Cement Price: ಹೊಸ ಮನೆ ಕಟ್ಟುತ್ತಿರುವವರಿಗೆ ಗುಡ್ ನ್ಯೂಸ್, ಸಿಮೆಂಟ್ ದರದಲ್ಲಿ ಭರ್ಜರಿ ಇಳಿಕೆ, ಬೆಲೆ ತಿಳಿಯದೆ ಮೋಸ ಹೋಗಬೇಡಿ.

ಮನೆ ನಿರ್ಮಾಣ ಮಾಡುತ್ತಿರುವವರಿಗೆ ಸಿಹಿ ಸುದ್ದಿ, ಸಿಮೆಂಟ್ ಬೆಲೆಯಲ್ಲಿ ಕೊಂಚ ಇಳಿಕೆ.

Cement Price Decrease: ಇತ್ತೀಚಿಗೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಳಿತ ಉಂಟಾಗುತ್ತಿದೆ. ಬೆಲೆ ಏರಿಕೆಯಾದರೆ ಅದು ಸಾಮಾನ್ಯ ವರ್ಗದ ಜನರ ಮೇಲೆ ಪರಿಣಾಮ ಬೀರುತ್ತದೆ. ಇನ್ನು ದಿನ ಬಳಕೆಯ ವಸ್ತುಗಳಾದ ಟೊಮೇಟೊ (Tomato), LPG ಸಿಲಿಂಡರ್ (Cylinder) ಮುಂತಾದವುಗಳ ಬೆಲೆಯ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ.

ಹಾಗೆ ಸಾಕಷ್ಟು ಜನರು ಸ್ವಂತ ಮನೆ ನಿರ್ಮಾಣದ ಕನಸನ್ನು ಹೊಂದಿರುತ್ತಾರೆ. ಅವರ ಕನಸನ್ನು ಸಾಕ್ಷಾತ್ಕಾರ ಗೊಳಿಸಿಕೊಳ್ಳುವ ಸಲುವಾಗಿ ಬ್ಯಾಂಕ್ (Bank) ಗಳಲ್ಲಿ ಅಥವಾ ಇನ್ನಿತರ ಹಣಕಾಸು ಸಂಸ್ಥೆ ಗಳಲ್ಲಿ ಸಾಲವನ್ನು ಪಡೆಯುತ್ತಾರೆ. ಸಾಲವನ್ನು ಪಡೆದುಕೊಂಡು ಜನರು ತಮ್ಮ ಮನೆ ನಿರ್ಮಾಣದ ಕೆಲಸವನ್ನು ಪ್ರಾರಂಭಿಸುತ್ತಾರೆ. 

Cement Price Decrease
Image Credit: Newindianexpress

ಸಿಮೆಂಟ್ ದರದಲ್ಲಿ ಕೊಂಚ ಇಳಿಕೆ
ದೇಶದಲ್ಲಿ ಸಿಮೆಂಟ್ ದರ (Cement Price) ಇಳಿಕೆಯಾದರೆ ಮನೆ ಕಟ್ಟುವವರ ಸಂಖ್ಯೆ ಹೆಚ್ಚಾಗುತ್ತದೆ. ಕಳೆದ ಕೆಲವು ತಿಂಗಳಲ್ಲಿ ದೇಶದಲ್ಲಿ ಸಿಮೆಂಟ್ ನ ಬೇಡಿಕೆಯಲ್ಲಿ ಏರಿಕೆ ಕಂಡುಬಂದಿದೆ, ಆದರೆ ಅದರ ಬೆಲೆಯಲ್ಲಿ ಯಾವುದೇ ರೀತಿಯ ಜಿಗಿತ ಕಂಡು ಬಂದಿಲ್ಲ.

ಮನೆ ಕಟ್ಟುವವರ ಸಂಖ್ಯೆ ಹೆಚ್ಚಾದಂತೆ ಸಿಮೆಂಟ್ ಗೆ ಬೇಡಿಕೆ ಕೂಡ ಹೆಚ್ಚಾಗುತ್ತದೆ. ಈ ವಲಯದ ಹೂಡಿದಾರರಿಗೆ ಇದು ಆತಂಕದ ವಿಷಯವಾದರೂ ಮನೆ ನಿರ್ಮಿಸುವವರು ಹಾಗೂ ಕಟ್ಟಡ ನಿರ್ಮಾಣ ಕಂಪನಿಗಳಿಗೆ ಇದು ಪರಿಹಾರದ ವಿಷಯವಾಗಿದೆ ಎನ್ನಬಹುದು.
ಸಿಮೆಂಟ್ ಬೆಲೆ ಕಡಿಮೆಯಾಗಲು ಕಾರಣ
ಮಳೆಗಾಲದಲ್ಲಿ ನಿರ್ಮಾಣಗಳ ಕೆಲಸಗಳು ಕಡಿಮೆ ಇರುತ್ತದೆ. ಮಾನ್ಸೂನ್ ಅವಧಿಯಲ್ಲಿ ಸಿಮೆಂಟ್ ಬೆಲೆಯಲ್ಲಿ ಕುಸಿತವನ್ನು ಕಾಣಬಹುದಾಗಿದೆ. ಹಬ್ಬ ಹರಿದಿನಗಳ ಮುನ್ನ ಕಟ್ಟಡ ನಿರ್ಮಾಣ ಚಟುವಟಿಕೆಯಲ್ಲಿ ಇಳಿಕೆಯಾದರೆ ಸಿಮೆಂಟ್ ಬೆಲೆಯಲ್ಲಿ ನಾವು ಇಳಿಕೆಯನ್ನು ಕಾಣಬಹುದಾಗಿದೆ.

good news for house builders
Image Credit: Moneycontrol

ಈಗ ನಾವು ಯಾವ ಪ್ರದೇಶದಲ್ಲಿ ಸಿಮೆಂಟ್ ಬೆಲೆ ಇಳಿಕೆಯಾಗಿದೆ ಎಂದು ತಿಳಿಯೋಣ. ಪಶ್ಚಿಮ ಹಾಗೂ ದಕ್ಷಿಣ ವಲಯದಲ್ಲಿ ಸಿಮೆಂಟ್ ಚೀಲಕ್ಕೆ 3 ರೂಪಾಯಿ ಕುಸಿತ ಕಂಡು ಬಂದಿದೆ. ಪೂರ್ವದಲ್ಲಿ ಚೀಲಕ್ಕೆ 6 ರೂಪಾಯಿ ಇಳಿಕೆಯಾಗಿದೆ. ಕೇಂದ್ರ ಪ್ರದೇಶದಲ್ಲಿ ಸಿಮೆಂಟ್ ಬೆಲೆಯಲ್ಲಿ ಯಾವದೇ ರೀತಿಯ ಇಳಿಕೆ ಅಥವಾ ಏರಿಕೆ ಕಂಡು ಬಂದಿಲ್ಲ. ಉತ್ತರ ಭಾಗಗಳಲ್ಲಿ ನೋಡುದಾದರೆ ಪ್ರತಿ ಚೀಲಕ್ಕೆ 6 ರೂಪಾಯಿ ಏರಿಕೆಯಾಗಿರುದನ್ನು ನೋಡಬಹುದಾಗಿದೆ. ಈ ಹೆಚ್ಚಳ ತಿಂಗಳಿಂದ ತಿಂಗಳಿಗೆ ಬದಲಾಗುತ್ತಿರುತ್ತದೆ.

Join Nadunudi News WhatsApp Group

ದೇಶದ ಹಣದುಬ್ಬರ ಸ್ಥಿತಿ
ನಾವು ದೇಶದ ಹಣದುಬ್ಬರ ಸ್ಥಿತಿ ಬಗ್ಗೆ ಗಮನ ಹರಿಸುದಾದರೆ, ಆಹಾರ ಪದಾರ್ಥಗಳ ಬೆಲೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ. ಹಾಗೆ ಕಚ್ಚಾ ತೈಲಗಳ ಬೆಲೆಯಲ್ಲೂ ಕೂಡ ಏರಿಕೆ ಕಾಣುತ್ತಿದೆ. ಇಂತಹ ಪರಿಸ್ಥಿಯಲ್ಲಿ ಸಿಮೆಂಟ್ ಚೀಲದ ಮೇಲೆ ಒಂದು ರೂಪಾಯಿ ಕಡಿಮೆಯಾದರೂ ಕೂಡ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡುವವರಿಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ.

Join Nadunudi News WhatsApp Group