Tax Update: ಇನ್ನುಮುಂದೆ ಈ 5 ಹಣದ ವ್ಯವಹಾರ ಮಾಡಿದರೆ ಕಟ್ಟಬೇಕು ತೆರಿಗೆ, ತೆರಿಗೆ ಇಲಾಖೆಯ ಹೊಸ ನಿಯಮ.

ನಗದು ವ್ಯವಹಾರ ಮಾಡುವ ಮುನ್ನ ತೆರಿಗೆ ನಿಯಮ ತಿಳಿಯುದು ಉತ್ತಮ.

Cash Transaction New Rule: ಸದ್ಯ ದೇಶದಲ್ಲಿ Online Payment ಹೆಚ್ಚುತ್ತಿದೆ ಎನ್ನಬಹುದು. ಮೊಬೈಲ್ ಮೂಲಕವೇ ಎಲ್ಲ ರೀತಿಯ ವಹಿವಾಟುಗಳು ನಡೆಯುತ್ತಿವೆ. ಆನ್ಲೈನ್ ಪಾವತಿಗಳು ಬಂದ ಕಾರಣ ಜನರು ಹೆಚ್ಚಾಗಿ ಕೈಯಲ್ಲಿ ನಗದು ಹಣವನ್ನು ಇರಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದಾರೆ ಎನ್ನಬಹುದು.

ಆದರೂ ಕೂಡ ಕೆಲ ಜನರು ನಗದು ವಹಿವಾಟು ನಡೆಸುತ್ತಾರೆ. ಸದ್ಯ ಆದಾಯ ಕೆಲ ನಗದು ವ್ಯವಹಾರಗಳಿಗೂ ಕೂಡ ನಿಯಮವನ್ನು ರೂಪಿಸಿದೆ. ಆದಾಯ ಇಲಾಖೆಯು ಈ ಐದು ನಗದು ವಹಿವಾಟಿಗೆ ತೆರಿಗೆಯನ್ನು ವಿಧಿಸಿದೆ. ನೀವು ನಗದು ವ್ಯವಹಾರ ಮಾಡುವ ಮುನ್ನ ಈ ನಿಯಮದ ಬಗ್ಗೆ ತಿಳಿದುಕೊಳ್ಳಿ.

Cash Transaction New Rule
Image Credit: Rightsofemployees

ಇನ್ನುಮುಂದೆ ಈ 5 ನಗದು ವ್ಯವಹಾರ ಮಾಡಿದರೆ ಕಟ್ಟಬೇಕು ತೆರಿಗೆ
*FD Investment
ಒಂದು ವರ್ಷದಲ್ಲಿ ನೀವು ಎಫ್ ಡಿಯಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಒಂದಕ್ಕಿಂತ ಹೆಚ್ಚು ಬಾರಿ ಠೇವಣಿ ಮಾಡಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ.

*Bank Deposit
ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಒಂದಕ್ಕಿಂತ ಹೆಚ್ಚು ಬಾರಿ ಠೇವಣಿ ಮಾಡಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ. ಇನ್ನು ಚಾಲ್ತಿ ಖಾತೆಯಲ್ಲಿ ಗರಿಷ್ಠ ಮಿತಿ 50 ಲಕ್ಷ ರೂ. ಆಗಿದೆ.

Cash Transaction Latest News
Image Credit: Taxconcept

*Credit Card Bill
ಇನ್ನು 1 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಕ್ರೆಡಿಟ್ ಕಾರ್ಡ್ ಬಿಲ್ ಆಗಿ ಠೇವಣಿ ಮಾಡಿದರೆ ಹಾಗೂ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಾವತಿಸಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ.

Join Nadunudi News WhatsApp Group

*Property Transaction
ನೀವು 30 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ನಗದು ರೂಪದಲ್ಲಿ ಖರೀದಿಸಿದರೆ ಅಥವಾ ಮಾರಾಟ ಮಾಡಿದರೆ, ಆಸ್ತಿ ರಿಜಿಸ್ಟ್ರಾರ್ ಪರವಾಗಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಹೋಗುತ್ತದೆ.

Cash Transaction latest update
Image Credit: Taxconcept

*Mutual Fund Investment
ಷೇರುಗಳು, ಮ್ಯೂಚುವಲ್ ಫಂಡ್‌ಗಳು, ಡಿಬೆಂಚರ್‌ ಗಳು ಮತ್ತು ಬಾಂಡ್‌ ಗಳಲ್ಲಿ ದೊಡ್ಡ ನಗದು ವಹಿವಾಟುಗಳನ್ನು ನಡೆಸುವಂತಿಲ್ಲ. ಆರ್ಥಿಕ ವರ್ಷದಲ್ಲಿ ಗರಿಷ್ಟ 10 ಲಕ್ಷದ ವರೆಗೆ ಮಾತ್ರ ಠೇವಣಿ ಮಾಡಬಹುದಾಗಿದೆ.

Join Nadunudi News WhatsApp Group