Celebrities: ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ದೇಶದ ಖ್ಯಾತ ನಟ ನಟಿಯರು, ಆತಂಕ ಹೊರಹಾಕಿದ ಫ್ಯಾನ್ಸ್.

ತಮ್ಮ ನೆಚ್ಚಿನ ನಟ ನಟಿಯರ ಅನಾರೋಗ್ಯದ ಸ್ಥಿತಿಯನ್ನು ಕಂಡು ಬೇಸರ ಹೊರಹಾಕಿದ ಅಭಿಮಾನಿಗಳು.

Celebrities Health Issue: ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ನಟ ನಟಿಯರು ಸಿನಿಮಾ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ವಿಭಿನ್ನ ಕಥೆಯಿರುವ ಚಿತ್ರಗಳಲ್ಲಿ ನಟಿಸುವ ನಟ ನಟಿಯರು ತಮ್ಮ ಅತ್ಯದ್ಭುತ ನಟನೆಯನ್ನು ಸಿನಿಮಾ ಮೂಲಕ ತೋರಿಸುತ್ತಾರೆ.

ಇನ್ನು ಸ್ಯಾಂಡಲ್ ವುಡ್, ಟಾಲಿವುಡ್, ಬಾಲಿವುಡ್, ಕಾಲಿವುಡ್ ಚಿತ್ರರಂಗದಲ್ಲಿ ಅನೇಕ ಸ್ಟಾರ್ ಸೆಲೆಬ್ರೆಟಿಗಳು ತಮ್ಮದೇ ಪ್ರತಿಭೆಯ ಮೂಲಕ ಕೋಟ್ಯಂತರ ಅಭಿಮಾನಿಗಳು ಗಳಿಸಿದ್ದಾರೆ. ಇನ್ನು ಕೆಲವೊಮ್ಮೆ ನಟಿ ನಟಿಯರು ಚಿತ್ರರಂಗದಿಂದ ದೂರವಾಗುತ್ತಾರೆ. ಹೆಚ್ಚಿನ ಸೆಲೆಬ್ರೆಟಿಗಳು ಚಿತ್ರರಂಗದಿಂದ ದೂರವಾಗಲು ಅವರ ಆರೋಗ್ಯ ಸಮಸ್ಯೆಯೇ (Health Issue) ಕಾರಣವಾಗಿರುತ್ತದೆ.

Famous actor and actress of the country suffering from serious health problem
Image Credit: Filmfare

ಸ್ಟಾರ್ ಸೆಲೆಬ್ರೆಟಿಗಳು ಆರೋಗ್ಯ ಸಮಸ್ಯೆ
ಚಿತ್ರರಂಗದ ಸ್ಟಾರ್ ನಟರು ಹೆಚ್ಚಾಗಿ ಸಾಹಸ ದೃಶ್ಯಗಳನ್ನು ಮಾಡುವಾಗ ಹೆಚ್ಚಿನ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ಬಾಲಿವುಡ್, ಟಾಲಿವುಡ್ ಚಿತ್ರರಂಗದಲ್ಲಿ ತಮ್ಮ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅನೇಕ ಸ್ಟಾರ್ ಸೆಲೆಬ್ರೆಟಿಸ್ ಗಳಿದ್ದಾರೆ. ತಮ್ಮ ಅನಾರೋಗ್ಯದ ನಡುವೆಯೂ ಕೂಡ ಅಭಿಮಾನಿಗಳನ್ನು ರಂಜಿಸುತ್ತಾರೆ.

ಇದೀಗ ಚಿತ್ರರಂಗದ ಕೆಲವು ಸ್ಟಾರ್ ನಟ ನಟಿಯರು ಯಾವ ಯಾವ ಕಾರಣಕ್ಕೆ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ತಮ್ಮ ನೆಚ್ಚಿನ ನಟರ ಅನಾರೋಗ್ಯದ ಸ್ಥಿತಿಯನ್ನು ಕಂಡು ಅಭಿಮಾನಿಗಳು ಬೇಸರ ಹೊರಹಕುತ್ತಿದ್ದಾರೆ.

Famous actor and actress of the country suffering from serious health problem
Image Credit: Timesofindia

ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ದೇಶದ ಖ್ಯಾತ ನಟ ನಟಿಯರು
*ಸಲ್ಮಾನ್ ಖಾನ್(Actor Salman Khan)
ಬಾಲಿವುಡ್ ನ ಖ್ಯಾತ ನಟರಾದ ಸಲ್ಮಾನ್ ಖಾನ್ ಅವರು ಒಂದು ರೀತಿಯ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಲ್ಮಾನ್ ಖಾನ್ ಅವರು ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎನ್ನುವ ಖಾಯಿಲೆಯಿಂದ ಬಳಲುತ್ತಿದ್ದಾರೆ. ಈ ಖಾಯಿಲೆಯು ನರವೈಜ್ಞಾನಿಕ ಖಾಯಿಲೆಯಾಗಿದ್ದು ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರೋತ್ಸಾಹಿಸಲು ಪ್ರಾರಂಭಿಸುತ್ತದೆ.

Join Nadunudi News WhatsApp Group

Amitabh bachchan latest news update
Image Credit: Thehindu

*ಹೃತಿಕ್ ರೋಷನ್(Hrithik Roshan)
ಹೃತಿಕ್ ರೋಷನ್ ಕೂಡ ಸ್ಕೋಲಿಯೋಸಿಸ್ ಖಾಯಿಲೆಯಿಂದ ಬಳಲುತ್ತಿದ್ದಾರೆ. ಈ ಖಾಯಿಲೆಯಿಂದ ಅವರು ಹಲವು ಬಾರಿ ಮಾತನಾಡಲು ಆಗದೆ ಸಮಸ್ಯೆಯನ್ನು ಎದುರಿಸಿದ್ದಾರೆ.

Actress Samantha Ruth Prabhu shared information about her health problem on social media.
Image Credit: Instagram

*ಅಮಿತಾಬ್ ಬಚ್ಚನ್(Amitabh Bachchan)
ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಯಕೃತ್ತಿನ ಸಿರೋಸಿಸ್ ಸಮಸ್ಯೆಯಿಂದಾಗಿ ಹಲವು ಬಾರಿ ಆಸ್ಪತ್ರಗೆ ದಾಖಲಾಗಿದ್ದಾರೆ. ಈ ಖಾಯಿಲೆ ಅಮಿತಾಬ್ ಅವರನ್ನು 70 ಪ್ರತಿಶತ ಹಾನಿಗೊಳಮಾಡಿದೆ.

* ಸಮಂತಾ ರುತ್ ಪ್ರಭು(Samantha Ruth Prabhu)
ಇನ್ನು ಸೌತ್ ನ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪಾಲಿಮಾರ್ಫ್ಸ್ ಲೈಟ್ ಇರ್ಪಾಶಾ ಖಾಯಿಲೆಯಿಂದ ಬಳಲುತ್ತಿರುವ ನಟಿ ಸಮಂತಾ ಈ ಹಿಂದೆ ಚಿತ್ರರಂದಿಂದ ಸ್ವಲ್ಪ ಸಮಯ ದೂರವಿದ್ದಿದ್ದರು.

If Shahrukh Khan is suffering from health problem
Image Credit: Filmyfocus

*ಶಾರುಖ್ ಖಾನ್(Shah Rukh Khan)
ಶಾರುಖ್ ಖಾನ್ ಅವರು ಕೂಡ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ. ಈಗಾಗಲೇ ಐದು ಬಾರಿ ಭುಜದ ಶಸ್ತ್ರ ಚಿಕಿತ್ಸೆಗೆ ಕಿಂಗ್ ಖಾನ್ ಒಳಗಾಗಿದ್ದಾರೆ. ‘ದಿಲ್ ಸೇ’ ಚಿತ್ರದ ‘ಚೈಯ್ಯಾ ಚೈಯ್ಯಾ’ ಹಾಡಿನ ಚಿತ್ರೀಕರಣದ ವೇಳೆ ಶಾರುಖ್ ಗೆ ಬೆನ್ನು ನೋವಿನ ಸಮಸ್ಯೆ ಎದುರಾಗಿದ್ದು ಈಗಲೂ ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

Join Nadunudi News WhatsApp Group