Chandrayaan 3 Budget: ಆದಿಪುರುಷ ಚಿತ್ರಕ್ಕಿಂತ ಚಂದ್ರಯಾನ 3 ಗೆ ಕಡಿಮೆ ಖರ್ಚು, ಲೆಕ್ಕಾಚಾರ ಹೀಗಿದೆ
ಚಂದ್ರಯಾನ 3 ಉಡಾವಣೆಗಾಗಿ ಇಸ್ರೋ ಬಹಳ ಕಡಿಮೆ ಹಣವನ್ನ ಖರ್ಚು ಮಾಡಿದ್ದು ಇದು ಜನರ ಮೆಚ್ಚುಗೆಗೆ ಕಾರಣವಾಗಿದೆ.
Chandrayaan 3 Budget: ತೆಲುಗಿನ ಸ್ಟಾರ್ ನಟ ಪ್ರಭಾಸ್ (Prabhas) ಹಾಗೂ ಕೃತಿ ಸನೋನ್ (Kriti Sanon) ನಟನೆಯ ಆಧಿಪುರುಷ್ (Adipurush) ಚಿತ್ರ ತೆರೆ ಕಂಡು ವಿವಾದವನ್ನು ಸ್ರಷ್ಟಿಸಿತ್ತು. ಇನ್ನು ರಾಮಾಯಣದ ಕಥೆ ಆಧಾರಿತ ಈ ಚಿತ್ರ ಬರೋಬ್ಬರಿ 700 ಕೋಟಿ ಬಜೆಟ್ ಬಳಸಿ ಚಿತ್ರವನ್ನು ಮಾಡಲಾಗಿತ್ತು. ಆದರೆ ಚಿತ್ರವೂ ನಿರೀಕ್ಷಿಸಿದ ಯಶಸ್ಸನ್ನು ಕಂಡಿಲ್ಲ.
ಇದೀಗ ಆದಿಪುರುಷ್ ಚಿತ್ರ ಮತ್ತೆ ಟ್ರೋಲ್ ಗೆ ಗುರಿಯಾಗುತ್ತಿದೆ. ಚಂದ್ರಯಾನ 3 (Chandrayaan 3 ) ಕ್ಕೆ ಭರಿಸಲಾದ ವೆಚ್ಚಕ್ಕೂ ಆಧಿಪುರುಷ್ ಚಿತ್ರ ನಿರ್ಮಾಣದ ವೆಚ್ಚಕ್ಕೂ ಹೋಲಿಸಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
ಚಂದ್ರಯಾನ 3 ಬಜೆಟ್ ಹಾಗೂ ಆದಿಪುರುಷ್ ಬಜೆಟ್
ಚಂದ್ರಯಾನ ಮಿಷನ್ 3 ಕೈಗೊಳ್ಳಲು ಇಸ್ರೋ 615 ಕೋಟಿ ರೂ. ಖರ್ಚು ಮಾಡಿದೆ. ಆದರೆ ಇತ್ತೀಚಿಗೆ ತೆರೆಕಂಡ ಆದಿಪುರುಷ್ 700 ಕೋಟಿ ಬಜೆಟ್ ಖರ್ಚು ಮಾಡಿದೆ. ಚಿತ್ರ ಬಿಡುಗಡೆಯಾಗಿ ಕೇವಲ 350 ಕೋಟಿ ಹಣ ಗಳಿಸಿತ್ತು. ಇನ್ನು ಚಂದ್ರಯಾನ 3 ಬಜೆಟ್ ಹಾಗೂ ಆದಿಪುರುಷ್ ಬಜೆಟ್ ಅನ್ನು ಗಮನಿಸಿದರೆ ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ ಎನ್ನುವುದು ತಿಳಿಯುತ್ತದೆ ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.
???? Approximate Budget
• Adipurush – ₹700 Crore
• Chandrayaan 3 – ₹615 CroreGives a Fair Understanding of Priorities
— Ravisutanjani (@Ravisutanjani) July 8, 2023
ಇನ್ನು ನಿಯಮಿತ ಬಜೆಟ್ ನಲ್ಲಿ ಮಹತ್ತರವಾದುದನ್ನು ಇಸ್ರೋ ಸಾಧಿಸಲು ಮುಂದಾಗಿದೆ. ಒಂದು ವೇಳೆ ಸರ್ಕಾರವು ಇನ್ನಷ್ಟು ಬಜೆಟ್ ನೀಡಿದ್ದರೆ ಇನ್ನಷ್ಟು ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ತಿಳಿಸಿದರು.
ಇನ್ನು ಕೆಲವರು ಸಿನಿಮಾ ಹಾಗೂ ಚಂದ್ರಯಾನಕ್ಕೂ ಹೋಲಿಕೆ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚಂದ್ರಯಾನ 3 ಬಜೆಟ್ ಹಾಗೂ ಆದಿಪುರುಷ್ ಬಜೆಟ್ ಹೈಲೆಟ್ ಆಗುತ್ತಿದೆ. ಚಂದ್ರಯಾನ 3 ಕ್ಕಾಗಿ ಇಸ್ರೋ ಸುಮಾರು 615 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ತಿಳಿದುಬಂದಿದೆ.
ಭಾರತದಲ್ಲಿ ಚಂದ್ರಯಾನ 3 ಉಡಾವಣೆ
ಭಾರತದ ಮೂರನೇ ಚಂದ್ರನ ಅನ್ವೇಷಣಾ ಕಾರ್ಯಾಚರಣೆಯಾದ ಚಂದ್ರಯಾನ 3 ಉಡಾವಣೆ ಇಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ಯಶಸ್ವಿಯಾಗಿ ನೆರವೇರಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 3 ಯಶಸ್ವಿಯಾಗಿ ಉಡಾವಣೆಗೊಂಡಿದೆ. ಇದು ಆಗಸ್ಟ್ ತಿಂಗಳಲ್ಲಿ ಚಂದ್ರನ ಅಂಗಳಕ್ಕೆ ತಲುಪಲಿದೆ.
ಚಂದ್ರಯಾನ 33 .84 ಲಕ್ಷ ಕಿಲೋ ಮೀಟರ್ ದೂರದ ಪ್ರಯಾಣವನ್ನು ಆರಂಭಿಸಿದೆ. ಇದು ಚಂದ್ರನನ್ನು ತಲುಪಲು ಸುಮಾರು 42 ದಿನಗಳನ್ನು ತೆಗೆದುಕೊಳ್ಳುತ್ತದೆ. lvm -3 ರಾಕೆಟ್ ಇದನ್ನು 179 ಕಿ ಮೀ ಎತ್ತರದಲ್ಲಿ ಬಿಟ್ಟಿದೆ. ಚಂದ್ರಯಾನ-3 ಅನ್ನು ಎಲ್‌ವಿಎಂ 3-4 ಪ್ಯಾಕೆಟ್ ಮೂಲಕ 179 ಕಿ.ಮೀ ವರೆಗೆ ಸಾಗಿಸಲಾಯಿತು. ಅದರ ನಂತರ ಚಂದ್ರಯಾನ 3 ಅನ್ನು ಮುಂದಿನ ಪ್ರಯಾಣಕ್ಕಾಗಿ ಬಾಹ್ಯಾಕಾಶಕ್ಕೆ ತಳ್ಳಲಾಯಿತು, ಈ ಕೆಲಸದಲ್ಲಿ ರಾಕೆಟ್ ಕೇವಲ 16:15 ನಿಮಿಷಗಳನ್ನು ತೆಗೆದುಕೊಂಡಿದೆ.