8th Pay Commission: 8 ನೇ ವೇತನದ ಬಗ್ಗೆ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ, ಸಿಗಲಿದೆ ದುಪ್ಪಟ್ಟು ಸಂಬಳ.
8 ನೇ ವೇತನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನ ತಗೆದುಕೊಂಡಿದೆ.
8th Pay Commission: ಪ್ರಸ್ತುತ ಸರ್ಕಾರಿ ನೌಕರರು (Government Workers) 7 ನೇ ವೇತನ ಆಯೋಗದ (7th Pay Commission) ಅಡಿಯಲ್ಲಿ ವೇತನ ಅಪಡೆಯುತ್ತಿದ್ದಾರೆ. ಇತ್ತೀಚಿಗೆ ಸರ್ಕಾರಿ ನೌಕರರ ವೇತನದ ವಿಷಯಗಳು ಸಾಕಷ್ಟು ಹರಿದಾಡುತ್ತಿವೆ.
ಸರ್ಕಾರಿ ನೌಕರರಿಗೆ ವೇತನದ ವಿಷಯವಾಗಿ ಸಿಹಿ ಸುದ್ದಿಗಳು ಸಿಗುತ್ತಲೇ ಇದೆ. ಈಗಾಗಲೇ ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮಾಸಿಕ ತಿಂಗಳ ವೇತನದಲ್ಲಿ ಕೂಡ ಹೆಚ್ಚಳ ಮಾಡಿತ್ತು.
ಹೊಸ ವೇತನ ಆಯೋಗ ರಚಿಸುವ ಬಗ್ಗೆ ಸರ್ಕಾರದ ಮಹತ್ವದ ನಿರ್ಧಾರ
ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. 8 ನೇ ವೇತನ ಆಯೋಗದ (8th Pay Commission) ಕುರಿತು ಮಾಹಿತಿ ಹೊರಬಿದ್ದಿದೆ. ಸರ್ಕಾರಿ ನೌಕರರಿಗೆ ಶೀಘ್ರವೇ 8ನೇ ವೇತನ ಆಯೋಗ ಜಾರಿಗೊಳಿಸುವಂತೆ ಮೋದಿ ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರವು ಹೊಸ ವೇತನ ಆಯೋಗವನ್ನು ರಚಿಸಬಹುದು ಮತ್ತು ನೌಕರರ ವೇತನವು ಶೇ. 44 ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಶೀಘ್ರದಲ್ಲೇ 8 ನೇ ವೇತನ ಜಾರಿ
8 ನೇ ಆಯೋಗ ರಚನೆಯ ಕುರಿತು ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್ ಚರ್ಚಿಸಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ 8 ನೇ ವೇತನ ಆಯೋಗ ಜಾರಿಗೆ ತರಲಾಗುವುದು ಎನ್ನುವ ಸುದ್ದಿ ನೀಡಿದ್ದಾರೆ. ಹಿಂದಿನ ವೇತನದ ಆಯೋಗದ ಆಧಾರದ ಮೇಲೆ ಹೊಸ ವೇತನ ಆಯೋಗವನ್ನು ಲೆಕ್ಕ ಹಾಕಲಾಗುತ್ತದೆ ಎಂದಿದ್ದಾರೆ.
8 ನೇ ವೇತನದ ಆಯೋಗದ ಅಡಿಯಲ್ಲಿ ಸಂಬಳ ಎಷ್ಟು ಹೆಚ್ಚಾಗಲಿದೆ
8 ನೇ ವೇತನ ಆಯೋಗ ರಚನೆಗೆ ನರೇಂದ್ರ ಮೋದಿ (Narendra Modi) ಸರ್ಕಾರ ಈಗಾಗಲೇ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. 2024 ರ ಅಂತ್ಯದ ವೇಳೆಯಲ್ಲಿ 8ನೇ ವೇತನ ಆಯೋಗ ರಚನೆಯಾಗಲಿದೆ.
2026 ರಲ್ಲಿ 8ನೇ ವೇತನ ಆಯೋಗವನ್ನು ಜಾರಿಗೆ ತರಲಾಗುತ್ತದೆ. ಪ್ರತಿ 10 ವರ್ಷಗಳ ನಂತರ ಹೊಸ ವೇತನ ಆಯೋಗ ರಚನೆಯಾಗಲಿದೆ. 8 ನೇ ವೇತನ ಆಯೋಗ ರಚನೆ ಆದರೆ ಸರ್ಕಾರಿ ನೌಕರರ ವೇತನ 18,000 ದಿಂದ 20,000 ಏರಿಕೆ ಆಗುವ ಸಾಧ್ಯತೆ ಇದೆ.