Chadan Kumar: ಡಾ. ಬ್ರೋ ಅನ್ನು ಹೊಗಳಿದ ಚಂದನ್ ಕುಮಾರ್, ವೈರಲ್ ಆಗಿದೆ ಚಂದನ್ ಮಾಡಿದ ಪೋಸ್ಟ್.

ಡಾ ಬ್ರೋ ಅವರ ಫೋಟೋವನ್ನು ಹಂಚಿಕೊಂಡು ಚಂದನ್ ಅವರು ಇವರ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

Chadan Kumar About Dr. Bro: ಕನ್ನಡಿಗರ ನೆಚ್ಚಿನ ಸ್ಟಾರ್ ಯೂಟ್ಯೂಬರ್ ಡಾ ಬ್ರೋ (Da Bro) ಅಲಿಯಾಸ್ ಗಗನ್   ಶ್ರೀನಿವಾಸ್ (Gagan Srinivas) ಇತ್ತೀಚಿಗೆ ಬಾರಿ ಸುದ್ದಿಯಲ್ಲಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲೇ ಯೂಟ್ಯೂಬ್ ವಿಡಿಯೋ ಮೂಲಕ ಅದೆಷ್ಟೋ ದೇಶ ವಿದೇಶಗಳಿಗೆ ಭೇಟಿ ನೀಡಿ ಸಾಕಷ್ಟು ದೇಶಗಳನ್ನು ಕನ್ನಡಿಗರಿಗೆ ಪರಿಚಯಿಸಿದ್ದಾರೆ.

ಇನ್ನು ಡಾ ಬ್ರೋ ಸೋಶಿಯಲ್ ಮೀಡಿಯಾದಲ್ಲಿ ಸರಿಸುಮಾರು ಮಿಲಿಯನ್ ನಷ್ಟು ಫಾಲೋವರ್ಸ್ ಅನ್ನು ಪಡೆದುಕೊಂಡಿದ್ದಾರೆ. ಇನ್ನು ಕಿರುತೆರೆಯ ಸ್ಟಾರ್ ನಟನಟಿಯರಿಂದ ಹಿಡುದು ಸಾಕಷ್ಟು ಜನರು ಡಾ ಬ್ರೋ ಅವರ ವಿಡಿಯೋವನ್ನು ಮೆಚ್ಚಿಕೊಳ್ಳುತ್ತಾರೆ.

Chandan appreciated the achievement of Dr Bro
Image Credit: Instagram

ಸ್ಟಾರ್ ಯೂಟ್ಯೂಬರ್ ಡಾ ಬ್ರೋ
ಇನ್ನು ಇತ್ತೀಚೆಗಷ್ಟೇ ವೀಕೆಂಡ್ ವಿಥ್ ರಮೇಶ್ ಸೀಸನ್ 5 ಆರಂಭಗೊಂಡಾಗ ಡಾ ಬ್ರೋ ಅವರು ಕುರ್ಚಿ ಏರಲಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಈ ವೈರಲ್ ಸುದ್ದಿಯ ಕಾರಣಕ್ಕೆ ಜೀ ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರ ಬಳಿ ಡಾ ಬ್ರೋ ಅವರನ್ನು ವೀಕೆಂಡ್ ವಿಥ್ ರಮೇಶ್ ಸೀಸನ್ ಗೆ ಕರೆಸುವ ಬಗ್ಗೆ ಪ್ರಶ್ನೆ ಕೇಳಲಾಗಿತ್ತು.

ಈ ವೇಳೆ ರಾಘವೇಂದ್ರ ಹುಣಸೂರು ಅವರು ಡಾ ಬ್ರೋ ನಿಮ್ಮ ಅಜ್ಜಿಗೆ ಗಾಟಾ ಎಂದು ಕೇಳುವ ಮೂಲಕ ಅವರ ಸಾಧನೆ ಅಷ್ಟೊಂದಿಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದರು.ಇನ್ನು ರಾಘವೇಂದ್ರ ಹುಣಸೂರು ಅವರ ಈ ಹೇಳಿಕೆ ಡಾ ಬ್ರೋ ಅವರ ಅಭಿಮಾನಿಗಳಿಗೆ ಬೇಸರ ತರಸಿತ್ತು.

Join Nadunudi News WhatsApp Group

ಈ ಕಾರಣ ರಾಘವೇಂದ್ರ ಹುಣಸೂರು ಅವರನ್ನು ಸಾಕಷ್ಟು ಬಾರಿ ಟ್ರೋಲ್ ಮಾಡಲಾಗಿತ್ತು. ಇದೀಗ ಲಕ್ಷ್ಮಿ ಬಾರಮ್ಮ ಧಾರಾವಾಹಿ ಖ್ಯಾತಿಯ ಚಂದನ್  (Chandan Kumar) ಅವರು ಸೋಶಿಯಲ್ ಮೀಡಿಯಾದಲ್ಲಿ ಡಾ ಬ್ರೋ ಅವರನ್ನು ಹಾಡಿ ಹೊಗಳಿದ್ದಾರೆ. ಡಾ ಬ್ರೋ ಸಾಧನೆಯನ್ನು ಹೊಗಳುವ ಮೂಲಕ ರಾಘವೇಂದ್ರ ಹುಣಸೂರು ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

Chandan kumar about Star YouTuber Dr Bro
Image Credit: Instagram

ಡಾ ಬ್ರೋ ಸಾಧನೆಗೆ ಮೆಚ್ಚುಗೆ ಸೂಚಿಸಿದ ಚಂದನ್
ಡಾ ಬ್ರೋ ಅವರ ಒಂದು ಫೋಟೋವನ್ನು ಹಂಚಿಕೊಂಡು ಚಂದನ್ ಅವರು ಇವರ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ” ನಿಮ್ಮ ಪಯಣಕ್ಕೆ ಆಲ್ ದಿ ಬೆಸ್ಟ್. ಯಾರು ಏನೇ ಹೇಳಲಿ ನೀವು ಸಾಧಕ. ನನ್ನ ಕಡೆಯಿಂದ ಬೆಸ್ಟ್ ವಿಶೇಸ್.

ನಮ್ಮ ಅಮ್ಮ ಅಜ್ಜಿಗೆ ನೀವು ಯಾರು ಎಂದು ತಿಳಿದಿದೆ. ನಮ್ಮಿಬ್ಬರಿಗೂ ಪರಿಚಯವಿಲ್ಲ ಆದರೆ ನಿಮ್ಮ ವಿಡಿಯೋ, ಪ್ರಾಮಾಣಿಕತೆ, ನೈಜ್ಯತೆ, ತರಲೆ ಹಾಗೂ ಕೊಂಕುನುಡಿಗಳು ನನಗೆ ಸಿಕ್ಕಾಪಟ್ಟೆ ಇಷ್ಟ” ಎಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚಂದನ್ ಅವರ ಪೋಸ್ಟ್ ಬಾರಿ ವೈರಲ್ ಆಗುತ್ತಿದ್ದು ಜನ ಮೆಚ್ಚುಗೆ ಗಳಿಸಿದೆ.

Join Nadunudi News WhatsApp Group