Central Government: ಪಾನ್ ಬಳಿಕ ಮತ್ತೊಂದು ದಂಡ ಘೋಷಣೆ ಮಾಡಿದ ಕೇಂದ್ರ ಸರ್ಕಾರ, ಇಂತಹವರು ಕಟ್ಟಲೇಬೇಕು
ಐಟಿಆರ್ ಸಲ್ಲಿಸುವಿಕೆಯು ನಿಗದಿತ ಸಮಯಕ್ಕಿಂತ ಮುಂಚೆ ಕಟ್ಟದೆ ಹೋದಲ್ಲಿ ದಂಡ ಕಟ್ಟ ಬೇಕಾದಂತಹ ಸಾಧ್ಯತೆ ಕೂಡ ಇರುತ್ತದೆ.
Income Tax Return : Income 2022-23 ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (Income Tax Return) ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2023 ಆಗಿದ್ದು,ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸುಮಾರು 2 ವಾರಗಳು ಮಾತ್ರ ಉಳಿದಿವೆ.ಐಟಿಆರ್ ಸಲ್ಲಿಸುವಿಕೆಯು ತೆರಿಗೆದಾರರಿಗೆ ಹಣಕಾಸು ವರ್ಷದಲ್ಲಿ ಪಾವತಿಸಿದ/ಕಡಿತಗೊಳಿಸಿದ ಪ್ರವೇಶ ತೆರಿಗೆಯ ಮರುಪಾವತಿಯನ್ನು ಪಡೆಯಲು ಅನುಮತಿಸುತ್ತದೆ.ನಿಗದಿತ ಸಮಯಕ್ಕಿಂತ ಮುಂಚೆ ಕಟ್ಟದೆ ಹೋದಲ್ಲಿ ದಂಡ ಕಟ್ಟ ಬೇಕಾದಂತಹ ಸಾಧ್ಯತೆ ಕೂಡ ಇರುತ್ತದೆ.
ಆದಾಯ ಇಲಾಖೆ (Income Tax Department) ಈಗಾಗಲೇ ಕಡ್ಡಾಯವಾಗಿ ಸೂಚಿಸಿರುವ ಪ್ರಕಾರ ಐಟಿಆರ್ ಫೈಲ್ ಮಾಡುವ ಸಂದರ್ಭದಲ್ಲಿ ಇರುವಂತಹ ಎಲ್ಲಾ ಆದಾಯ ಮೂಲಗಳನ್ನು ಹಾಗೂ ಹೊರಗಿನ ದೇಶದಲ್ಲಿ ಕೂಡ ಆಸ್ತಿಯನ್ನು ಹೊಂದಿದ್ದರೆ ಅಥವಾ ಆದಾಯದ ಮೂಲವನ್ನು ಹೊಂದಿದ್ದರೆ ಅದರ ವಿವರಗಳನ್ನು ಕೂಡ ಇನ್ಕಮ್ ಟ್ಯಾಕ್ಸ್ ಸಲ್ಲಿಸುವಾಗ ಹೇಳಲೇಬೇಕಾಗುತ್ತದೆ ಇಲ್ಲವಾದಲ್ಲಿ 10 ಲಕ್ಷ ರೂಪಾಯಿಗಳ ವರೆಗೆ ದಂಡ ವನ್ನು ಕಟ್ಟಬೇಕಾಗುತ್ತದೆ.
ಒಂದು ವೇಳೆ ಈ ರೀತಿ ವಿದೇಶದಲ್ಲಿರುವಂತಹ ಹಣವನ್ನು ಮುಚ್ಚಿಡುವ ಪ್ರಯತ್ನವನ್ನು ಮಾಡಿದರೆ Black Money Taxation ಕಾಯ್ದೆಯ ಪ್ರಕಾರ ಅವರ ಮೇಲೆ 10 ಲಕ್ಷ ರೂಪಾಯಿಗಳವರೆಗೆ ದಂಡವನ್ನು ವಿಧಿಸಲಾಗುತ್ತದೆ.ಒಬ್ಬ ವ್ಯಕ್ತಿ ಒಂದು ದೇಶದಲ್ಲಿ ವರ್ಷದ 182 ದಿನಗಳ ಕಾಲ ಇದ್ದರೆ ಆತ ಆದೇಶದ ನಾಗರಿಕ ಎಂಬುದಾಗಿ ಹೇಳಲಾಗುತ್ತದೆ ಹಾಗೂ ಆತ ಅಲ್ಲಿನ ಟ್ಯಾಕ್ಸ್ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಮತ್ತು ಅಲ್ಲಿ ಟ್ಯಾಕ್ಸ್ (Tax) ಅನ್ನು ಕಟ್ಟಬೇಕಾಗುತ್ತದೆ.
ಒಬ್ಬ ವ್ಯಕ್ತಿ ಭಾರತದಲ್ಲಿಯೇ ಇದ್ದುಕೊಂಡು ಬೇರೆ ದೇಶದಲ್ಲಿ ಕೆಲಸ ಮಾಡುತ್ತಿದ್ದು ಹಾಗೂ ಆದೇಶದ ಕರೆನ್ಸಿಯಲ್ಲಿ ಸಂಬಳವನ್ನು ತೆಗೆದುಕೊಳ್ಳುತ್ತಿದ್ದರೆ ಅದರ ವಿವರಗಳನ್ನು ಕೂಡ ನೀವು ಒದಗಿಸಬೇಕಾಗುತ್ತದೆ.ವಿದೇಶಿ ಕೆಲಸದಿಂದ ಪಡೆಯುತ್ತಿರುವ ಸಂಬಳದ ಮೇಲೆ ಏನಾದರೂ ಟ್ಯಾಕ್ಸ್ ಹಾಕಿದ್ದರೆ ಅದನ್ನು ಕ್ರೆಡಿಟ್ ಕ್ಲೈಮ್(Credit Claim) ಮಾಡುವ ಮೂಲಕ ಹಿಂತಿರುಗಿ ವಾಪಸ್ ಪಡೆದುಕೊಳ್ಳಬಹುದಾಗಿದೆ.DTAA ಕಾನೂನಿನ ಮೂಲಕವೂ ಕೂಡ ನೀವು ಡಬಲ್ ಟ್ಯಾಕ್ಸ್ ನಿಂದ ಬಚಾವ್ ಆಗಬಹುದು ಹಾಗೂ ಸಾಕಷ್ಟು ದೊಡ್ಡ ಮಟ್ಟದ ಉಳಿತಾಯವನ್ನು ಮಾಡಬಹುದಾಗಿದೆ.
ಐಟಿಆರ್ ಫೈಲಿಂಗ್ (ITR Filing) ತುಂಬಾ ಕಷ್ಟದ ಕೆಲಸವಲ್ಲ. ಐಟಿಆರ್ ಸಲ್ಲಿಸಲು ಕೆಲವರು ದುಡ್ಡು ಕೊಟ್ಟು ಮತ್ತೊಬ್ಬರಿಂದ ಫೈಲ್ ಮಾಡಿಸುತ್ತಿದ್ದಾರೆ. ಇದರ ಬದಲು ನೀವೇ ಪ್ರಯತ್ನಿಸಿದರೆ, ಕೆಲವು ಸುಲಭ ಹಂತಗಳಲ್ಲಿ ನಿಮ್ಮ ITR ಅನ್ನು ಮನೆಯಲ್ಲಿಯೇ ಕುಳಿತು ಆರಾಮವಾಗಿ ಫೈಲ್ ಮಾಡಬಹುದು.ITR ಅನ್ನು ಆನ್ಲೈನ್ನಲ್ಲಿ ಸಲ್ಲಿಸುವ ಪ್ರಕ್ರಿಯೆಯನ್ನು ಇ-ಫೈಲಿಂಗ್ ಎಂದು ಕರೆಯಲಾಗುತ್ತದೆ. ಆದಾಯ ತೆರಿಗೆ ಇಲಾಖೆಯು ಐಟಿಆರ್ ಇ-ಫೈಲಿಂಗ್ಗಾಗಿ ಸ್ವತಂತ್ರ ಪೋರ್ಟಲ್ ಅನ್ನು ಸ್ಥಾಪಿಸಿದೆ, ಇದು ಸಂಪೂರ್ಣವಾಗಿ ಉಚಿತವಾಗಿದೆ.ಆದಾಯ ತೆರಿಗೆ ಇಲಾಖೆಯಿಂದ ನೋಂದಾಯಿಸಲಾದ ಕೆಲವು ಖಾಸಗಿ ಸಂಸ್ಥೆಗಳು ತಮ್ಮ ವೆಬ್ಸೈಟ್ಗಳ ಮೂಲಕ ಇ-ಫೈಲಿಂಗ್ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುತ್ತವೆ. ಈ ಕೆಲವು ಖಾಸಗಿ ವೆಬ್ಸೈಟ್ಗಳು ಕೆಲವು ಕಾರ್ಯಗಳಿಗಾಗಿ ಶುಲ್ಕ ವಿಧಿಸಬಹುದು.