Chandrayaan-3: ಚಂದ್ರಯಾನ 3 ಲ್ಯಾಂಡ್ ಆದ ಸ್ಥಳಕ್ಕೆ ನಾಮಕರಣ ಮಾಡಿದ ಮೋದಿ, ಇದು ಪ್ರಧಾನಿ ಮೋದಿ ಘೋಷಣೆ.
ಚಂದ್ರಾಯಾನ 3 ಯ ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷವಾಗಿ ನಾಮಕರಣ ಮಾಡಿದ್ದಾರೆ.
Chandrayaan- 3 Landing Place Name: ಇಸ್ರೋ ಜುಲೈ 14 ರಂದು ಚಂದ್ರಯಾನ 3 ಅನ್ನು ಉಡಾವಣೆ ಮಾಡಿದೆ. ಚಂದ್ರಯಾನ 3 (Chandrayana 3) ಯಶಸ್ಸಿಯಾಗಿ ದಕ್ಷಿಣ ದ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆ ಪಡೆದಿದೆ. ಆಗಸ್ಟ್ 23 ಭಾರತೀಯ ಪ್ರಜೆಗಳಿಗೆ ಬಹಳ ಮುಖ್ಯವಾಗಿದೆ. ಏಕೆಂದರೆ ದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಆಗಸ್ಟ್ 23 ರಂದು ಚಂದ್ರಯಾನ 3 ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿದಿದೆ.
ಚಂದ್ರಯಾನ 3 ಯಶಸ್ಸು
ಈಗಾಗಲೇ ಸಾಕಷ್ಟು ದೇಶವು ಚಂದ್ರಯಾನವನ್ನು ಉಡಾವಣೆ ಮಾಡಿದ್ದು ದಕ್ಷಿಣ ದ್ರುವದಲ್ಲಿ ಯಾವುದೇ ಯಶಸ್ವಿಯಾಗಿಲ್ಲ. ಇನ್ನು ಆಗಸ್ಟ್ 23 ಬುಧವಾರ ಸಂಜೆ 6.04 ನಿಮಿಷಕ್ಕೆ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ತುದಿಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ 140 ಕೋಟಿ ಭಾರತೀಯರ ಕನಸನ್ನು ನನಸು ಮಾಡಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದ ಟಾಪ್ 4 ದೇಶಗಳ ಪಟ್ಟಿಗೆ ಭಾರತ ಗ್ರಾಂಡ್ ಎಂಟ್ರಿ ಕೊಟ್ಟಿದೆ.
ಇಡೀ ಭಾರತೀಯರು ಚಂದ್ರಯಾನ ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಇಸ್ರೋ ವಿಜ್ಞಾನಿಗಳ ಸಾಧನೆಗೆ ಎಲ್ಲರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ಇಸ್ರೋ ಸಾಧನೆಗೆ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಕೂಡ ಮೆಚ್ಚುಗೆ ಸೂಚಿಸಿದ್ದಾರೆ.
ಚಂದ್ರಯಾನ 3 ಭಾರತದ ಹಿರಿಮೆಯನ್ನು ಇನ್ನು ಎತ್ತರಕ್ಕೆ ಕೊಂಡೊಯ್ದಿದೆ. ಚಂದ್ರನ ಬಗ್ಗೆ ತಿಳಿದಿರದ ಅನೇಕ ರಹಸ್ಯಗಳ ಬಗ್ಗೆ ಈ ಚಂದ್ರಯಾನ 3 ತಿಳಿಸಿಕೊಡಲಿದೆ. ಇದೀಗ ನರೇಂದ್ರ ಮೋದಿ (Narendra Modi) ಅವರು ಚಂದ್ರಯಾನ 3 ಲ್ಯಾಂಡ್ ಆದ ಸ್ಥಳಕ್ಕೆ ನಾಮಕರಣ ಮಾಡಿದ್ದಾರೆ. ಮೋದಿ ಇಟ್ಟ ಹೆಸರು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಚಂದ್ರಯಾನ 3 ಲ್ಯಾಂಡ್ ಆದ ಸ್ಥಳಕ್ಕೆ ನಾಮಕರಣ ಮಾಡಿದ ಮೋದಿ
ಚಂದ್ರಾಯಾನ 3 ಯ ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷವಾಗಿ ನಾಮಕರಣ ಮಾಡಿದ್ದಾರೆ. ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸ್ಥಳಕ್ಕೆ ‘ಶಿವಶಕ್ತಿ’ ಎಂದು ಕರೆಯಲಾಗುತ್ತದೆ ಎಂದು ಘೋಷಣೆ ಹೊರಡಿಸಿದ್ದಾರೆ. ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕಮಾಂಡಿಂಗ್ ನಲ್ಲಿ ಮೋದಿ ಘೋಷಣೆ ಮಾಡಿದ್ದಾರೆ.
ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದ ಮೋದಿ
ನಿಮ್ಮ ಧೈರ್ಯ, ಶಕ್ತಿ, ಸಾಮರ್ಥ್ಯಗಳಿಗೆ ನನ್ನ ನಮನಗಳು. ದೇಶದ ಘನತೆಯನ್ನು ಉತ್ತುಂಗಕ್ಕೆ ಏರಿಸಿದ್ದಕ್ಕೆ ಧನ್ಯವಾದಗಳು. ವಿಶ್ವದ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಭಾರತ ಪರಿಹಾರ ಕಂಡಿದೆ.
ಪ್ರತಿಯೊಬ್ಬ ವಿಜ್ಞಾನಿಗೂ ನನ್ನದೊಂದು ಸಲ್ಯೂಟ್. ಸದ್ಯ ಭಾರತ ಚಂದ್ರನ ಮೇಲಿದೆ. ನಿಮ್ಮೆಲ್ಲರ ಸಾಧನೆ ಇತರರಿಗೆ ಸ್ಪೂರ್ತಿಯಾಗಿದೆ. ಭಾರತದ ವಿಜ್ಞಾನದ ಶಕ್ತಿ ಇಡೀ ವಿಶ್ವಕ್ಕೆ ಮಾದರಿ. ವಿಕ್ರಂ ಲ್ಯಾಂಡರ್ ಮೂಲಕ ಇತಿಹಾಸ ಸೃಷ್ಟಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.