Darshan Apology: ಹಬ್ಬದ ದಿನವೇ ತಪ್ಪಿಗೆ ಕ್ಷಮೆ ಕೇಳಿದ ಡಿ ಬಾಸ್, ನಟ ದರ್ಶನ್ ನಡೆಗೆ ವ್ಯಾಪಕ ಮೆಚ್ಚುಗೆ.

ಇನ್ಸ್ಟಾಗ್ರಾಮ್ ನಲ್ಲಿ ಅಧಿಕೃತವಾಗಿ ಕ್ಷಮೆ ಕೇಳಿದ ನಟ ದರ್ಶನ್.

Challenging Star Darshan Apology To Media: ಸ್ಯಾಂಡಲ್ ವುಡ್ ನ ಸ್ಟಾರ್ ನಟ ದರ್ಶನ್ (Darshan) ಅವರು ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ದರ್ಶನ ಅವರು ಆಗಾಗ ತಮ್ಮ ಸಿನಿಮಾ ವಿಚಾರವಾಗಿ ಸುದ್ದಿಯಾಗುತ್ತಾರೆ. ಇನ್ನು ದರ್ಶನ್ ಹಾಗೂ ಮಾಧ್ಯಮದವರ ಮದ್ಯೆ ಇರುವ ಮನಸ್ತಾಪ ಎಲ್ಲರಿಗು ತಿಳಿದಿರುವ ವಿಚಾರ. ಮಾದ್ಯಮದವರು ದರ್ಶನ್ ಪರ ಯಾವುದೇ ಸುದ್ದಿಗಳನ್ನು ಪ್ರಸಾರಮಾಡುತ್ತಿಲ್ಲ.

ಜನವರಿ 26 ರಂದು ದರ್ಶನ್ ಅವರ ಕ್ರಾಂತಿ ಚಿತ್ರ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿತ್ತು. ಆದರೆ ದರ್ಶನ್ ಅವರ ಕ್ರಾಂತಿ ಚಿತ್ರದ ಪ್ರಚಾರ ಮಾಧ್ಯಮಗಳಲ್ಲಿ ಬರಲಿಲ್ಲ. ದರ್ಶನ್ ಅಭಿಮಾನಿಗಳೇ ಚಿತ್ರದ ಪ್ರಮೋಷನ್ ಅನ್ನು ಮಾಡಿದ್ದರು. ಈ ಹಿಂದೆ ದರ್ಶನ್ ಅವರು ಮಾಧ್ಯಮದವರಿಗೆ ಪತ್ರ ಬರೆದಿದ್ದರು. ಇದೀಗ ವರಮಹಾಲಕ್ಷ್ಮಿ ಹಬ್ಬದ ಶುಭ ದಿನದಂದು ದರ್ಶನ್ ಅವರು ಮೀಡಿಯಾ ಮಿತ್ರರಿಗೆ ಕ್ಷಮೆ ಕೋರಿದ್ದಾರೆ. ನಟ ದರ್ಶನ್ ಅವರು ಈ ಬಗ್ಗೆ ತಮ್ಮ ಅಧಿಕೃತ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Challenging Star Darshan Apology To Media
Image Credit: Timesofindia

ಮಾಧ್ಯಮದವರ ಬಳಿ ಕ್ಷಮೆ ಕೋರಿದ ಚಾಲೆಂಜಿಂಗ್ ಸ್ಟಾರ್
“ಸಮಸ್ತ ಕರ್ನಾಟಕ ಜನತೆಗೆ, ನನ್ನ ಸೆಲೆಬ್ರೆಟಿಗಳಿಗೆ, ಹಿರಿಯ ಪತ್ರಕರ್ತರಿಗೆ, ಮಾಧ್ಯಮದವರಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಗಳು. ಕಳೆದ ಸುಮಾರು ವರ್ಷದಿಂದ ನನ್ನ ಹಾಗೂ ಕನ್ನಡ ಮಾಧ್ಯಮ ಮಿತ್ರರ ನಡುವೆ ಒಂದು ಕಂದಕ ಉಂಟಾಗಿತ್ತು. ಈ ವರಮಹಾ ಲಕ್ಷ್ಮಿ ಹಬ್ಬದ ಮುನ್ನ ದಿನ, ಮಿತ್ರ ರಾಕ್ ಲೈನ್ ವೆಂಕಟೇಶ್ ನೇತೃತ್ವದಲ್ಲಿ ನನ್ನ ಹಾಗೂ ಕನ್ನಡದ ಪ್ರಮುಖ ಮಾಧ್ಯಮಗಳ ಸಂಪಾದಕರ ನಡುವೆ ಮಾತುಕತೆ ನಡೆದು ಇಡೀ ಪ್ರಕರಣ ಸುಖಾಂತ್ಯಕಂಡಿದೆ.

ಕೆಲ ವರ್ಷಗಳ ಹಿಂದೆ ನನ್ನ ಆಡಿಯೋ ಒಂದು ದುರುದ್ದೇಶಪೂರ್ವಕವಾಗಿ ವೈರಲ್ ಆಗಿ ಇಡೀ ವಿವಾದಕ್ಕೆ ಕಾರಣವಾಗಿತ್ತು. ಅದು ಯಾವುದೊ ವಿಷಮ ಗಳಿಗೆಯಲ್ಲಿ ಒಬ್ಬ ವ್ಯಕ್ತಿಯ ಮಾತಿಗೆ ಪ್ರತಿಕ್ರಿಯೆಯಾಗಿತ್ತು. ಅದು ಮಾಧ್ಯಮದ ಇತರ ವ್ಯಕ್ತಿಗಳ ಕುರಿತು ಆಡಿದ ಮಾತಾಗಿರಲಿಲ್ಲ. ಆ ವ್ಯಕ್ತಿ ಯಾವ ದುರುದ್ದೇಶದಿಂದ ಮಾಡಿದರು ಗೊತ್ತಿಲ್ಲ. ಆದರೂ ಆ ವ್ಯಕ್ತಿಗೆ ಒಳ್ಳೆಯದಾಗಲಿ. ಮುಂದೆ ಆ ವ್ಯಕ್ತಿ ಈ ರೀತಿಯ ದುರುದ್ದೇಶವನ್ನು ಮರುಕಳಿಸದಿರಲಿ.

Join Nadunudi News WhatsApp Group

ಆದರೂ ಅಂತಹ ಮಾತಿನಿಂದ ನೋವುಂಟಾಗಿದ್ದರೆ ಮಾಧ್ಯಮದ ಹಿರಿಯರಿಗೆ ಕ್ಷಮೆ ಕೋರುವುದರಲ್ಲಿ ತಪ್ಪಿಲ್ಲ. ಈ ಅಯಾಚಿತ ಘಟನೆಗೆ ಪ್ರಜಾಪ್ರಭುತ್ವದ ನಾಲ್ಕನೇ ಆಂಗವಾದ ಮಾಧ್ಯಮ ರಂಗದ ಕ್ಷಮೆ ಇರಲಿ. ಒಂದು ಉತ್ತಮವಾದ ಸಮಾಜಕ್ಕೆ ಒಂದು ಒಳ್ಳೆಯ ಮಾಧ್ಯಮಗಳ ಅಗತ್ಯವಿದೆ. ನನಗೂ ಮಾಧ್ಯಮಗಳ ಬಗ್ಗೆ ಗೌರವವಿದೆ. ಚಿತ್ರರಂಗದ ನನ್ನ ಬೆಳವಣಿಗೆಯಲ್ಲಿ ಮಾಧ್ಯಮಗಳು ಪ್ರೀತಿಯಿಂದ ನೀಡಿದ ಪ್ರಚಾರದ ಪಾಲು ಸಾಕಷ್ಟಿದೆ.

ಈ ಹಿಂದೆ ಆಗಿರುವ ಕಹಿ ಘಟನೆಯನ್ನು ಮರೆತು ನಾವೆಲ್ಲ ಮುಂದೆ ಸಾಗೋಣ. ಕಾಣದ ಕನ್ನಡಿಗರು ಕನ್ನಡ ನೆಲ, ಕನ್ನಡ ಜಲ, ಕನ್ನಡ ಚಿತ್ರರಂಗದ ಪ್ರಗತಿಗೆ ಜೊತೆಯಾಗಿ ಕೆಲಸ ಮಾಡೋಣ, ಪ್ರೀತಿಯಿರಲಿ, ನನ್ನ ಪ್ರೀತಿಯ ಸೆಲೆಬ್ರೆಟಿಗಳು ನನ್ನ ಭಾವನೆಯನ್ನು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ. ಪ್ರೀತಿಯಿಂದ ದರ್ಶನ್ ತೂಗುದೀಪ ” ಎಂದು ದರ್ಶನ್ ಅವರು ಬರೆದುಕೊಂಡಿದ್ದಾರೆ.

Join Nadunudi News WhatsApp Group