Salary Update: ಸರ್ಕಾರೀ ನೌಕರರಿಗೆ ಕೇಂದ್ರದಿಂದ 2 ಭರ್ಜರಿ ಗುಡ್ ನ್ಯೂಸ್ ಸಂಬಳದಲ್ಲಿ ಮತ್ತೆ ಇಷ್ಟು ಏರಿಕೆ.
ಸರ್ಕಾರೀ ನೌಕರರಿಗೆ 2024 ರ ಆರಂಭದಲ್ಲಿಯೇ ಎರಡು ಭರ್ಜರಿ ಉಡುಗೊರೆ ನೀಡಿದ ಕೇಂದ್ರ ಸರ್ಕಾರ.
Central Government Employees DA And HRA Hike In 2024: ಸದ್ಯ ದೇಶದಲ್ಲಿ ಸರ್ಕಾರೀ ನೌಕರರ ವೇತನ ಹೆಚ್ಚಳದ ಸುದ್ದಿಗಳು ಸಾಕಷ್ಟು ವೈರಲ್ ಆಗುತ್ತಿವೆ. ಇದೀಗ ಕೇಂದ್ರದಿಂದ ಸರ್ಕಾರೀ ನೌಕರರಿಗೆ 2 ಸಿಹಿಸುದ್ದಿ ಹೊರಬಿದ್ದಿದೆ. ಹೌದು ಸರ್ಕಾರೀ ನೌಕರರಿಗೆ 2024 ರ ಆರಂಭದಲ್ಲಿಯೇ ಎರಡು ಭರ್ಜರಿ ಉಡುಗೊರೆಯನ್ನು ಸರ್ಕಾರ ನೀಡಿದೆ. ಇದೀಗ ಕೇಂದ್ರ ನೌಕರರು ಹೊಸ ವರ್ಷಕ್ಕೆ DA ಉಡುಗೊರೆಯನ್ನು ಪಡೆದರೆ HRA ಕೂಡ ಹೆಚ್ಚಾಗುತ್ತದೆ.
7ನೇ ವೇತನ ಆಯೋಗ
ಕೇಂದ್ರ ನೌಕರರಿಗೆ ಈ ಹೊಸ ವರ್ಷ ಬಹಳ ವಿಶೇಷವಾಗಿರಲಿದೆ. ಹೊಸ ವರ್ಷದಲ್ಲಿ ನೌಕರರು ತುಟ್ಟಿಭತ್ಯೆ ಉಡುಗೊರೆಯನ್ನು ಪಡೆದುಕೊಂಡರೆ ಮನೆ ಬಾಡಿಗೆ ಭತ್ಯೆ ಕೂಡ ಹೆಚ್ಚಾಗಲಿದೆ. ಏಳನೇ ವೇತನ ಆಯೋಗದ ಶಿಫಾರಸ್ಸುಗಳ ಪ್ರಕಾರ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಅರ್ಧ ವಾರ್ಷಿಕ ಆಧಾರದ ಮೇಲೆ ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಈ ಹಿಂದಿನ ಹೆಚ್ಚಳವನ್ನು ಅಕ್ಟೋಬರ್ 2023 ರಲ್ಲಿ ಮಾಡಲಾಗಿದೆ. ಈ ಹೆಚ್ಚಳವು ಶೇಕಡಾ 4 ರಷ್ಟಿತ್ತು. ಇದರಿಂದ ಕೇಂದ್ರ ನೌಕರರ ಭತ್ಯೆ ಶೇಕಡಾ 42 ರಿಂದ 46 ಕ್ಕೆ ಏರಿಕೆಯಾಗಿತ್ತು.
DA ಹೆಚ್ಚಾದರೆ HRA ಕೂಡ ಹೆಚ್ಚಾಗಲಿದೆ
ಜನವರಿಯಿಂದ ಜೂನ್ 2024 ರ ಅರ್ಧ ವರ್ಷದ ತುಟ್ಟಿಭತ್ಯೆ ಹೆಚ್ಚಳವನ್ನು ಮಾರ್ಚ್ ತಿಂಗಳಲ್ಲಿ ಘೋಷಿಸಬಹುದು. ಸರ್ಕಾರವು ಮತ್ತೊಮ್ಮೆ ತುಟ್ಟಿಭತ್ಯೆಯನ್ನು 4 ಪ್ರತಿಶತದಷ್ಟು ಹೆಚ್ಚಿಸಿದರೆ ಕೇಂದ್ರ ನೌಕರರ ಭತ್ಯೆ ಶೇಕಡಾ 50 ಆಗಿರುತ್ತದೆ. ಜೊತೆಗೆ ಕೇಂದ್ರ ನೌಕರರ HRA ಕೂಡ ಹೆಚ್ಚಾಗುತ್ತದೆ.
HRA ಎಷ್ಟು ಪಟ್ಟು ಹೆಚ್ಚಾಗುತ್ತದೆ..?
ತುಟ್ಟಿಭತ್ಯೆ ಶೇಕಡಾ 50 ಇರುವಾಗ HRA ಅನ್ನು ಪರಿಷ್ಕರಿಸಲಾಗುತ್ತದೆ. HRA ಹೆಚ್ಚಳಕ್ಕಾಗಿ ನಗರಗಳನ್ನು ಮೂರು ವರ್ಗಗಳ ಅಡಿಯಲ್ಲಿ ವಿಂಗಡಿಸಲಾಗುತ್ತದೆ, ಅವುಗಳೆಂದರೆ X ,Y , Z . ಉದ್ಯೋಗಿ X ನಲ್ಲಿ ವಾಸಿಸುತ್ತಿದ್ದರೆ ಅವರ HRA ಶೇಕಡಾ 30 ಕ್ಕೆ ಹೆಚ್ಚಾಗುತ್ತದೆ. Y ವರ್ಗದವರಿಗೆ HRA ದರ 20 ಪ್ರತಿಶತ ಆಗಿರುತ್ತದೆ. Z ವರ್ಗದವರಿಗೆ HRA ದರ 10 ಪ್ರತಿಶತದಷ್ಟಿರುತ್ತದೆ. ಪ್ರಸ್ತುತ ನಗರಗಳು ಹಾಗೂ ಪಟ್ಟಣಗಳಲ್ಲಿ ವಾಸಿಸುವ ಉದ್ಯೋಗಿಗಳು 27, 18 ಮತ್ತು 9 ಪ್ರತಿಶತ HRA ಪಡೆಯುತ್ತಿದ್ದಾರೆ. ಅಂದರೆ HRA ಮತ್ತು DA ಹೆಚ್ಚಳದ ನಂತರ ಕೇಂದ್ರ ನೌಕರರ ವೇತನದಲ್ಲಿ ಭಾರಿ ಹೆಚ್ಚಳವಾಗಲಿದೆ.