Recharge Price Hike: ಏರ್ಟೆಲ್ ಮತ್ತು Jio ಬಳಕೆದಾರರಿಗೆ ಬಿಗ್ ಅಪ್ಡೇಟ್, ರಿಚಾರ್ಜ್ ಕುರಿತಂತೆ ಹೊಸ ಘೋಷಣೆ

ರಿಚಾರ್ಜ್ ದರ ಕಡಿಮೆಯಾಗುವ ಬಗ್ಗೆ ಕೇಂದ್ರದ ಸ್ಪಷ್ಟನೆ

Central Govt Clarification About Recharge Price Hike: ಸದ್ಯ ದೇಶದ ಜನತೆಗೆ ದಿನನಿತ್ಯ ವಸ್ತುಗಳ ಬೆಲೆಯ ಏರಿಕೆಯಿಂದಾಗಿ ರೋಸಿಹೋಗಿದರೆ ಎನ್ನಬಹುದು. ಅದರ ಜೊತೆಗೆ ಇದೀಗ ದೇಶದ ಜನಪ್ರಿಯ ಟೆಲಿಕಾಂ ನೆಟ್ವರ್ಕ್ ಕಂಪನಿಗಳು ತಮ್ಮ ಪ್ರೀಪೈಡ್ ಮತ್ತು ಪೋಸ್ಟ್ ಪೈಡ್ ರಿಚಾರ್ಜ್ ದರಗಳನ್ನು ಏರಿಸುವ ಮೂಲಕ ಜನಸಾಮಾನ್ಯರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ.

ದೇಶದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ Jio ತನ್ನ ರಿಚಾರ್ಜ್ ದರದಲ್ಲಿ ಶೇ. 20 ರಷ್ಟು ಹೆಚ್ಚಳವನ್ನು ಮಾಡಿದೆ. ಜಿಯೋ ತನ್ನ ರಿಚಾರ್ಜ್ ಬೆಲೆಯನ್ನು ಹೆಚ್ಚಿಸಿದ ಬೆನ್ನಲ್ಲೇ ಏರ್ಟೆಲ್ ಮತ್ತು Vi ಕೂಡ ತನ್ನ ಪ್ರೀಪೈಡ್ ಮತ್ತು ಪೋಸ್ಟ್ ಪೈಡ್ ರಿಚಾರ್ಜ್ ದರಗಳನ್ನು ಏರಿಸಿವೆ. ಸದ್ಯ ಟೆಲಿಕಾಂ ಕಂಪನಿಗಳು ರಿಚಾರ್ಜ್ ದರವನ್ನು ಇಳಿಕೆ ಮಾಡಲಿ ಎಂದು ಜನರು ಕಾಯುತ್ತಿದ್ದಾರೆ.

Central Govt Clarification About Recharge Price Hike
Image Credit: The week

ಜಿಯೋ, ಏರ್ಟೆಲ್, ವಿ ರಿಚಾರ್ಜ್ ದರ ಕಡಿಮೆಯಾಗುತ್ತ…?
ರಿಲಯನ್ಸ್ ಜಿಯೋ ಮತ್ತು ಏರ್‌ ಟೆಲ್ ಪ್ರಿಪೇಯ್ಡ್ ಮತ್ತು ಪೋಸ್ಟ್‌ ಪೇಯ್ಡ್ ಬೆಲೆಗಳನ್ನು ಹೆಚ್ಚಿಸಿದ ನಂತರ, ವೊಡಾಫೋನ್ ಐಡಿಯಾ ಕೂಡ ಬೆಲೆಗಳನ್ನು ಹೆಚ್ಚಿಸಿದೆ. ಹಾಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ರೀಚಾರ್ಜ್ ಶುಲ್ಕ ಕಡಿತಗೊಳಿಸಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿವೆ. ಜನಸಾಮಾನ್ಯರು ರಿಚಾರ್ಜ್ ದರ ಕಡಿಮೆ ಮಾಡಲು ಕೇಂದ್ರ ಸರ್ಕಾರವನ್ನು ಒತ್ತಾಯಿಸದುತ್ತಿದ್ದಾರೆ. ಖಾಸಗಿ ಕಂಪನಿಗಳ ನಿರ್ಧಾರ ವಿರುದ್ಧ ನಿಲ್ಲುವಂತೆ ಜನರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಈ ಬಗ್ಗೆ ಮಹತ್ವದ ಸ್ಪಷ್ಟನೆ ನೀಡಿದೆ.

ರಿಚಾರ್ಜ್ ದರ ಕಡಿಮೆಯಾಗುವ ಬಗ್ಗೆ ಕೇಂದ್ರದ ಸ್ಪಷ್ಟನೆ
ಮೂರೂ ಟೆಲಿಕಾಂ ಕಂಪನಿಗಳು ಬೆಲೆ ಏರಿಕೆ ಮಾಡಿರುವುದರಿಂದ ಸರ್ಕಾರ ಬೆಲೆ ಇಳಿಕೆ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಸದ್ಯ ಜನರ ಈ ಒತ್ತಾಯದ ಬಗ್ಗೆ ಸರ್ಕಾರ ಸ್ಪಷ್ಟ ಉತ್ತರ ನೀಡಿದೆ. ಖಾಸಗಿ ಕಂಪನಿಗಳ ಬೆಲೆ ಏರಿಕೆಯಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುವಂತಿಲ್ಲ. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ (TRAI) ನಿಯಮಗಳ ಪ್ರಕಾರ, ಖಾಸಗಿ ಟೆಲಿಕಾಂ ಕಂಪನಿಗಳು ಬೆಲೆ ಏರಿಕೆ ಸೇರಿದಂತೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಹೀಗಾಗಿ ಇಂತಹ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

Recharge Price Hike News
Image Credit: India Today

Join Nadunudi News WhatsApp Group

Join Nadunudi News WhatsApp Group