Chandrayaan 3: ಚಂದ್ರಯಾನ 3 ಚಂದ್ರನ ಬಳಿ ತಲುಪುವುದು ಯಾವಾಗ? ದಿನ ಸಮಯಗಳ ವಿವರ
ಚಂದ್ರಯಾನ 3 ಚಂದ್ರನನ್ನು ತಲುಪಲು ಎಷ್ಟು ದಿನ ತೆಗೆದುಕೊಳ್ಳುತ್ತದೆ.
Chandrayaan 3 Update: ಭಾರತದಲ್ಲಿ ಮೂರನೇ ಬಾರಿಗೆ ಚಂದ್ರನ ಅನ್ವೇಷಣೆ ನಡೆಯುತ್ತಿದೆ. ಭಾರತದ ಮೂರನೇ ಬಾರಿಗೆ ಚಂದ್ರನ ಅನ್ವೇಷಣಾ ಕಾರ್ಯಾಚರಣೆಯಾದ ಚಂದ್ರಯಾನ 3 ಉಡಾವಣೆ ಇಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ಯಶಸ್ವಿಯಾಗಿ ನೆರವೇರಿದೆ.
ಚಂದ್ರಯಾನ 3
ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 3 ಯಶಸ್ವಿಯಾಗಿ ಉಡಾವಣೆಗೊಂಡಿದೆ. ಇದು ಆಗಸ್ಟ್ ತಿಂಗಳಲ್ಲಿ ಚಂದ್ರನ ಅಂಗಳಕ್ಕೆ ತಲುಪಲಿದೆ. ಚಂದ್ರಯಾನ 3 ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡುವ ಮತ್ತು ನಮ್ಮ ಜ್ಞಾನವನ್ನು ಹೆಚ್ಚಿಸುವ ವೈಜ್ಞಾನಿಕ ಉಪಕರಣಗಳನ್ನು ಸಹ ಹೊಂದಿದೆ.
ಪ್ರಸಿದ್ಧ ಭಾರತೀಯ ವಿಜ್ಞಾನಿ ವಿಕ್ರಂ ಸಾರಾಭಾಯ್ ಅವರಿಗೆ ಗೌರವಾರ್ಥವಾಗಿ ಚಂದ್ರಯಾನ 3 ಮಿಷನ್ ಲ್ಯಾಂಡರ್ ಗೆ ವಿಕ್ರಂ ಎಂದು ಹೆಸರಿಡಲಾಗಿದೆ. ಚಂದ್ರಯಾನ ಮಿಷನ್ ಜೊತೆಯಲ್ಲಿರುವ ರೋವರ್ ಅನ್ನು ಸೂಕ್ತವಾಗಿ ಪ್ರಜ್ಞಾನ್ ಎಂದು ಹೆಸರಿಡಲಾಗಿದೆ. ಇದನ್ನು ಸಂಸ್ಕೃತ ಪದದಿಂದ ಪಡೆಯಲಾಗಿದ್ದು, ಬುದ್ದಿವಂತಿಕೆ ಎಂಬ ಅರ್ಥವನ್ನು ಸೂಚಿಸುತ್ತದೆ.
ಚಂದ್ರಯಾನ 3 ಚಂದ್ರನನ್ನು ತಲುಪಲು ಎಷ್ಟು ದಿನ ತೆಗೆದುಕೊಳ್ಳುತ್ತದೆ
ಚಂದ್ರಯಾನ 33 .84 ಲಕ್ಷ ಕಿಲೋಮೀಟರ್ ದೂರದ ಪ್ರಯಾಣವನ್ನು ಆರಂಭಿಸಿದೆ. ಇದು ಚಂದ್ರನನ್ನು ತಲುಪಲು ಸುಮಾರು 42 ದಿನಗಳನ್ನು ತೆಗೆದುಕೊಳ್ಳುತ್ತದೆ. lvm -3 ರಾಕೆಟ್ ಇದನ್ನು 179 ಕಿ ಮೀ ಎತ್ತರದಲ್ಲಿ ಬಿಟ್ಟಿದೆ. ಈ ಚಂದ್ರಯಾನ 3 ಮುಂದಿನ ಪ್ರಯಾಣವನ್ನು ಮಾಡುತ್ತದೆ. ಚಂದ್ರಯಾನವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಆಗಸ್ಟ್ 23-24 ರ ನಡುವೆ ಯಾವುದೇ ಸಮಯದಲ್ಲಿ ಚಂದ್ರಯಾನ ದಕ್ಷಿಣ ಧ್ರುವದ ಬಳಿ ಇಳಿಯಲಿದೆ. ಚಂದ್ರಯಾನ-3 ಅನ್ನು ಎಲ್‌ವಿಎಂ 3-4 ಪ್ಯಾಕೆಟ್ ಮೂಲಕ 179 ಕಿ.ಮೀ ವರೆಗೆ ಸಾಗಿಸಲಾಯಿತು. ಅದರ ನಂತರ ಚಂದ್ರಯಾನ 3 ಅನ್ನು ಮುಂದಿನ ಪ್ರಯಾಣಕ್ಕಾಗಿ ಬಾಹ್ಯಾಕಾಶಕ್ಕೆ ತಳ್ಳಲಾಯಿತು, ಈ ಕೆಲಸದಲ್ಲಿ ರಾಕೆಟ್ ಕೇವಲ 16:15 ನಿಮಿಷಗಳನ್ನು ತೆಗೆದುಕೊಂಡಿತು.