Cashless Treatment: ಇನ್ನುಮುಂದೆ ಆಸ್ಪತ್ರೆಗಳಲ್ಲಿ ಹಣ ಕೊಡುವ ಅಗತ್ಯ ಇಲ್ಲ, ದೇಶದಲ್ಲಿ ಜಾರಿಗೆ ಬಂತು ಇನ್ನೊಂದು ಸೇವೆ.

ಎಲ್ಲಾ ಆಸ್ಪತ್ರೆಗಳಲ್ಲಿಯೂ ಲಭ್ಯವಾಗಲಿದೆ ನಗದು ರಹಿತ ಚಿಕಿತ್ಸೆ.

Cashless Treatment In Hospital: ಸದ್ಯ ದೇಶದಲ್ಲಿ Life Insurance Corporation Of India ಜನರ ಜೀವನದ ಭದ್ರತೆಗಾಗಿ ವಿವಿಧ ವಿಮಾ ಸೌಲಭ್ಯವನ್ನು ನೀಡುತ್ತಿದೆ. ಇನ್ನು ದೇಶದಲ್ಲಿ ಅನೇಕ ಬಡ ಜನರು ಆರೋಗ್ಯ ಸಮೆಸ್ಯೆಯಿಂದ ಸಾವನ್ನಪ್ಪುತ್ತಾರೆ. ಆರೋಗ್ಯ ಸುಧಾರಿಸಿಕೊಳ್ಳಲು ಹಣ ಇಲ್ಲದೆ ಅದೆಷ್ಟೋ ಜನ ಅನಾರೋಗ್ಯದಿಂದಲೇ ಬಳಲಿ ಮರಣ ಹೊಂದಿರುವ ಸಾಕಷ್ಟು ಘಟನೆಗಳಿವೆ. ಈ ನಿಟ್ಟಿನಲ್ಲಿ ಸರ್ಕಾರ ಜನರ ಆರೋಗ್ಯ ರಕ್ಷಣೆಗೆಂದು ವಿವಿಧ ಯೋಜನೆಯನ್ನು ಪರಿಚಯಿಸುತ್ತಿದೆ.

cashless service in hospital
Image Credit: reuters

ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ಇನ್ನು Government Hospital ಗಳಲ್ಲಿ ಬಡ ಜನರಿಗಾಗಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಕೆಲ ಜನರಿಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಇದ್ದರೆ ಆ ಸಮಯದಲ್ಲಿ ಖಾಸಗಿ ಆಸ್ಪ್ರತೆಯಲ್ಲಿ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯಲು ಸಾಕಷ್ಟು ಹಣ ಬೇಕಾಗುತ್ತದೆ.

ಹೀಗಾಗಿ ಆಸ್ಪತ್ರೆಗೆ ಬೇಕಾಗುವ ಖರ್ಚನ್ನು ನೀಡಲಾಗದೆ ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಕೇಂದ್ರ ಸರ್ಕಾರ ವೈದ್ಯಕೀಯ ವೆಚ್ಛಕೆ ನಗದು ರಹಿತ ಪರಿಹಾರ ನೀಡಲು ನಿರ್ಧರಿಸಿದೆ. ಇದರ ಜೊತೆ ವಿಮೆಯ ಹೂಡಿಕೆಯ ಮೊತ್ತವನ್ನು ಕೂಡ ಕಡಿಮೆ ಮಾಡಲು ಚಿಂತನೆ ನಡೆಸುತ್ತಿದೆ.

ಎಲ್ಲಾ ಆಸ್ಪತ್ರೆಗಳಲ್ಲಿಯೂ ಲಭ್ಯವಾಗಲಿದೆ ನಗದು ರಹಿತ ಚಿಕಿತ್ಸೆ
Insurance Regulatory and Development Authority of India (IRDAI) ವೈದ್ಯಕೀಯ ವೆಚ್ಚದ ಕ್ಲೈಮ್‌ಗಳಿಗಾಗಿ 100 ಪ್ರತಿಶತ ನಗದು ರಹಿತ ಪರಿಹಾರಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಚಿಕಿತ್ಸೆಯ ನಂತರ 100 ಪ್ರತಿಶತದಷ್ಟು ನಗದು ರಹಿತ ವೆಚ್ಚವನ್ನು ಪಡೆಯಲು ಸಾಧ್ಯವಾಗುವಂತೆ ಶೀಘ್ರದಲ್ಲೇ ಕಾರ್ಯಗತಗೊಳಿಸಬಹುದು.

cashless transaction in indian all hospital
Image Credit: Original Source

ಇನ್ನುಮುಂದೆ ಚಿಕಿತ್ಸೆಗಾಗಿ ಒಂದು ರೂ. ಕೂಡ ಖರ್ಚು ಮಾಡುವ ಅಗತ್ಯ ಇರುವುದಿಲ್ಲ. ಶೀಘ್ರದಲ್ಲೇ ದೇಶದ ಬಡ ಜನರು ಉಚಿತ ಚಿಕಿತ್ಸಾ ಸೌಲಭ್ಯವನ್ನು ಪಡೆಯಬಹುದಾಗಿದೆ. IRDAI 100 % Cashless Claim ಗೆ ಸಂಪೂರ್ಣ ಸಿದ್ಧತೆ ನಡೆಸುತ್ತಿದೆ.

Join Nadunudi News WhatsApp Group

ಆರೋಗ್ಯ ವಿಮೆಯಲ್ಲಿ ಬಾರಿ ಬದಲಾವಣೆ
ನಗದು ರಹಿತ ಚಿಕಿತ್ಸೆಯ ಜೊತೆಗೆ ವಯಸ್ಸಾದವರಿಗೆ ವಿಮೆಯನ್ನು ಕೈಗೆಟುಕುವಂತೆ ಮಾಡುವ ಕೆಲಸವನ್ನು ಸಹ ಮಾಡಲಾಗುತ್ತಿದೆ. ಪ್ರಸ್ತುತ ಹಿರಿಯ ನಾಗರಿಕರಿಗೆ ವಿಮೆ ತುಂಬಾ ದುಬಾರಿಯಾಗಿದೆ. ಮತ್ತೊಂದೆಡೆ ವಿಮಾ ಕಂಪನಿಗಳು ಮೊತ್ತವನ್ನು ಕಡಿತಗೊಳಿಸಿದ ನಂತರ ವಿಮಾದಾರರಿಗೆ 10% ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಕಡಿತಗೊಳಿಸುತ್ತವೆ.

ಮತ್ತೊಂದೆಡೆ ಆಸ್ಪತ್ರೆಗಳು ವಿಮಾ ಕಂಪನಿಗಳಿಂದ ಸೌಲಭ್ಯಗಳನ್ನು ಒದಗಿಸಿದ ನಂತರವೂ ಅಂತಹ ರೋಗಿಗಳನ್ನು ದಾಖಲಿಸುವುದಿಲ್ಲ. ಸಾಮಾನ್ಯ ವಿಮೆ, ದೀರ್ಘಾವಧಿಯಲ್ಲಿ ಹೊಂದಿಕೊಳ್ಳುವ ಪಾಲಿಸಿಗಳಂತಹ ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳನ್ನು ಪ್ರಾರಂಭಿಸಲು IRDAI ಕಾರ್ಯನಿರ್ವಹಿಸುತ್ತಿದೆ.

Join Nadunudi News WhatsApp Group