Chandan Shetty: ವಿಚ್ಛೇಧನದ ನಂತರವೂ ಚಂದನ್ ಮತ್ತು ನೀವಿ ಕೈ ಕೈ ಹಿಡಿದುಕೊಂಡು ಬಂದಿದ್ದು ಯಾಕೆ..?

ಚಂದನ್ ಶೆಟ್ಟಿ ವಿಚ್ಛೇದನದ ಬಳಿಕವೂ ನಿವೇದಿತಾ ಗೌಡ ಕೈಹಿಡಿದುಕೊಂಡು ಹೋಗಿದ್ದು ಯಾಕೆ...?

Chandan Shetty And Nivedita Gowda: ಚಂದನವನದಲ್ಲಿ ವಿಚ್ಛೇದನದ ಸುದ್ದಿ ಸಾಕಷ್ಟು ಕೇಳಿಬರುತ್ತಿದೆ. ಬಿಗ್ ಬಾಸ್ ನ ಸ್ಪರ್ದಿಗಳಾಗಿ ಕೊನೆಗೆ ಗುರಿತಿಸಿಕೊಂಡಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ 4 ವರ್ಷದ ಹಿಂದೆ ಪ್ರೀತಿ ಮಾಡಿ ಮದುವೆಯಾಗಿದ್ದರು. ಆದರೆ ಸದ್ಯ ಜೂನ್ 2024 ರಲ್ಲಿ ಈ ಜೋಡಿ ತಮ್ಮ 4 ವರ್ಷ ಸಾಂಸಾರಿಕ ಜೀವನವನ್ನು ಅಂತ್ಯಗೊಳಿಸಿಕೊಂಡಿದ್ದಾರೆ. ಚಂದನ್ ಶೆಟ್ಟಿ ನಿವೇದಿತಾ ಗೌಡ ವಿಚ್ಛೇದನದ ಬಗ್ಗೆ ಎಲ್ಲರಿಗು ತಿಳಿದೇ ಇದೆ.

ಈ ಜೋಡಿ ವಿಚ್ಛೇದನ ಪಡೆಯುವ ಸಮಯದಲ್ಲಿ ಸಾಕಷ್ಟು ಟೀಕೆಗೆ ಗುರುಯಾಗಿತ್ತು. ಅದರಲ್ಲೂ ವಿಚ್ಛೇದನದ ಬಳಿಕವೂ ಚಂದನ್ ಶೆಟ್ಟಿ ನಿವೇದಿತಾ ಗೌಡ ಕೈಹಿಡಿದುಕೊಂಡು ಹೋಗುತ್ತಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಸದ್ಯ ಚಂದನ್ ಶೆಟ್ಟಿ ವಿಚ್ಛೇದನದ ಬಳಿಕವೂ ನಿವೇದಿತಾ ಗೌಡ ಕೈಹಿಡಿದುಕೊಂಡು ಹೋಗಿದ್ದು ಯಾಕೆ ಎನ್ನುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Chandan Shetty And Niveditha Gowda
Image Credit: Outlookindia

ಚಂದನ್ ಶೆಟ್ಟಿ ವಿಚ್ಛೇದನದ ಬಳಿಕವೂ ನಿವೇದಿತಾ ಗೌಡ ಕೈಹಿಡಿದುಕೊಂಡು ಹೋಗಿದ್ದು ಯಾಕೆ…?
ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ವಿಚ್ಛೇದನದ ನಂತರ ಕೈ ಹಿಡಿದು ಕೋರ್ಟ್‌ನಿಂದ ಹೊರನಡೆದರು.ಈ ವೀಡಿಯೊವನ್ನು ಅನೇಕರು ನೋಡಿದ್ದಾರೆ ಮತ್ತು ಈ ಬಗ್ಗೆ ಮಾತನಾಡಿದ್ದಾರೆ. ಅನೇಕ ವಿಚ್ಛೇದಿತ ದಂಪತಿಗಳು ಪರಸ್ಪರರ ಮುಖವನ್ನು ನೋಡುವುದಿಲ್ಲ. ಆದರೆ ಇವರಿಬ್ಬರು ಕೈಕೈಹಿಡಿದುಕೊಂಡು ಹೋಗಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಇದೀಗ ಈ ಸನ್ನಿವೇಶದ ಬಗ್ಗೆ ಚಂದನ್ ಶೆಟ್ಟಿ ಉತ್ತರ ನೀಡಿದ್ದಾರೆ. ಇತ್ತೀಚೆಗೆ ಚಂದನ್ ಶೆಟ್ಟಿ ಅಭಿನಯದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರು’ ಚಿತ್ರದ ಪತ್ರಿಕಾಗೋಷ್ಠಿ ಇತ್ತು. ಆ ವೇಳೆ ಅವರಿಗೆ ಈ ಬಗ್ಗೆ ಪ್ರಶ್ನೆ ಕೇಳಲಾಯಿತು. ಈ ಸಮಯದಲ್ಲಿ ಚಂದನ್ ಸ್ಪಷ್ಟನೆ ನೀಡಿದ್ದಾರೆ.

ಸ್ಪಷ್ಟನೆ ನೀಡಿದ ಚಂದನ್ ಶೆಟ್ಟಿ
“ವಿಚ್ಛೇದನದ ನಂತರವೂ ಸ್ನೇಹಿತರಾಗಿರಬೇಕು .ಮದುವೆಯಾಗಿ ಕೆಲವು ವರ್ಷವಾದರೂ ಒಮ್ಮೊಮ್ಮೆ ಹೊಂದಾಣಿಕೆ ಇಲ್ಲದಿದ್ದರೆ ಬೇರೆಯಾದಾಗ ಗಲಾಟೆ ಮಾಡಿ ಜಗಳವಾಡಬಾರದು. ಹಲವು ಘಟನೆಗಳಲ್ಲಿ ಕೊಲೆ ನಡೆದು ಹೋಗಿದೆ. ಸಮಾಜ ಬೆಳೆದಿದೆ, ನಾವು ಬೆಳೆದಿದ್ದೇವೆ. ನಮಗೂ ಕೂಡ ಒಂದು ಟೈಮ್ ನಲ್ಲಿ ಬದುಕಲು ಸಾಧ್ಯವಿಲ್ಲ ಅಂತ ಅಂದಾಗ ನಾವಿಬ್ಬರು ಸರಳವಾಗಿ ವಿಚ್ಛೇದನ ತಗೆದುಕೊಂಡೆವು” ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

Join Nadunudi News WhatsApp Group

ನಾವಿಬ್ಬರೂ ಒಂದೇ ರಂಗದಲ್ಲಿ ಇದ್ದೇವೆ. ಇವೆಂಟ್ ನೋಡಿದ ತಕ್ಷಣ ನಿವೇದಿತಾಳನ್ನು ನೋಡಿದ ನಾನು ಮುಖ ತಿರುಗಿಸಿಕೊಂಡು ಹೋಗುವುದು ಚೆನ್ನಾಗಿರಲ್ಲ. ನಾವು ವಿಚ್ಛೇದನ ಪಡೆದ ದಿನ, ಅನೇಕ ಜನರು ನಮ್ಮ ವೀಡಿಯೊಗಳನ್ನು ಮಾಡುತ್ತಿದ್ದಾರೆ. ಒತ್ತಡವಿತ್ತು, ಇಷ್ಟು ದಿನ ಒಟ್ಟಿಗೆ ಇದ್ದೆವು. ಹಾಗಾಗಿ ಆ ದಿನ ನಿವೇದಿತಾ ಗೌಡ ಅವರನ್ನು ರಕ್ಷಿಸಲು ಅವರ ಕೈ ಹಿಡಿದು ಹೋಗಿದ್ದೆ” ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.

Chandan Shetty And Niveditha Gowda Divorce
Image Credit: Zee News

Join Nadunudi News WhatsApp Group