Lakhpati Didi: ಕೇಂದ್ರದಿಂದ ಮಹಿಳೆಯರಿಗೆ “ಲಖ್ಪತಿ ದೀದಿ ಯೋಜನೆ” ಜಾರಿಗೆ, ಲಕ್ಷಾಧಿಪತಿಗಳಾಗಲಿದ್ದಾರೆ ಮಹಿಳೆಯರು.
ದೇಶದ ಮಹಿಳೆಯರನ್ನು ಲಕ್ಷಾಧಿಪತಿಯನ್ನಾಗಿಸುವ ಉದ್ದೇಶದಿಂದ ಸರ್ಕಾರ ಹೊಸ ಯೋಜನೆಯನ್ನು ಪರಿಚಯಿಸಲು ನಿರ್ಧರಿಸಿದೆ.
Central Government Lakhpati Didi Yojana: ಕೇಂದ್ರ ಸರ್ಕಾರ ಇತ್ತೀಚಿಗೆ ಮಹಿಳೆಯರಿಗಾಗಿ ಹೊಸ ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ. ಮಹಿಳೆಯರಿಗೆ ಆರ್ಥಿಕವಾಗಿ ನೆರವಾಗಬೇಕೆನ್ನುವುದು ಸರ್ಕಾರದ ಉದ್ದೇಶವಾಗಿದೆ. ಈಗಾಗಲೇ ಕೇಂದ್ರದ ಮೋದಿ ಸರ್ಕಾರ ಮಹಿಳೆಯರಿ ವಿವಿಧ ಯೋಜನೆಯನ್ನು ಜಾರಿಗೊಳಿಸಿದೆ.
ಮಹಿಳೆಯರು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ದೇಶದ ಮಹಿಳೆಯರನ್ನು ಲಕ್ಷಾಧಿಪತಿಯನ್ನಾಗಿಸುವ ಉದ್ದೇಶದಿಂದ ಸರ್ಕಾರ ಹೊಸ ಯೋಜನೆಯನ್ನು ಪರಿಚಯಿಸಲು ನಿರ್ಧರಿಸಿದೆ. ಹೊಸ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ದೇಶದ ಪ್ರಧಾನಿಯವರು ಘೋಷಣೆ ಹೊರಡಿಸಿದ್ದಾರೆ.
ದೇಶದ ಮಹಿಳೆಯರಿಗೆ ಹೊಸ ಯೋಜನೆ ಜಾರಿ
ಕೇಂದ್ರದ ಹೊಸ ಯೋಜನೆಯು ಎರಡು ಕೋಟಿ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಉತ್ತೇಜಿಸಲು ಮತ್ತು ತಮ್ಮದೇ ಆದ ಸಣ್ಣ ವ್ಯವಹಾರವನ್ನು ಪ್ರಾರಂಭಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.
“ಹಳ್ಳಿಗಳಲ್ಲಿ ಎರಡು ಕೋಟಿ ಲಕ್ಷ ದೀದಿಗಳನ್ನ ಮಾಡುವುದು ನನ್ನ ಕನಸು, ನೀವು ಹಳ್ಳಿಗೆ ಹೋದಾಗ, ನೀವು ‘ಬ್ಯಾಂಕ್-ವಾಲಿ ದೀದಿ, ಅಂಗನವಾಡಿ ದೀದಿ ಮತ್ತು ದವಾಯಿ-ವಾಲಿ (ಔಷಧಿ) ದೀದಿಯನ್ನ ಕಾಣಬಹುದು. ಹಳ್ಳಿಗಳಲ್ಲಿ ಎರಡು ಕೋಟಿ ಲಕ್ಷ ದೀದಿಗಳನ್ನ ಮಾಡುವುದು ನನ್ನ ಕನಸು” ಎಂದು ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ಹೇಳಿದ್ದಾರೆ. ಮೋದಿ ಸರ್ಕಾರ ಹೊಸ ಯೋಜನೆ ದೇಶದ ಮಹಿಳೆರಿಗೆ ಹೆಚ್ಚಿನ ಆರ್ಥಿಕ ನೆರವನ್ನು ನೀಡಲಿದೆ.
ಮಹಿಳೆಯರಿಗಾಗಿ ಲಖ್ಪತಿ ದೀದಿ ಯೋಜನೆ
ಕೇಂದ್ರ ಸರ್ಕಾರ ಮಹಿಳೆಯರನ್ನು ಲಕ್ಷಾಧಿಪತಿಯನ್ನಾಗಿಸುವ ಉದ್ದೇಶದಿಂದ ಲಖ್ಪತಿ ದೀದಿ ಯೋಜನೆಯನ್ನು ಪರಿಚಯಿಸಿದೆ. ಲಖ್ಪತಿ ದೀದಿ ಯೋಜನೆಯನ್ನು ಈಗಾಗಲೇ ಕೆಲವು ರಾಜ್ಯಗಳಲ್ಲಿ ಪ್ರಾರಂಭಿಸಲಾಗಿದ್ದು, ಕೇಂದ್ರವು ಈಗ ಕಲ್ಯಾಣ ಉದ್ಯಮದ ಅಡಿಯಲ್ಲಿ ಸುಮಾರು ಎರಡು ಕೋಟಿ ಮಹಿಳೆಯರಿಗೆ ತರಬೇತಿ ನೀಡಲು ಯೋಜಿಸುತ್ತಿದೆ.
ಲಖ್ಪತಿ ದೀದಿ ಯೋಜನೆಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಪ್ಲಂಬಿಂಗ್, ಎಲ್ ಇಡಿ ಬಲ್ಪ್ ತಯಾರಿಕೆ, ಡ್ರೋನ್ ಗಳ ನಿರ್ವಹಣೆ ಮತ್ತು ದುರಸ್ತಿ ಮಾಡುವುದು ಸೇರಿದಂತೆ ವಿವಿಧ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗುತ್ತದೆ. ಈ ಯೋಜನೆಯಡಿ ದೇಶದ ಮಹಿಳೆಯರು ಲಾಭವನ್ನು ಪಡೆಯಬಹುದಾಗಿದೆ.