Chandan And Niveditha: ಪ್ರೀತಿಸಿ ಮದುವೆಯಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ…?

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ...?

Chandan And Niveditha Age Difference: ಇದೀಗ ಚಂದನವನದ ಕ್ಯೂಟ್ ಕಪಲ್ ಆಗಿ ಗುರುತಿಸಿಕೊಂಡಿರುವ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ವಿಚ್ಛೇದನದ ಬಗ್ಗೆ ಸುದ್ದಿಗಳು ವೈರಲ್ ಆಗುತ್ತಿದೆ. ಮದುವೆಯಾಗಿ ಕೇವಲ 4 ವರ್ಷದಲ್ಲಿ ಬೇರೆಯಾಗಿರುವ ಈ ಜೋಡಿಯ ಕಥೆ ಎಲ್ಲರಿಗು ಅಚ್ಚರಿ ನೀಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಜೊತೆಯಾಗಿದ್ದ ನೀವಿ ಚಂದು ಜೋಡಿ ವಿಚ್ಛೇದನದ ವಿಚಾರ ಸಾಕಷ್ಟು ಜನರಿಗೆ ಶಾಕ್ ನೀಡಿದೆ ಎನ್ನಬಹುದು.

ಈ ಇಬ್ಬರ ವಿಚ್ಛೇದನಕ್ಕೆ ಕಾರಣ ಏನಿರಬಹುದು ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಚ್ಛೇದನಕ್ಕೆ ಇದೆ ಕಾರಣ ಎನ್ನುವ ಬಗ್ಗೆ ಹಲವು ವಿಚಾರಗಳು ಕೇಳಿ ಬರುತ್ತಿದೆ. ಅದರಲ್ಲಿ ಚಂದನ್ ಹಾಗೂ ನಿವೇದಿತಾ ವಯಸ್ಸಿನ ಅಂತರ ಕೂಡ ಒಂದು ಕಾರಣವಾಗಿದೆ.

Chandan And Niveditha Age Difference
Image Credit: Starsunfolded

ಪ್ರೀತಿಸಿ ಮದುವೆಯಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ
ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಜೋಡಿಯ ವಯಸ್ಸಿನ ಅಂತರ ತಿಳಿದುಕೊಳ್ಳಲು ಕೆಲವರಿಗೆ ಹೆಚ್ಚು ಕುತೂಹಲ ಇದೆ. ಅದರಲ್ಲೂ ಈ ಜೋಡಿಯ ವಿಚ್ಛೇದನದ ಬಗ್ಗೆ ಸುದ್ದಿ ವೈರಲ್ ಆಗುತ್ತಿದ್ದಂತೆ ಇಬ್ಬರ ನಡುವಿನ ವಯಸ್ಸಿನ ಅಂತರ ಬಾರಿ ಚರ್ಚೆಗೆ ಕಾರಣವಾಗಿದೆ. ಚಂದನ್ ಶೆಟ್ಟಿ ಅವರು 17 ಸೆಪ್ಟೆಂಬರ್ 1989 ರಲ್ಲಿ ಹುಟ್ಟಿದ್ದು ಅವರಿಗೆ ಈಗ 35 ವರ್ಷ ವಯಸ್ಸಾಗಿದೆ. ಚಂದನ್ ಅವರು ನಿವೇದಿತಾ ಗೌಡ ಅವರಿಗಿಂತ 10 ವರ್ಷ ದೊಡ್ಡವರು.

ನಿವೇದಿತಾ ಗೌಡ ಅವರು 1998 ಮೇ 17 ರಂದು ಹುಟ್ಟಿದ್ದು ಅವರ ವಯಸ್ಸು 25 ವರ್ಷ. ಈ ಜೋಡಿಯ ನಡುವೆ 10 ವರ್ಷ ಏಜ್ ಗ್ಯಾಪ್ ಇದೆ. ಸದ್ಯ ಈ ಏಜ್ ಗ್ಯಾಪ್ ಇಬ್ಬರ ನಡುವಿನ ವಿಚ್ಛೇದನಕ್ಕೆ ಕಾರಣವಾಗಿದೆ ಎನ್ನುವ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತ ಜೋಡಿ ದಿಢೀರ್ ವಿಚ್ಛೇದನ ಪಡೆದಿರುವುದು ಎಲ್ಲರಿಗು ಆಶ್ಚರ್ಯ ನೀಡಿದೆ ಎನ್ನಬಹುದು. ತಮ್ಮ ವಿಚ್ಛೇದನದ ಹಿಂದಿನ ಕಾರಣದ ಬಗ್ಗೆ ಇಬ್ಬರು ಯಾವುದೇ ಮಾಹಿತಿ ನೀಡಿಲ್ಲ. ಪರಸ್ಪರ ಒಪ್ಪಿಗೆಯ ಮೇರೆಗೆ ಇಬ್ಬರು ವಿಚ್ಛೇದನ ಪಡೆಯುತ್ತಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

Join Nadunudi News WhatsApp Group

Chandan And Niveditha Gowda Divorce
Image Credit: Vistaranews

Join Nadunudi News WhatsApp Group