Google Chrome: ಗೂಗಲ್ ಬಳಸುವವರಿಗೆ ಕೇಂದ್ರದಿಂದ ಎಚ್ಚರಿಕೆ, ಕೂಡಲೇ ಈ ಕೆಲಸ ಮಾಡುವಂತೆ ಆದೇಶ.
ಗೂಗಲ್ ಬಳಸುವವರಿಗೆ ಕೇಂದ್ರದಿಂದ ಎಚ್ಚರಿಕೆಯ ಕರೆಗಂಟೆ.
Google Chrome Hacking Update: ಜನಪ್ರಿಯ ವೆಬ್ ಬ್ರೌಸರ್ ಗಳಲ್ಲಿ ಗೂಗಲ್ ಕ್ರೋಮ್ (Google Chrome) ಕೂಡ ಒಂದಾಗಿದೆ. ಮೊಬೈಲ್ ಬಾಲಸುವ ಪ್ರತಿಯೊಬ್ಬರೂ ಕೂಡ ಗೂಗಲ್ ಕ್ರೋಮ್ ಅನ್ನು ಬಳಸೆ ಬಳಸುತ್ತಾರೆ. ಈ ಕ್ರೋಮ್ ಬ್ರೌಸರ್ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ.
ಎಲ್ಲ ರೀತಿಯ ಉಪಯುಕ್ತ ಮಾಹಿತಿ ಗೂಗಲ್ ಕ್ರೋಮ್ ನಲ್ಲಿ ಲಭ್ಯವಾಗುವ ಕಾರಣ ಜನರು ಹೆಚ್ಚಾಗಿ ಗೂಗಲ್ ಕ್ರೋಮ್ ಅನ್ನು ಬಳಸುತ್ತಾರೆ. ಇದೀಗಾ ಕ್ರೋಮ್ ಬಳಕೆದಾರರಿಗೆ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT -In) ಎಚ್ಚರಿಕೆ ನೀಡಿದೆ.
ಗೂಗಲ್ ಕ್ರೋಮ್ ನಲ್ಲಿ ದುರ್ಬಲತೆ ಹೆಚ್ಚಿದೆ
ಗೂಗಲ್ ಕ್ರೋಮ್ ನಲ್ಲಿ ಹಲವಾರು ದುರ್ಬಲತೆಯನ್ನು ವರದಿ ಮಾಡಲಾಗಿದೆ. ಗೂಗಲ್ ಕ್ರೋಮ್ ನಲ್ಲಿನ ದುರ್ಬಲತೆಯನ್ನು ರಿಮೋಟ್ ಆಕ್ರಮಣಕಾರರು ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು, ಸೇವೆಯ ನಿರಾಕರಣೆ (DoS ) ಸ್ಟಿಯನ್ನು ಉಂಟುಮಾಡಲು ಮತ್ತು ಉದ್ದೇಶಿತ ಸಿಸ್ಟಮ್ ನಲ್ಲಿ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸಿಕೊಳ್ಳಲು ಬಳಸಿಕೊಳ್ಳಬಹುದಾಗಿದೆ.
ಗೂಗಲ್ ಕ್ರೋಮ್ ಯಾವುದೇ ಸಂಕೀರ್ಣ ಸಾಫ್ಟ್‌ವೇರ್ ನಂತೆ, ಅದರ ಕೋಡ್ ನಲ್ಲಿ ದೌರ್ಬಲ್ಯಗಳನ್ನು ಹೊಂದಿರಬಹುದು. ದುರುದ್ದೇಶಪೂರಿತವಾಗಿ ಹ್ಯಾಕರ್ಸ್ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸಬಹುದು. ಗೂಗಲ್ ಕ್ರೋಮ್ ನಲ್ಲಿನ ದುರ್ಬಲತೆಗಳು ವಿವಿಧ ಸಮಸ್ಯೆಗಳಿಂದ ಉಂಟಾಗುತ್ತವೆ. ಗೂಗಲ್ ಕ್ರೋಮ್ ನಲ್ಲಿನ ದುರ್ಬಲತೆಯು ಡೇಟಾವನ್ನು ಕದಿಯಲು ಅಥವಾ ಮಾಲ್ ವೇರ್ ಅನ್ನು ಸ್ಥಾಪಿಸಲು ವಂಚಕರಿಗೆ ಸಹಾಯ ಮಾಡಿಕೊಡುತ್ತದೆ.
ಗೂಗಲ್ ಕ್ರೋಮ್ ಆಪ್ ಅಪ್ಡೇಟ್ ಮಾಡುವಂತೆ ಸೂಚನೆ
ಗೂಗಲ್ ಕ್ರೋಮ್ ನಲ್ಲಿ ಹೆಚ್ಚುತ್ತಿರುವ ವಂಚನೆಯನ್ನು ತಪ್ಪಿಸಲು CERT -In ಗೂಗಲ್ ಕ್ರೋಮ್ ಬಳಕೆದಾರರಿಗೆ ತಮ್ಮ ವೆಬ್ ಬ್ರೌಸರ್ ಗಳು ಮತ್ತು ಇತರ ಸಾಫ್ಟ್ ವೇರ್ ಗಳನ್ನೂ ಇತ್ತೀಚಿನ ಭದ್ರತಾ ಪ್ಯಾಚ್ ಗಳೊಂದಿಗೆ ಅಪ್ಡೇಟ್ ಮಾಡಲು ಸಲಹೆ ನೀಡುತ್ತದೆ. ಗೂಗಲ್ ಕ್ರೋಮ್ ನಲ್ಲಿನ ದೋಷಗಳನ್ನು ಸರಿಪಡಿಸಲು ಬಳಕೆದಾರರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡಲು ಗೂಗಲ್ ಈಗಾಗಲೇ ಸಾಕಷ್ಟು ನವೀಕರಣವನ್ನು ಜಾರಿಗೊಳಿಸಿದೆ.
ಅಪಾಯಗಳನ್ನು ಕಡಿಮೆ ಮಾಡಲು CERT-In Google Chrome ಬಳಕೆದಾರರಿಗೆ ತಮ್ಮ ವೆಬ್ ಬ್ರೌಸರ್‌ಗಳು ಮತ್ತು ಇತರ ಸಾಫ್ಟ್‌ವೇರ್‌ಗಳನ್ನು ಇತ್ತೀಚಿನ ಭದ್ರತಾ ಪ್ಯಾಚ್‌ಗಳೊಂದಿಗೆ ಅಪ್ಡೇಟ್ ಮಾಡಲು ಸಲಹೆ ನೀಡಿದೆ. ಈ ಸಂದರ್ಭದಲ್ಲಿ, ತಿಳಿದಿರುವ ದೋಷಗಳನ್ನು ಸರಿಪಡಿಸಲು ಮತ್ತು ಭದ್ರತೆಯನ್ನು ಬಲಪಡಿಸಲು ಬ್ರೌಸರ್ ಡೆವಲಪರ್ Google ಈಗಾಗಲೇ ನವೀಕರಣಗಳನ್ನು ಬಿಡುಗಡೆ ಮಾಡಿದೆ.