Salary Scale: ಪ್ರತಿ ತಿಂಗಳು ಸಂಬಳ ಪಡೆಯುವ ಸರ್ಕಾರೀ ನೌಕರರಿಗೆ ಸಿಹಿಸುದ್ದಿ, ಮೂಲ ವೇತನದಲ್ಲಿ ಭರ್ಜರಿ ಹೆಚ್ಚಳ.
ಕೇಂದ್ರ ಸರ್ಕಾರಿ ನೌಕರರ ವೇತನದ ಕುರಿತು ಮಹತ್ವದ ನಿರ್ಧಾರ.
Central Government Employees Salary: ಇತ್ತೀಚೆಗೆ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆಯನ್ನು ಹೆಚ್ಚಿಸಿದೆ. ಜನವರಿ 2023 ರಲ್ಲಿ ತುಟ್ಟಿಭತ್ಯೆಯನ್ನು 4 ರಷ್ಟು, ಜುಲೈ 2023 ರಲ್ಲಿ ತುಟ್ಟಿಭತ್ಯೆಯನ್ನು 4 ರಷ್ಟು ಹೆಚ್ಚಿಸಲಾಗಿತ್ತು. ಇದರಿಂದ ಉದ್ಯೋಗಿಗಳ ಒಟ್ಟು DA 42 % ರಿಂದ 46 % ಗೆ ಏರಿಕೆಯಾಗಿದೆ.
ಉದ್ಯೋಗಿಗಳಿಗೆ ನವೆಂಬರ್‌ನಲ್ಲಿ ತುಟ್ಟಿ ಭತ್ಯೆ ಮತ್ತು ಜುಲೈನಿಂದ ಬಾಕಿಯಿರುವ 3 ತಿಂಗಳ ಬಾಕಿ DA ಯನ್ನು ನೀಡಲಾಗುತ್ತದೆ. ಮುಂದಿನ ತುಟ್ಟಿಭತ್ಯೆ ಏರಿಕೆ 2024 ರಲ್ಲಿ ಆಗಲಿದೆ. ಆದರೆ ಮುಂದಿನ ಬಾರಿ DA ಎಷ್ಟು ಹೆಚ್ಚಾಗುತ್ತದೆ ಎಂಬುದು AICPI ಸೂಚ್ಯಂಕದ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತದೆ. ಇದರ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.
ತುಟ್ಟಿಭತ್ಯೆ ಹೆಚ್ಚಳವನ್ನು AICPI ಸೂಚ್ಯಂಕದಿಂದ ನಿರ್ಧರಿಸಲಾಗುತ್ತದೆ
AICPI ಇಂಡೆಕ್ಸ್ ನ ಅರ್ಧ ವಾರ್ಷಿಕ ಲೆಕ್ಕಾಚಾರದ ಆಧಾರದ ಮೇಲೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ನಿರ್ಧರಿಸಲಾಗುತ್ತದೆ. ನೌಕರರ ವೇತನ ಶ್ರೇಣಿಯನ್ನು ಕೇಂದ್ರ ಸರ್ಕಾರ ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸುತ್ತದೆ. ಈ ಪರಿಷ್ಕರಣೆಯನ್ನು ಜನವರಿ ಮತ್ತು ಜುಲೈ ನಲ್ಲಿ ನೆಡೆಸಲಾಗುತ್ತದೆ. ಜನವರಿಯ ಹಣದುಬ್ಬರ ದರವನ್ನು ಹಿಂದಿನ ವರ್ಷದ ಜುಲೈನಿಂದ ಡಿಸೆಂಬರ್‌ವರೆಗಿನ AICPI ಸೂಚ್ಯಂಕವನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಹಾಗೆ ಜುಲೈ ತಿಂಗಳ ತುಟ್ಟಿಭತ್ಯೆ ಜನವರಿಯಿಂದ ಜುಲೈವರೆಗೆ AICPI ಸೂಚ್ಯಂಕವನ್ನು ಆಧರಿಸಿರುತ್ತದೆ.
ಇನ್ನು 4 ತಿಂಗಳ AICPI ಇಂಡೆಕ್ಸ್ ಸದ್ಯದಲ್ಲೇ ಬಿಡುಗಡೆ
ಇಲ್ಲಿ ತನಕ ಜುಲೈ ಮತ್ತು ಆಗಸ್ಟ್ ನ AICPI ಸೂಚ್ಯಂಕ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ. ಸೂಚ್ಯಂಕ 139.2 ಆಗಿದೆ, ಹಾಗೆ DA ಸ್ಕೋರ್ 47.98 ಪ್ರತಿಶತವಾಗಿದೆ. ಹಾಗೆ ಸೆಪ್ಟೆಂಬರ್ ತಿಂಗಳ ಅಂಕಿ ಅಂಶಗಳನ್ನು ಅಕ್ಟೋಬರ್ 28-30 ರಂದು ಬಿಡುಗಡೆ ಮಾಡಲಾಗುತ್ತದೆ. ನಂತರ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈಎಲ್ಲವು ಮುಗಿದ ನಂತರ ಜನವರಿ 2024 ರಲ್ಲಿ ತುಟ್ಟಿಭತ್ಯೆ ದರ ಎಷ್ಟು ಹೆಚ್ಚಾಗುತ್ತದೆ ಎಂದು ನಿರ್ಧರಿಸಲಾಗುತ್ತದೆ. ಅಂತಿಮ ನಿರ್ಧಾರ ಕೇಂದ್ರ ಸರ್ಕಾರದ್ದಾಗಿರುತ್ತದೆ.
50 % ತಲುಪಿದ ನಂತರ ತುಟ್ಟಿಭತ್ಯೆ ಮತ್ತೆ ಶೂನ್ಯ
ಜನವರಿ 2024 ರಲ್ಲಿ ತುಟ್ಟಿಭತ್ಯೆ 4% ಹೆಚ್ಚಿಸಿದರೆ, ತುಟ್ಟಿಭತ್ಯೆ 50% ತಲುಪುತ್ತದೆ. ಏಳನೇ ವೇತನ ಆಯೋಗವನ್ನು ಸ್ಥಾಪಿಸುವಾಗ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಪರಿಷ್ಕರಣೆ ನಿಯಮಗಳನ್ನು ರೂಪಿಸಿದೆ. ಆ ನಿಯಮದಲ್ಲಿ DA 50 % ತಲುಪಿದ ನಂತರ ಅದನ್ನು ಶೂನ್ಯಕ್ಕೆ ಪರಿವರ್ತಿಸಲಾಗುತ್ತದೆ ಮತ್ತು DA ಮೊತ್ತವನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ ಎನ್ನುವ ಷರತ್ತು ವಿಧಿಸಲಾಗಿತ್ತು.
2024 ರಲ್ಲಿ ಹೊಸ ವೇತನ ಆಯೋಗ ಜಾರಿ
DA 50 % ತಲುಪಿ ಶೂನ್ಯವಾದಾಗ ಕೇಂದ್ರ ಸರ್ಕಾರವು ಮುಂದಿನ ಹೊಸ ವೇತನ ಆಯೋಗವನ್ನು ಸ್ಥಾಪಿಸಬೇಕು. ಅಂದರೆ 8ನೇ ವೇತನ ಆಯೋಗವನ್ನು ರಚನೆ ಮಾಡಬೇಕು ಅಥವಾ ವೇತನ ರಚನೆಯಲ್ಲಿ ಬದಲಾವಣೆಗಳನ್ನು ಮಾಡಬೇಕು ಅಥವಾ ವೇತನವನ್ನು ಹೆಚ್ಚಿಸಲು ಹೊಸ ನಿಯಮವನ್ನು ರೂಪಿಸಬೇಕಾಗುತ್ತದೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರಿ ನೌಕರರ ವೇತನದ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇದು ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ ಆದರೂ ಪ್ರಸ್ತುತ ಸ್ಥಿತಿಯಲ್ಲಿ ಗಮನಿಸಿದರೆ ಇದು ಸಂಭವಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.