Cement Price: ಹೊಸ ಮನೆ ಕಟ್ಟುತ್ತಿರುವವರಿಗೆ ಬೇಸರದ ಸುದ್ದಿ, ಸಿಮೆಂಟ್ ಬೆಲೆಯಲ್ಲಿ ಇಂದಿನಿಂದ ದಾಖಲೆಯ ಏರಿಕೆ.

ಏಪ್ರಿಲ್ ನಿಂದ ಆಗಸ್ಟ್ ತನಕ ಇಳಿಕೆ ಕಂಡ ಸಿಮೆಂಟ್ ದರ ಇದೀಗ ಏರಿಕೆಯತ್ತ ಸಾಗಲಿದೆ.

Cement Price Hike In October 1st: ಇತ್ತೀಚಿಗೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಳಿತ ಉಂಟಾಗುತ್ತಿದೆ. ಬೆಲೆ ಏರಿಕೆಯಾದರೆ ಅದು ಸಾಮಾನ್ಯ ವರ್ಗದ ಜನರ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಕಳೆದ ತಿಂಗಳು ಇಳಿಕೆ ಕಂಡಿದ್ದ LPG ಸಿಲಿಂಡರ್ ಈ ತಿಂಗಳ ಮೊದಲ ದಿನವೇ ಏರಿಕೆ ಯಾಗಿದೆ.

ಹಾಗೆ ಸಾಕಷ್ಟು ಜನರು ಸ್ವಂತ ಮನೆ ನಿರ್ಮಾಣದ ಕನಸನ್ನು ಹೊಂದಿರುತ್ತಾರೆ. ಅವರ ಕನಸನ್ನು ಸಾಕ್ಷಾತ್ಕಾರ ಗೊಳಿಸಿಕೊಳ್ಳುವ ಸಲುವಾಗಿ Bank ಗಳಲ್ಲಿ ಅಥವಾ ಇನ್ನಿತರ ಹಣಕಾಸು ಸಂಸ್ಥೆ ಗಳಲ್ಲಿ ಸಾಲವನ್ನು ಪಡೆಯುತ್ತಾರೆ. ಸಾಲವನ್ನು ಪಡೆದುಕೊಂಡು ಜನರು ತಮ್ಮ ಮನೆ ನಿರ್ಮಾಣದ ಕೆಲಸವನ್ನು ಪ್ರಾರಂಭಿಸುತ್ತಾರೆ.

Cement Price Hike
Image Credit: Economictimes

ಅಕ್ಟೋಬರ್‌ 1ರ ನಂತರ ದುಬಾರಿಯಾಗಲಿದೆ ಸಿಮೆಂಟ್‌
ಮನೆ ಹಾಗೂ ಕಟ್ಟಡವನ್ನು ನಿರ್ಮಾಣ ಮಾಡಲು ಸಿಮೆಂಟ್ ಅಗತ್ಯವಾಗಿ ಬೇಕಾಗುತ್ತದೆ. ಮನೆ ಕಟ್ಟುವವರ ಸಂಖ್ಯೆ ಹೆಚ್ಚಾದಂತೆ ಸಿಮೆಂಟ್ ಗೆ ಬೇಡಿಕೆ ಕೂಡ ಹೆಚ್ಚಾಗುತ್ತದೆ. ಆಗಸ್ಟ್ ನಲ್ಲಿ ಸಿಮೆಂಟ್ ದರ ಕೊಂಚ ಇಳಿಕೆ ಕಂಡಿತ್ತು. ಮಳೆಗಾಲದಲ್ಲಿ ನಿರ್ಮಾಣಗಳ ಕೆಲಸಗಳು ಕಡಿಮೆ ಇರುತ್ತದೆ.

ಹಾಗಾಗಿ ಮಾನ್ಸೂನ್ ಅವಧಿಯಲ್ಲಿ ಸಿಮೆಂಟ್ ಬೆಲೆಯಲ್ಲಿ ಕುಸಿತವನ್ನು ಕಾಣಬಹುದಾಗಿದೆ. ಆದರೆ ಈ ಬಾರಿ ಮುಂಗಾರು ಕೊರತೆಯಿಂದಾಗಿ ನಿರ್ಮಾಣ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇದ್ದು, Cement Price ಹೆಚ್ಚಳಕ್ಕೆ ಕಾರಣವಾಗಿದೆ. ಈ ಕಾರಣದಿಂದಾಗಿ ಜನರು ಮನೆ ನಿರ್ಮಾಣ ಮಾಡಲು ಮೊದಲು ಅಂದಾಜಿಸಿದ್ದಕ್ಕಿಂತ ಹೆಚ್ಚು ಹಣ ಖರ್ಚು ಮಾಡಬೇಕಿದೆ.

Cement Price Hike In October 1st
Image Credit: Brecorder

ಏಪ್ರಿಲ್ ನಿಂದ ಆಗಸ್ಟ್ ತನಕ ಇಳಿಕೆ ಕಂಡ ಸಿಮೆಂಟ್ ದರ ಇದೀಗ ಏರಿಕೆಯತ್ತ ಸಾಗಲಿದೆ
ಸಿಮೆಂಟ್‌ ದರ ಅಕ್ಟೋಬರ್‌ 1 ರಿಂದ ಏರಿಕೆಯಾಗಲಿದೆ. ದಕ್ಷಿಣ ವಲಯದಲ್ಲಿ ಚೀಲಕ್ಕೆ 30ರಿಂದ 40 ರೂ. ಏರಿಕೆಯಾಗಲಿದ್ದರೆ, ಉತ್ತರ ವಲಯದಲ್ಲಿ 10 ರಿಂದ 20 ರೂ. ಏರಿಕೆಯಾಗುವ ನಿರೀಕ್ಷೆಯಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಕಳೆದ ಒಂದು ತಿಂಗಳಲ್ಲಿ ಸಿಮೆಂಟ್‌ ದರ ಶೇ. 12 ರಿಂದ 13 ರಷ್ಟು ಏರಿಕೆಯಾಗಿದೆ. ಭಾರತದಾದ್ಯಂತ ಸಿಮೆಂಟ್‌ನ ಸರಾಸರಿ ಬೆಲೆ ಪ್ರಸ್ತುತ ಪ್ರತಿ 50 ಕೆಜಿ ಚೀಲಕ್ಕೆ 382 ರೂ.ಗೆ ತಲುಪಿದೆ. ಈಶಾನ್ಯ ಭಾಗಗಳಲ್ಲಿ ಸಿಮೆಂಟ್‌ ಬೆಲೆ ಚೀಲಕ್ಕೆ 326 ರಿಂದ 400 ರೂಪಾಯಿ ಇದೆ.

Join Nadunudi News WhatsApp Group

Join Nadunudi News WhatsApp Group