಕ್ತಿಯು ಭೂಮಿಯನ್ನು ಮನೆ ಅಥವಾ ಇತರ ಸ್ಥಿರ ಆಸ್ತಿಯನ್ನು ಮಾರಾಟ ಮಾಡಲು 20,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ತೆಗೆದುಕೊಂಡರೆ ಆ ಸಮಯದಲ್ಲಿ ಶೇಕಡಾ 100 ರಷ್ಟು ದಂಡವನ್ನು ವಿಧಿಸಲಾಗುತ್ತದೆ. ನಗದು ವಹಿವಾಟಿನ ಸಂಪೂರ್ಣ ಮೊತ್ತವನ್ನು ಪರಿಹಾರವಾಗಿ ಪಾವತಿಸಬೇಕಾಗುತ್ತದೆ.

Join Nadunudi News WhatsApp Group

Join Nadunudi News WhatsApp Group