Niveditha In Kerala: ಪೂಲ್ ನಲ್ಲಿ ಸಕತ್ ಸ್ಟೆಪ್ ಹಾಕಿದ ಚಂದನ್ ಮತ್ತು ನಿವೇದಿತಾ, ವಿಡಿಯೋ ವೈರಲ್ ಆಗಿದೆ.

ಕೇರಳದಲ್ಲಿ ರಜಾ ದಿನದ ಪ್ರವಾಸವನ್ನ ಮಾಡುತ್ತಿದ್ದಾರೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ

Chandan Shetty And Niveditha Holiday Trip: ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ (Chandan Shetty)  ಹಾಗೂ ನಿವೇದಿತಾ ಗೌಡ (Niveditha Gowda) ಜೋಡಿ ಇದೀಗ ಹಾಲಿಡೇ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಕೇರಳದ ಸುಂದರ ತಾಣಗಳಿಗೆ ನಿವಿ ಚಂದನ್ ಜೋಡಿ ಭೇಟಿ ನೀಡಿದ್ದಾರೆ.

ಅಲ್ಲಿನ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಕೇರಳ ಟ್ರಿಪ್ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇದೀಗ ನಿವಿ ಚಂದನ್ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social Media)  ಬಾರಿ ವೈರಲ್ ಆಗುತ್ತಿದೆ.

Niveditha Gowda and Chandan Shetty, who are traveling in Kerala, shared a video from there and the video went viral.
Image Credit: instagram

ಕೇರಳದಲ್ಲಿ ಚಂದನ್ ನಿವಿ ಹಾಲಿಡೇ ಟ್ರಿಪ್
ಚಂದನವನದ ಕ್ಯೂಟ್ ಜೋಡಿಗಳಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕೂಡ ಒಬ್ಬರು. ಬಿಗ್ ಬಾಸ್ ಸೀಸನ್ 5 (Bigg Boss Season 5) ರಲ್ಲಿ ಕನ್ನಡಿಗರಿಗೆ ಈ ಜೋಡಿಯ ಪರಿಚಯವಾಗಿದೆ. ಇನ್ನು ಈ ಸೀಸನ್ ನ ವಿನ್ನರ್ ಪಟ್ಟವನ್ನು ಚಂದನ್ ಪಡೆದಿದ್ದರು.

ಹಾಗೆಯೆ ಚಂದನ್ ಶೆಟ್ಟಿ ಕನ್ನಡದಲ್ಲಿ ಸಾಕಷ್ಟು ಹಾಡುಗಳನ್ನು ಹಾಡಿ ಬಹಳಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಇನ್ನು ನಿವೇದಿತಾ ಗೌಡ ಅವರು ರಿಯಾಲಿಟಿ ಶೋ ಗಳಲ್ಲಿ ಸ್ಪರ್ದಿಸುವ ಮೂಲಕ ಅಭಿಮಾಗಳ ಗಮನ ಸೆಳೆಯುತ್ತಲೇ ಇರುತ್ತಾರೆ.

Join Nadunudi News WhatsApp Group

ಇದೀಗ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಜೋಡಿ ಕೇರಳದಲ್ಲಿ ಹಾಲಿಡೇ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಕೇರಳದಲ್ಲಿನ ವೈಲ್ಡ್ ಪ್ಲಾನೆಟ್ ಬನಾ ಹೈಟ್ಸ್ ರೆಸಾರ್ಟ್ ನಲ್ಲಿ ಈ ಜೋಡಿ ಕಾಲ ಕಳೆಯುತ್ತಿದ್ದಾರೆ. ಈಜುಕೊಳದಲ್ಲಿ ನಿಂತು ಚಂದನ್ ಹಾಗೂ ನಿವೇದಿತಾ ಡ್ಯಾಶ್ ಸಾಂಗ್ ಗೆ ಸ್ಟೆಪ್ ಹಾಕಿದ್ದಾರೆ. ಡಾನ್ಸ್ ವಿಡಿಯೋವನ್ನು ನಿವಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Nivedita Gowda and Chandan Shetty danced in a swimming pool in Kerala
Image Credit: instagram

ಕೇರಳದಲ್ಲಿ ಮಸ್ತ್ ಸ್ಟೆಪ್ ಹಾಕಿದ ಚಂದನ್ ಶೆಟ್ಟಿ ನಿವೇದಿತಾ
“ವೈಲ್ಡ್ ಪ್ಲಾನೆಟ್ ಬನಾ ಹೈಟ್ಸ್ ರೆಸಾರ್ಟ್ಸ್ ನಲ್ಲಿ ನಮ್ಮ ವಾಸ್ತವ್ಯ ಅದ್ಭುತವಾಗಿತ್ತು. ಪಕ್ಷಿಗಳ ಚಿಲಿಪಿಲಿ ಸದ್ದಿಗೆ ಎಚ್ಚರಗೊಳ್ಳುವುದು ಮತ್ತು ಶಾಂತಿಯುತ ವಾತಾವರಣದಲ್ಲಿ ನೆನೆಯುವುದು ನಮಗೆ ಇಷ್ಟವಾಯಿತು. ಹಚ್ಚ ಹಸಿರಿನಿಂದ ಸುತ್ತುವರೆದಿರುವ ಮತ್ತು ಉಸಿರುಕಟ್ಟುವ ನೋಟಗಳಿಂದ ಇದು ನಗರ ಜೀವನದ ಗದ್ದಲದಿಂದ ಪರಿಪೂರ್ಣವಾದ ವಿಹಾರವಾಗಿದೆ.

ಪ್ರಕೃತಿಯ ನಡುವೆ ಹೊಸ ವಿರಾಮವನ್ನು ಬಯಸುವ ಯಾರಿಗಾದರೂ ಈ ರೆಸಾರ್ಟ್ ಅನ್ನು ಶಿಫಾರಸ್ಸು ಮಾಡಬಹುದು” ಎಂದು ನಿವಿ ಕ್ಯಾಪ್ಷನ್ ಕೊಟ್ಟು ಡಾನ್ಸ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Join Nadunudi News WhatsApp Group