Chakravarthy Chandrachud: 7 ವರ್ಷದ ಬಳಿಕ ಸಿಹಿಸುದ್ದಿ ಕೊಟ್ಟ ಚಕ್ರವರ್ತಿ ಚಂದ್ರಚೂಡ್

ನಟನೆ ಹಾಗೂ ನಿರ್ದೇಶಕನಾಗಿ ಸಾಕಷ್ಟು ಖ್ಯಾತಿ ಪಡೆದ ಚಂದ್ರಚೂಡ್ ಸತತ ವಿರಾಮದ ನಂತರ ಮತ್ತೆ ಆಕ್ಷನ್ ಕಟ್ ಹೇಳಲು ಸಿದ್ದರಾಗಿದ್ದಾರೆ

Chakravarthy Chandrachud New Movie Direction: ಖ್ಯಾತ ನಿರ್ದೇಶಕ ಚಕ್ರವರ್ತಿ ಚಂದ್ರ ಚೂಡ್ (Chakravarthy Chandrachud) ಅವರು ಕನ್ನಡ, ತಮಿಳು ಸೇರಿದಂತೆ ಮಲಯಾಳಂ ಚಲನ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ ನಿರ್ದೇಶನದ ಜೊತೆಗೆ ನಟನಾಗಿಯೂ ಚಿತ್ರಗಳಲ್ಲಿ ನಟಿಸಿದ್ದಾರೆ.

ಇನ್ನು ಜನ್ಮ, ಮೇಲೊಬ್ಬ ಮಾಯಾವಿ, ಡೆಮೊ ಪೀಸ್, ರಂಗನಾಯಕಿ, ಫುಟ್‌ಬಾಲ್ ಮರಿಯಮ್ಮನ (ಮಲಯಾಳಂ), ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಇವರು ನಟನೆ ಹಾಗೂ ನಿರ್ದೇಶಕನಾಗಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ.

Chakravarthy Chandrachud New Movie Direction
Image Credit: Cinemaexpress

ಬಿಗ್ ಬಾಸ್ ಕನ್ನಡ ಸೀಸನ್ 8
ಚಕ್ರವರ್ತಿ ಚಂದ್ರಚೂಡ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲಿ ಸ್ಪರ್ಧಿಸಿದ್ದರು. ಬಿಗ್ ಬಾಸ್ ಮೂಲಕ ಕನ್ನಡಿಗರಿಗೆ ಚಂದ್ರಚೂಡ್ ಅವರು ಇನ್ನಷ್ಟು ಹತ್ತಿರವಾಗಿದ್ದರು. ಇನ್ನು ಚಕ್ರವರ್ತಿ ಚಂದ್ರಚೂಡ್ ಅವರು ಸುಮಾರು ವರ್ಷಗಳನ್ನು ನಿರ್ದೇಶನಕ್ಕೆ ಬ್ರೇಕ್ ನೀಡಿದರು. ಇವರ ನಿರ್ದೇಶನದ ಚಿತ್ರಗಳನ್ನು ಜನರು ಮಿಸ್ ಮಾಡಿಕೊಂಡಿದ್ದರು. ಆದರೆ ಇದೀಗ ಮತ್ತೆ ಚಕ್ರವರ್ತಿ ಚಂದ್ರಚೂಡ್ ಅವರು ನಿರ್ದೇಶನ ಮಾಡಲಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ. ಹೊಸ ನಟನ ಚಿತ್ರಕ್ಕೆ ಚಂದ್ರಚೂಡ್ ಆಕ್ಷನ್ ಕಟ್ ಹೇಳಲಿದ್ದಾರೆ.

7 ವರ್ಷದ ನಂತರ ಆಕ್ಷನ್ ಕಟ್ ಹೇಳಲಿದ್ದಾರೆ ಚಂದ್ರಚೂಡ್
ಬಿಗ್ ಬಾಸ್ ಕನ್ನಡ ಸೀಸನ್ 8 ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಅವರು ಸದ್ಯ ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ ಚಿತ್ರದ ಸಂಭಾಷಣೆ ಬರಹದಲ್ಲಿ ಬ್ಯುಸಿ ಆಗಿದ್ದಾರೆ. ಇದ್ರ ನಡುವೆ ಚಕ್ರವರ್ತಿ ಚಂದ್ರಚೂಡ್ ಅವರು ಹೊಸ ಚಿತ್ರದ ನಿರ್ದೇಶನ ಮಾಡಲು ನಿರ್ಧರಿಸಿದ್ದಾರೆ. ಸತತ 7 ವರ್ಷದ ವಿರಾಮದ ನಂತರ ಮತ್ತೆ ಆಕ್ಷನ್ ಕಟ್ ಹೇಳಲು ಚಕ್ರವರ್ತಿ ಚಂದ್ರಚೂಡ್ ಸಿದ್ದರಾಗಿದ್ದಾರೆ.

After 7 years, Chandrachud will tell the action cut
Image Credit: Wikibio

ಸದ್ಯದಲ್ಲೇ ಟೈಟಲ್ ಅನಾವರಣ
ಇನ್ನು ಚಂದ್ರಚೂಡ್ ಅವರ ಹೊಸ ಚಿತ್ರಕ್ಕೆ ಅನ್ ಲಾಕ್ ರಾಘವ ಚಿತ್ರದ ಖ್ಯಾತಿಯ ಮಿಲಿಂದ್ ಗೌತಮ್ ನಾಯಕನಾಗಿ ನಟಿಸಿದ್ದಾರೆ. ಇನ್ನು ಚಕ್ರವರ್ತಿ ಚಂದ್ರಚೂಡ್ ಅವರ ಹುಟ್ಟಹಬ್ಬದ ದಿನದಂದು ಹೊಸ ಚಿತ್ರದ ನಿರ್ದೇಶನದ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಾಗಿದೆ. ಸೆಪ್ಟೆಂಬರ್ 2 ರಂದು ಶೀರ್ಷಿಕೆ ಅನಾವರಣಗೊಳ್ಳುವ ಬಗ್ಗೆ ಮಾಹಿತಿ ಲಭಿಸಿದೆ. ಸಿನಿಮಾದ ಟೈಟಲ್ ಅನಾವರದ ಮುನ್ನ ಕಮ್ ಬ್ಯಾಕ್ ಸಿಂಧೂರ ವೀರ ಲಕ್ಷ್ಮಣ ನಾಯಕ ಟ್ಯಾಗ್ ಲೈನ್ ಅನ್ನು ಬಹಿರಂಗಪಡಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group