Kisan Pension: ದೇಶದ ಎಲ್ಲಾ ರೈತರಿಗೆ ಪ್ರತಿ ತಿಂಗಳು ಸಿಗಲಿದೆ 3000 ರೂ ಪಿಂಚಣಿ, ಕೇಂದ್ರದ ಘೋಷಣೆಗೆ ಇಂದೇ ಅರ್ಜಿ ಸಲ್ಲಿಸಿ.
ಕೇಂದ್ರದ ಈ ಯೋಜನೆಯ ಅಡಿಯಲ್ಲಿ ರೈತರಿಗೆ ಸಿಗಲಿದೆ ಪ್ರತಿ ತಿಂಗಳು 3000.
Pradhan Mantri Kisan Maandhan Yojana: ಕೇಂದ್ರ ಸರ್ಕಾರ ಹಿರಿಯ ನಾಗರೀಕರಿಗಾಗಿ ವಿವಿಧ ರೀತಿಯ ಪಿಂಚಣಿಯ ಆಯ್ಕೆಯನ್ನು ನೀಡುತ್ತಿದೆ. ಇನ್ನು ಕೇಂದ್ರ ಮೋದಿ ಸರ್ಕಾರ ಇತ್ತೀಚಿಗೆ ದೇಶದ ರೈತರಿಗಾಗಿ ವಿವಿಧ ಯೋಜನೆಯನ್ನು ಪರಿಚಯಿಸಿದೆ. ಇನ್ನು ಸದ್ಯದಲ್ಲೇ ಪಿಎಂ ಕಿಸಾನ್ ಯೋಜನೆಯ 15 ನೇ ಕಂತಿನ ಹಣ ಶೀಘ್ರದಲ್ಲೇ ರೈತರ ಖಾತೆಗೆ ಜಮಾ ಆಗಲಿದೆ. PM Kisan ಯೋಜನೆಯ ಫಲಾನುಭವಿಗಳು 15 ನೇ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ.
ಇನ್ನು 15 ನೇ ಕಂತಿನ ಹಣದ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ರೈತರಿಗಾಗಿ ಹೊಸ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ರೈತರ ವೃದ್ದಾಪ್ಯದಲ್ಲಿ ನೆರವಾಗಲು ಕೇಂದ್ರ ಸರ್ಕಾರ ಹೊಸ Pension ಯೋಜನೆಯನ್ನು ಜಾರಿಗೊಳಿಸಿದೆ. ಕೇಂದ್ರದ ಈ ಯೋಜನೆಯಿಂದ ರೈತರು ಮಾಸಿಕ ಪಿಂಚಣಿಯನ್ನು (Monthly Pension) ಪಡೆಯುವ ಮೂಲಕ ತಮ್ಮ ವೃದ್ದಾಪ್ಯವನ್ನು ಯಾವುದೇ ಚಿಂತೆ ಇಲ್ಲದೆ ಕಳೆಯಬಹುದಾಗಿದೆ.
Pradhan Mantri Kisan Maandhan Yojana
ದೇಶದಲ್ಲಿನ ಬಡ ರೈತರಿಗೆ ಆರ್ಥಿಕ ನೆರವಾಗಲು ಪ್ರಧಾನ ಮಂತ್ರಿ ಮನ್ ಧನ್ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ ರೈತರಿಗೆ ನಿಗದಿತ ಪಿಂಚಣಿಯ ಮೊತ್ತವನ್ನು ನೀಡಲಾಗುತ್ತದೆ. ಇನ್ನು 18 ರಿಂದ 40 ವರ್ಷ ವಯಸ್ಸಿನವರು ಈ ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯ ಲಾಭವನ್ನು ಪಡೆಯಬಹುದು. ನೀವು ಈ ಯೋಜನೆಯ ಲಾಭ ಪಡೆಯಲು ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿರಬೇಕು.
ಮನ್ ಧನ್ ಯೋಜನೆಯ ಹೂಡಿಕೆಯ ವಿವರ
ಈ ಯೋಜನೆಯಲ್ಲಿ ವಯಸ್ಸಿಗೆ ಅನುಗುಣವಾಗಿ ಹೂಡಿಕೆ ಮುಖ್ಯವಾಗಿರುತ್ತದೆ. ಇನ್ನು 18 ರಿಂದ 40 ವರ್ಷದವರು ಮಾತ್ರ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನೀವು 18 ವರ್ಷದಲ್ಲಿ ಹೂಡಿಕೆ ಪ್ರಾರಂಭಿಸಿದೆ ತಿಂಗಳಿಗೆ 55 ರೂ., 30 ವರ್ಷದಲ್ಲಿ ಹೂಡಿಕೆ ಮಾಡಿದರೆ ತಿಂಗಳಿಗೆ 110 ರೂ. ಹೂಡಿಕೆ ಮಾಡಬೇಕಾಗುತ್ತದೆ. ಇನ್ನು 40 ವಯಸ್ಸಿನಲ್ಲಿ ಯೋಜನೆಗೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 220 ರೂ. ಹೂಡಿಕೆ ಮಾಡಬೇಕು. ನಿಮ್ಮ ವಯಸ್ಸು 60 ವರ್ಷ ದಾಟಿದ ಮೇಲೆ ಪ್ರತಿ ತಿಂಗಳು ಪಿಂಚಣಿಯ ಲಾಭ ಪಡೆಯಬಹುದು.
ದೇಶದ ಎಲ್ಲಾ ರೈತರಿಗೆ ಪ್ರತಿ ತಿಂಗಳು ಸಿಗಲಿದೆ 3000 ರೂ ಪಿಂಚಣಿ
ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯಡಿಯಲ್ಲಿ ರೈತರಿಗೆ ಮಾಸಿಕ 3,000 ರೂಪಾಯಿ ಪಿಂಚಣಿ ನೀಡಲಾಗುತ್ತದೆ. ಅಂದರೆ ವಾರ್ಷಿಕವಾಗಿ ರೂ. 36,000 ಮೊತ್ತವನ್ನು ಪಡೆಯುತ್ತಾರೆ. ಇನ್ನು ಮನ್ ಧನ್ ಯೋಜನೆಯ ಮಾಸಿಕ ಕೊಡುಗೆಯು ರೂ. 55 ರಿಂದ ರೂ. 200 ರ ವರೆಗೆ ಇರುತ್ತದೆ. ಅಂದರೆ ವರ್ಷಕ್ಕೆ ಕನಿಷ್ಠ 660 ಮತ್ತು ಗರಿಷ್ಠ 24,00 ರೂ. ಈ ಹಣವನ್ನು ಕಡಿತಗೊಳಿಸಿದ ನಂತರ ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಬರುತ್ತದೆ. 60 ವರ್ಷಗಳ ನಂತರ ಪಿಎಂ ಕಿಸಾನ್‌ನ ಕಂತಿನಲ್ಲಿ ಯಾವುದೇ ಹಣವನ್ನು ಕಡಿತಗೊಳಿಸಲಾಗುವುದಿಲ್ಲ.