Chandrayaan 3: ಚಂದ್ರಯಾನ-3 ಸೆರೆಹಿಡಿದ ‘ಚಂದ್ರನ ಮೊದಲ ದೃಶ್ಯ ಬಿಡುಗಡೆ’, ವಿಡಿಯೋ ಬಿಡುಗಡೆ ಮಾಡಿದ ISRO.

ಚಂದ್ರಯಾನ 3 ಸೆರೆಹಿಡಿದ ಚಂದ್ರನ ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಸ್ಥೆ.

Chandrayaan 3 First look Of Moon: ದೇಶದಲ್ಲಿ ಇದು ಮೂರನೇ ಬಾರಿಗೆ ಚಂದ್ರನ ಮೇಲೆ ಅನ್ವೇಷಣೆ ನೆಡೆಯುತ್ತಿದ್ದೆ. ಚಂದ್ರಯಾನ 3 ಅನ್ನು ಜುಲೈ 14 ರಂದು ಉಡಾವಣೆ ಮಾಡಲಾಗಿತ್ತು. ಇದು ಆಗಸ್ಟ್ ನಲ್ಲಿ ಚಂದ್ರನ ಅಂಗಳಕ್ಕೆ ತಲುಪುತ್ತದೆ ಎಂದು ಹೇಳಲಾಗಿತ್ತು ಹಾಗೆ ಈಗ ಅದು ಚಂದ್ರನ ಹತ್ತಿರ ತಲುಪಿದೆ. ಇದು ಚಂದ್ರನ ಮೇಲ್ಮೈಯನ್ನು ವಿಶ್ಲೇಷಣೆ ಮಾಡುವ ತಂತ್ರಜ್ಞಾನವನ್ನು ಹೊಂದಿದೆ.

ಚಂದ್ರನ ಮೊದಲ ದೃಶ್ಯ ಸೆರೆಹಿಡಿದ ಚಂದ್ರಯಾನ 3
ಭಾರತದ ಮೂರನೇ ಮಾನವರಹಿತ ಚಂದ್ರಯಾನ 3 (Chandrayaan 3) ಚಂದ್ರನ ಕಕ್ಷೆಯನ್ನು ಶನಿವಾರ ಯಶಸ್ವಿಯಾಗಿ ಪ್ರವೇಶ ಮಾಡಿದೆ. ಇದು ಚಂದ್ರಯಾನ ಕಾರ್ಯಾಚರಣೆಗೆ ಪ್ರಮುಖ ಮೈಲಿಗಲ್ಲಾಗಿದೆ. ಚಂದ್ರಯಾನ 3 ಸೆರೆಹಿಡಿದ ಚಂದ್ರನ ಮೊದಲ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ಭಾನುವಾರ ಬಿಡುಗಡೆ ಮಾಡಿದೆ.

Chandrayaan 3 captured the first look of the moon
Image Credit: Indianexpress

ಜುಲೈ 14 ರಂದು ಯಶಸ್ವಿಯಾಗಿ ಉಡಾವಣೆಯಾದ ಚಂದ್ರಯಾನ 3 , 40 ದಿನಗಳ ಪ್ರಯಾಣದಲ್ಲಿ ಶನಿವಾರ 22 ದಿನಗಳನ್ನು ಪೂರ್ಣಗೊಳಿಸಿದೆ. ಹಾಗೆ ಈ ಬಾಹ್ಯಾಕಾಶ ನೌಕೆಯ ಕಾರ್ಯ ವಿಧಾನವನ್ನು ಬೆಂಗಳೂರಿನ ಇಸ್ರೋ (Isro) ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಮತ್ತು ಕಮಾಂಡ್ ನೆಟ್ವರ್ಕ್ ನ ಮಿಷನ್ ಅಪರೇಶನ್ಸ್ ಕಾಂಪ್ಲೆಕ್ಸ್ ನಿಂದ ನಿರಂತರವಾಗಿ ಮೇಲ್ವಿಚಾರಣೆ ನೆಡೆಸಲಾಗುತ್ತಿದೆ.

ಚಂದ್ರನ ಮಿಷನ್ ಇಲ್ಲಿತನಕ ಯಾವುದೇ ತೊಂದರೆ ಇಲ್ಲದೆ ಸುಗಮವಾಗಿ ಸಾಗಿದೆ ಮತ್ತು ಈ ತಿಂಗಳ ಅಂತ್ಯದಲ್ಲಿ ಅಂದರೆ ಆಗಸ್ಟ್ 23 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಯಲ್ಲಿ ಮೃದುವಾಗಿ ಇಳಿಯುತ್ತದೆ. ಎಂದು ಇಸ್ರೋ ನಿರೀಕ್ಷೆ ಮಾಡಿದೆ. ಜುಲೈ 14 ರಂದು ಉಡಾವಣೆಯಾದ ಚಂದ್ರಯಾನ 3 ಬಾಹ್ಯಾಕಾಶ ನೌಕೆ ಚಂದ್ರನ ಮೂರನೇ ಎರಡರಷ್ಟು ದೂರವನ್ನ ಕ್ರಮಿಸಿದೆ ಎಂದು ಇಸ್ರೋ ಶುಕ್ರವಾರ ತಿಳಿಸಿತ್ತು.

Join Nadunudi News WhatsApp Group

ವಿಕ್ರಮ್ ಲ್ಯಾಂಡರ್ ಅನ್ನು ಮೃದುವಾಗಿ ಇಳಿಸಲು ಪ್ರಯತ್ನಿಸುವ ಮೊದಲು ಮುಂದಿನ 17 ದಿನಗಳು ಇಸ್ರೋಗೆ ನಿರ್ಣಾಯಕವಾಗಿದೆ. ಆಗಸ್ಟ್ 17 ರಂದು ವಿಕ್ರಮ್ ಮತ್ತು ಪ್ರಜ್ಞಾನ್ ಒಳಗೊಂಡ ಲ್ಯಾಂಡಿಂಗ್ ಮಾಡ್ಯೂಲ್ ಪ್ರೊಪಲ್ಷನ್ ಮಾಡ್ಯೂಲ್ ನಿಂದ ಬೇರ್ಪಡುವ ಮೊದಲು ನಾಲ್ಕು ಚಂದ್ರ ಬೌಂಡ್ ಕುಶಲತೆಗಳನ್ನು ಉಪಯೋಗಿಸಿಕೊಂಡು ಬಾಹ್ಯಾಕಾಶ ನೌಕೆಯ ಎತ್ತರವನ್ನು ಕಡಿಮೆ ಮಾಡಿದರು, ಬಾಹ್ಯಾಕಾಶ ನೌಕೆಯ ಸರಿಯಾದ ಓರೆಯನ್ನು ತಿಳಿದುಕೊಳ್ಳಲು ಇಸ್ರೋ ಸಣ್ಣ ಹೊಂದಾಣಿಕೆಯನ್ನು ಮಾಡಿಕೊಳ್ಳಲಿದೆ ಎನ್ನಲಾಗಿದೆ.

Join Nadunudi News WhatsApp Group