Chandrayana 3: ಚಂದ್ರಯಾನ ಮುಂದಿನ ಮಿಷನ್ ಬಗ್ಗೆ ಮಾಹಿತಿ ನೀಡಿದ ಇಸ್ರೋ.
ಇಸ್ರೋ Chandrayana 4 ರ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದೆ.
Chandrayana Next Mission Update: August 23 2023 ರಂದು ಚಂದ್ರನನ್ನು ತಲುಪಿದ Chandrayana 3 ಭಾರತದ ಹೆಸರಿನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು ಸದ್ಯ Chandayana 3 ಕಾರಣದಿಂದ ಭಾರತದ ಹಿರಿಮೆ ಇಡೀ ವಿಶ್ವದಾದ್ಯಂತ ಸಾರಿದೆ. ವಿದೇಶಗಳಿಂದಲೂ ಇಸ್ರೋ(ISRO) ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಭಾರತದ ಮೂರನೇ ಚಂದ್ರಯಾನ ದೇಶದ ಜನತೆಗೆ ಚಂದ್ರನ ಕುರಿತು ಸಾಕಷ್ಟು ವಿಷಯವನ್ನು ತಿಳಿಸಿಕೊಟ್ಟಿದೆ. ಇದೀಗ ಬಾಹ್ಯಾಕಾಶದಲ್ಲಿ ಸಾಧನೆ ಮಾಡಿದ ಬಳಿಕ ಇಸ್ರೋ ಇದೀಗ ಮತ್ತೊಂದು ಶುಭ ಸಮಾಚಾರವನ್ನು ಬಹಿರಂಗಪಡಿಸಿದೆ. ಇಸ್ರೋ ಇದೀಗ Chandrayana 4 ರ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದೆ.
ಚಂದ್ರಯಾನ ಮುಂದಿನ ಮಿಷನ್ ಬಗ್ಗೆ ಮಾಹಿತಿ ನೀಡಿದ ಇಸ್ರೋ
ಚಂದ್ರಯಾನ 4, 5, 6 ಅನ್ನು ಉಡಾವಣೆ ಮಾಡಲು ಸಿದ್ಧತೆ ನಡೆಯುತ್ತಿದೆ ಎಂದು ಇಸ್ರೋ ಉಪ ನಿರ್ದೇಶಕ ಪಿ ಸುನಿಲ್ ಅವರು ಹೇಳಿದ್ದಾರೆ. ‘ಇದಕ್ಕಾಗಿ ಯೋಜನೆಯಂನ್ನು ರೂಪಿಸಲಾಗುತ್ತಿದೆ. ಪ್ರಸ್ತುತ ಅನೇಕ ಬಾಹ್ಯಾಕಾಶ ಕಾರ್ಯಾಚರಣೆಯ ಪ್ರಾರಂಭದ ನಂತರ, ನಾವು ಉತ್ತಮ ಹಣವನ್ನುಪಡೆಯುತ್ತಿದ್ದೇವೆ. ಈಗ ನಮ್ಮ ಅಂತರಾತ್ರಿಯ ವ್ಯವಹಾರದ ಪಾಲು ಎರಡು ಶೇ. ತಲುಪಿದೆ, ಅದು ಏಳು ಬಿಲಿಯನ್ ಡಾಲರ್ ಗಳನ್ನೂ ತಲುಪಿದೆ. IRSO ಮತ್ತು JAXA ಲುಪೆಕ್ಸ್ ಅನ್ನು ಪ್ರಾರಂಭಿಸಲು ಕೆಲಸ ಮಾಡುತ್ತಿದೆ.
ಈ ಮೆಷಿನ್ ಅನ್ನು ಚಂದ್ರಯಾನ 4 ಎಂದು ಕರೆಯಲಾಗುತ್ತದೆ. ಇದ್ರಲ್ಲಿ ಎರಡು ಏಜೆನ್ಸಿಗಳು ಚಂದ್ರನಲ್ಲಿ ನೀರಿನ ಉಪಸ್ಥಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದನಗ್ರಹಿಸಲಿದೆ. ನೀರಿನ ಉಪಸ್ಥಿತಿ ಮತ್ತು ಸಂಭಾವ್ಯ ಉಪಯುಕ್ತತೆಗಾಗಿ ಚಂದ್ರನ ದ್ರುವ ಪ್ರದೇಶವನ್ನು ತನಿಖೆ ಮಾಡುವುದು ಈ ಕಾರ್ಯಾಚರಣೆಯ ಪ್ರಾಥಮಿಕ ಉದ್ದೇಶವಾಗಿದೆ’ ಎಂದು ಶ್ರೀ ಜಗನ್ನಾಥ ಸಂಸ್ಕೃತ ವಿಶ್ವವಿದ್ಯಾನಿಲಯದಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಸುನಿಲ್ ಅವರು ಮಾಹಿತಿ ನೀಡಿದ್ದಾರೆ.