Ration Shop: ರೇಷನ್ ಕಾರ್ಡ್ ಜೊತೆಗೆ ಈ ದಾಖಲೆ ತಂದರೆ ಮಾತ್ರ ಸಿಗಲಿದೆ ರೇಷನ್, ಸರ್ಕಾರದ ಹೊಸ ನಿಯಮ.

ರೇಷನ್ ಪಡೆಯುವ ಪಡಿತರ ಚೀಟಿದಾರರಿಗೆ ಇನ್ನುಮುಂದೆ ಹೊಸ ನಿಯಮ ಜಾರಿ.

Caste Certificate Mandatory In Ration Shop: ರೇಷನ್ ಕಾರ್ಡ್ ದೇಶದಲ್ಲಿನ ಜನರಿಗೆ ಅತಿ ಮುಖ್ಯವಾದ ದಾಖಲೆಯಾಗಿದೆ. ಸರ್ಕಾರಿ ಹಾಗೂ ಸರ್ಕಾರೆತರ ಪ್ರಯೋಜನವನ್ನು ಪಡೆಯಲು ರೇಷನ್ ಕಾರ್ಡ್ ಅತಿ ಅಗತ್ಯವಾಗಿದೆ. ಇದೀಗ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೂ Ration Card ಬಹಳ ಮುಖ್ಯವಾಗಿದೆ.

new rules for ration card holders
Image Credit: Informalnewz

ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆ
ವಿಧಾನಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಉಚಿತ ಅನ್ನ ಭಾಗ್ಯ ಯೋಜನೆ ಇನ್ನಷ್ಟು ಬೇಡಿಕೆ ಪಡೆದುಕೊಂಡಿದೆ. ಅನ್ನ ಭಾಗ್ಯ ಯೋಜನೆಯಡಿ ಉಚಿತವಾಗಿ 10 ಕೆಜಿ ಅಕ್ಕಿ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು.

ಆದರೆ ಅನಿವಾರ್ಯ ಕಾರಣಗಳಿಂದ 5 ಕೆಜಿ ಅಕ್ಕಿ ಹಾಗು 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡುವುದಾಗಿ ಸರ್ಕಾರ ಘೋಷಣೆ ಹೊರಡಿಸಿದೆ. ಪ್ರತಿ ಕೆಜಿಗೆ 34 ರೂ. ಗಳಂತೆ 170 ರೂ. ನೀಡುವುದಾಗಿ ಘೋಷಣೆ ಹೊರಡಿಸಿತ್ತು. ಕೇಂದ್ರ ಸರ್ಕಾರ ಜನರಿಗೆ ಆಧಾರ್ ಗೆ ಪಡಿತರ ಲಿಂಕ್ ಮಾಡುವಂತೆ ಆದೇಶ ನೀಡಿತ್ತು. ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿದರೆ ಸರ್ಕಾರದಿಂದ ಸಿಗುವ ಉಚಿತ ಪಡಿತರವನ್ನು ಪಡೆಯಬಹುದಾಗಿದೆ.

Caste Certificate Mandatory In Ration Shop
Image Credit: Timesnext

ಇನ್ನುಮುಂದೆ ರೇಷನ್ ಪಡೆಯಲು ಜಾತಿ ಪ್ರಮಾಣ ಪತ್ರ ಕಡ್ಡಾಯ
ಇದೀಗ ಸರಕಾರ ಪರಿಶಿಷ್ಟ ಸಮುದಾಯದ ಫಲಾನುಭವಿಗಳಿಂದ ಜಾತಿ ಪ್ರಮಾಣ ಪತ್ರ ಸಂಗ್ರಹಿಸಲು ಮುಂದಾಗಿದೆ. ಹಾಗಾಗಿ ಆಹಾರ ಮತ್ತು ನಾಗರೀಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸೂಚನೆ ಪ್ರಕಾರ ರಾಜ್ಯದ ಎಲ್ಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಅಕ್ಕಿ ಪಡೆಯಲು ಜಾತಿ ಪ್ರಮಾಣ ಪತ್ರ ಕಡ್ಡಾಯ ಮಾಡಿದೆ. ಆದ್ದರಿಂದ ನೀವು ಇನ್ನುಮುಂದೆ ನ್ಯಾಯಬೆಲೆ ಅಂಗಡಿಗೆ ಅಕ್ಕಿ ಪಡೆಯಲು ಹೋದಾಗ Ration Card ಜೊತೆ Caste Certificate ತೆಗೆದುಕೊಂಡು ಹೋಗಬೇಕಾಗುತ್ತದೆ.

ಮುಂದಿನ ತಿಂಗಳಿಂದ ರಾಜ್ಯದ ಜನತೆಗೆ 10 ಕೆಜಿ ಅಕ್ಕಿ
ಜುಲೈ ಹಾಗೂ ಆಗಸ್ಟ್ ಕಂತಿನ ಅಕ್ಕಿ ಹಣವನ್ನು ಫಲಾನುಭವಿಗಳು ಈಗಾಗಲೇ ಸ್ವೀಕರಿಸಿದ್ದಾರೆ. ಮುಂದಿನ ತಿಂಗಳಿಂದಾದರೂ 10 ಕೆಜಿ ಅಕ್ಕಿ ನೀಡಬೇಕು ಎಂದು ಸರಕಾರ ನಿರ್ಧರಿಸಿದೆ. ಸದ್ಯ ಹೊಸ ನಿಯಮ ಜನರ ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸರ್ಕಾರದ ಈ ನಿರ್ಧಾರದ ಬಗ್ಗೆ ಜನರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Join Nadunudi News WhatsApp Group

Join Nadunudi News WhatsApp Group