POS Device: ರೇಷನ್ ಕಾರ್ಡ್ ಇರುವವರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ, ಮೋಸ ತಡೆಯಲು ಹೊಸ ನಿಯಮ.

ರೇಷನ್ ಅಂಗಡಿಗಳಲ್ಲಿ ರೇಷನ್ ಧನ್ಯ ಪಡೆಯುವ ಜನರಿಗೆ ಹೊಸ ನಿಯಮ ಘೋಷಣೆ.

Ration Card New Rules 2023: ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರದಿಂದ ಹೊಸ ಸುದ್ದಿ ಹೊರ ಬಿದ್ದಿದೆ. ಸರ್ಕಾರ ಉಚಿತ ಪಡಿತರ ಅವಧಿಯನ್ನು ಡಿಸೇಂಬರ್ ನ ವರೆಗೆ ವಿಸ್ತರಿಸಿದೆ.

ನರೇಂದ್ರ ಮೋದಿ (Narendra Modi) ಸರ್ಕಾರದ ಒನ್ ನೇಷನ್ ಒನ್ ರೇಷನ್ ಕಾರ್ಡ್ (One Nation One Ration Card) ಯೋಜನೆಯನ್ನು ಇಡೀ ದೇಶದಲ್ಲಿ ಜಾರಿಗೊಳಿಸಲಾಗಿದೆ. ನಂತರ ಒನ್ ಲೈನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೆಲ್ ಅಂದರೆ ಪಿಓಎಸ್ ಸಾಧನವನ್ನು ಎಲ್ಲ ಅಂಗಡಿಗಳಲ್ಲಿ ಕಡ್ಡಾಯಗೊಳಿಸುವುದಾಗಿ ಆದೇಶ ಹೊರಡಿದೆ.

Ration Card New Rules 2023
Image Source: India Today

ಪಡಿತರ ಪಡೆಯುವವರಿಗೆ ಹೊಸ ಮಾಹಿತಿ
ಮಾಹಿತಿ ಪ್ರಕಾರ ಹೇಳುವುದಾದರೆ ಈಗ ಪಡಿತರ ತೂಕಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ವಾಸ್ತವವಾಗಿ ರಾಷ್ಟ್ರೀಯ ಆಹಾರ ಭದ್ರಾತಾ ಕಾನೂನಿನಡಿಯಲ್ಲಿ ಕಾರ್ಡ್ ಹೊಂದಿರುವವರಿಗೆ ಸರಿಯಾದ ಪ್ರಮಾಣದ ಆಹಾರ ಧಾನ್ಯಗಳು ಲಭ್ಯವಾಗುವಂತೆ ಖಚಿತಪಡಿಸಿಕೊಳ್ಳಲು ಪಡಿತರ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಮಾಪಕಗಳೊಂದಿಗೆ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೆಲ್ ಸಾಧನಗಳನ್ನು ಲಿಂಕ್ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಭದ್ರತಾ ಕಾನೂನು ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ. ಒನ್ ನೇಶನ್ ಒನ್ ರೇಷನ್ ಕಾರ್ಡ್ ಅಡಿಯಲ್ಲಿ ಜನರು ದೇಶದ ಯಾವುದೇ ರಾಜ್ಯದಲ್ಲಿ ಕೂಡ ಪಡಿತರ ಧಾನ್ಯಗಳನ್ನ ಪಡೆಯಬಹುದಾಗಿದೆ.

Ration Card New Rules 2023
Image Source: India Today

ಪಡಿತರದಲ್ಲಿ ಯಾವುದೇ ಮೋಸ ಆಗಬಾರದು
ಇತ್ತೀಚಿನ ದಿನಗಳಲ್ಲಿ ಪಡಿತರ ಅಂಗಡಿಗಳಲ್ಲಿ ಮೋಸ ನಡೆಯುತ್ತಿರುವ ಕಾರಣ ಎಲ್ಲಾ ಪಡಿತರ ಅಂಗಡಿಗಳನ್ನು ಆನ್ಲೈನ್ ಇಲೆಕ್ಟ್ರಾನಿಕ್ ಪಾಯಿಂಟ್ ಸೇಫ್, ಅಂದರೆ POS ಸಾಧನಗಳೊಂದಿಗೆ ಸಂಪರ್ಕಿಸಲಾಗಿದೆ. ಅದೇ ರೀತಿಯಲ್ಲಿ ಪಡಿತರ ಅಂಗಡಿಗಳಿಗೆ ಹೈ ಬ್ರೀಡ್ ಮಾರಾಟ ಯಂತ್ರಗಳನ್ನ ಕೂಡ ನೀಡಲಾಗುತ್ತಿದೆ. ಇನ್ನು ಈ ಯಂತ್ರ ನೆಟ್ವರ್ಕ್ ಇಲ್ಲದೆ ಇಲ್ಲದೆ ಆಫ್ ಲೈನ್ ಕೂಡ ಕಾರ್ಯ ನಿರ್ವಹಿಸುತ್ತದೆ.

Join Nadunudi News WhatsApp Group

Ration Card New Rules 2023
Image Source: Kannada Prabha

ಪಡಿತರಾದಾರರಿಗೆ ಸಬ್ಸಿಡಿ ರೂಪದಲ್ಲಿ ಅಕ್ಕಿ ಮತ್ತು ಗೋಧಿ ವಿತರಣೆ
ಈ ತಿದ್ದುಪಡಿಯು ಎನ್ಎಫ್ಎಸ್ಎ ಅಡಿಯಲ್ಲಿ ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಕಾರ್ಯಾಚರಣೆಯಲ್ಲಿ ಪಾರದರ್ಶಕತೆಯನ್ನು ಸುಧಾರಿಸುವ ಮೂಲಕ ಕಾಯಿದೆಯ ಸೆಕ್ಷನ್ 12 ರ ಅಡಿಯಲ್ಲಿ ತೂಕದ ಆಹಾರ ಧಾನ್ಯವನ್ನು ಸುಧಾರಿಸುವ ಪ್ರಕ್ರಿಯೆಯನ್ನು ಮುಂದುವರೆಸುವ ಪ್ರಯತ್ನವಾಗಿದೆ ಎಂದು ಸರ್ಕಾರ ಹೇಳುತ್ತದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿಯಲ್ಲಿ ಸರ್ಕಾರವು ಪ್ರತಿ ವ್ಯಕ್ತಿಗೆ ಐದು ಕೆಜಿ ಗೋಧಿ ಮತ್ತು ಅಕ್ಕಿಯನ್ನು ದೇಶದ ಸುಮಾರು 80 ಕೋಟಿ ಜನರಿಗೆ ಕ್ರಮವಾಗಿ ಕೆಜಿಗೆ 2 ಅಥವಾ 3 ರೂಪಾಯಿಗಳ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ.

Ration Card New Rules 2023
Image Source: News18

Join Nadunudi News WhatsApp Group