Fan And Induction: ಕೇಂದ್ರ ಸರ್ಕಾರದಿಂದ ಸಿಗಲಿದೆ ಪ್ರತಿ ಮನೆಗೆ ಫ್ಯಾನ್ ಮತ್ತು ಅಡುಗೆ ಮಾಡಲು ಇಂಡಕ್ಷನ್, ಕೇಂದ್ರದ ಘೋಷಣೆ.
ಕೇಂದ್ರ ಸರ್ಕಾರ ವಿದ್ಯುತ್ ಉಳಿತಾಯಕ್ಕಾಗಿ ಎರಡು ಯೋಜನೆಯನ್ನು ಪರಿಚಯಿಸಿದೆ.
Central Govt Supply Fan And Induction: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇದ್ದೆ ಇರುತ್ತದೆ. ವಿದ್ಯುತ್ ಸಂಪರ್ಕ ಪ್ರತಿ ಮನೆಗೆ ಅಗತ್ಯವಾಗಿದೆ ಎನ್ನಬಹುದು. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಕೊಡ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ಮುಂದಾಗಿದೆ. ಸದ್ಯ ದೇಶದಾದ್ಯಂತ ವಿದ್ಯುತ್ ಬಳಕೆ ಹೆಚ್ಚಿದೆ ಎನ್ನಬಹುದು. ಇನ್ನು ಕೇಂದ್ರ ಸರ್ಕಾರ ವಿದ್ಯುತ್ ಉಳಿಕೆಗಾಗಿ ವಿವಿಧ ಕ್ರಮ ಕೈಗೊಳ್ಳುತ್ತಿದೆ. ಇದೀಗ ಕೇಂದ್ರ ಸರ್ಕಾರ ವಿದ್ಯುತ್ ಉಳಿತಾಯಕ್ಕಾಗಿ ಎರಡು ಯೋಜನೆಯನ್ನು ಪರಿಚಯಿಸಿದೆ.
ಕೇಂದ್ರ ಸರ್ಕಾರದಿಂದ ಸಿಗಲಿದೆ ಪ್ರತಿ ಮನೆಗೆ ಫ್ಯಾನ್ ಮತ್ತು ಅಡುಗೆ ಮಾಡಲು ಇಂಡಕ್ಷನ್
ವಿದ್ಯುತ್ ಉಳಿತಾಯಕ್ಕಾಗಿ ಕೇಂದ್ರ ಸರ್ಕಾರ ಎರಡು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಅಡಿಯಲ್ಲಿ, ಕಡಿಮೆ ವಿದ್ಯುತ್ ಬಳಸುವ 1 ಕೋಟಿ ಫ್ಯಾನ್ ಮತ್ತು 20 ಲಕ್ಷ ಇಂಡಕ್ಷನ್ ಓವನ್ ಗಳನ್ನು ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ವರದಿಗಳ ಪ್ರಕಾರ, ಈ ಫ್ಯಾನ್ಗಳು ಮತ್ತು ಫ್ಯಾನ್ಗಳನ್ನು ಎನರ್ಜಿ ಎಫಿಷಿಯನ್ಸಿ ಸರ್ವಿಸಸ್ ಲಿಮಿಟೆಡ್ ವಿತರಿಸಲಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.
ಈ ಕಾರ್ಯಕ್ರಮದ ಅಡಿಯಲ್ಲಿ, ಇಂಧನ ಉಳಿತಾಯ ಸ್ಮಾರ್ಟ್ ಬ್ರಶ್ ಲೆಸ್ ಡೈರೆಕ್ಟ್ ಕರೆಂಟ್ ಫ್ಯಾನ್ ಗಳು ಮತ್ತು ವಿದ್ಯುತ್ ಉಳಿತಾಯದ ಇಂಡಕ್ಷನ್ ಕುಕ್ಕರ್ ಗಳನ್ನು ದೇಶಾದ್ಯಂತ ವಿತರಿಸಲಾಗುತ್ತದೆ. ಸಾಂಪ್ರದಾಯಿಕ ಆಹಾರ ತಯಾರಿಕೆಗೆ ಹೋಲಿಸಿದರೆ ಇದು 25 ರಿಂದ 30% ರಷ್ಟು ವಿದ್ಯುತ್ ಉಳಿಸುವ ಗುರಿಯನ್ನು ಹೊಂದಿದೆ.
ಆಹಾರ ತಯಾರಿಕೆಯ ಅಭ್ಯಾಸಗಳನ್ನು ಪರಿಸರ ಸ್ನೇಹಿಯನ್ನಾಗಿ ಮಾಡಲು ಮತ್ತು ನಾಗರಿಕರಿಗೆ ಶುದ್ಧ ಗಾಳಿ ಮತ್ತು ಉತ್ತಮ ಆರೋಗ್ಯವನ್ನು ಒದಗಿಸುವ ಗುರಿಯನ್ನು EESL ಹೊಂದಿದೆ. ಇದಕ್ಕಾಗಿ ಈ ಸಾರ್ವಜನಿಕ ವಲಯದ ಕಂಪನಿ ಮಾಡರ್ನ್ ಎನರ್ಜಿ ಕುಕಿಂಗ್ ಸರ್ವಿಸಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದು ದೇಶಾದ್ಯಂತ ಅಡುಗೆ ಮನೆಗಳಲ್ಲಿ ಆಹಾರ ತಯಾರಿಕೆಗಾಗಿ ಆಧುನಿಕ ವಿದ್ಯುತ್ ಉಪಕರಣಗಳ ಬಳಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.