Ads By Google

Farmers Bank Loan: ಬ್ಯಾಂಕುಗಳಲ್ಲಿ ಆಸ್ತಿಯನ್ನ ಅಡವಿಟ್ಟು ಸಾಲವನ್ನ ಮಾಡಿದರೆ ರೈತರಿಗೆ ಗುಡ್ ನ್ಯೂಸ್ ನೀಡಿದ ಬೊಮ್ಮಾಯಿ, ನಿಯಮದಲ್ಲಿ ಹೊಸ ಬದಲಾವಣೆ.

farmers bank loan rules
Ads By Google

Farmers Bank Loan: ಹಣದ (Money) ಅವಶ್ಯಕತೆ ಸಾಮಾನ್ಯವಾಗಿ ಎಲ್ಲರಿಗೂ ಇದ್ದೆ ಇರುತ್ತದೆ. ಈಗಿನ ಕಾಲದಲ್ಲಿ ಹಣ ಇಲದೆ ಜೀವನ ಮಾಡುವುದು ಬಹಳ ಕಷ್ಟ. ದೇಶದಲ್ಲಿ ಪ್ರತಿನಿತ್ಯ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವ ಕಾರಣ ಜನರು ಈಗಿನ ಕಾಲದಲ್ಲಿ ಹೆಚ್ಚು ಹಣದ ವ್ಯವಹಾರವನ್ನ ಮಾಡುತ್ತಿದ್ದಾರೆ.

ಅದೇ ರೀತಿಯಲ್ಲಿ ದೇಶದ ಎಲ್ಲಾ ಬ್ಯಾಂಕುಗಳು (Banks) ಜನರು ಯಾವುದಾದರೂ ಒಂದು ಆಧಾರದ ಮೇಲೆ ಸಾಲವನ್ನ ಕೊಡುತ್ತದೆ. ದೇಶದಲ್ಲಿ ಇತರರಿಗೆ ಹೋಲಿಕೆ ಮಾಡಿದರೆ ರೈತರು ಬ್ಯಾಂಕುಗಳಲ್ಲಿ ಹೆಚ್ಚಿನ ಸಾಲವನ್ನ ಮಾಡುತ್ತಾರೆ.

ತಮ್ಮ ಆಸ್ತಿಯನ್ನ ಅಡವಿಟ್ಟು ರೈತರು ಬ್ಯಾಂಕುಗಳಲ್ಲಿ ಹೆಚ್ಚಿನ ಸಾಲವನ್ನ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಅದೇ ರೀತಿಯಲ್ಲಿ ಬ್ಯಾಂಕುಗಳು ರೈತರ ಆಸ್ತಿಯನ್ನ ಅಡವಿಟ್ಟುಕೊಂಡು ಹೆಚ್ಚಿನ ಪ್ರಮಾಣದಲ್ಲಿ ಸಾಲವನ್ನ ನೀಡುತ್ತದೆ.

Image Credit: economictimes.indiatimes

ಬ್ಯಾಂಕುಗಳ ಸಾಲವನ್ನ ಕಟ್ಟಲಾಗದೆ ಪರದಾಡುತ್ತಿರುವ ರೈತರು
ವ್ಯವಸಾಯವನ್ನ ಮಾಡುವ ಉದ್ದೇಶಗಳಿಂದ ಬ್ಯಾಂಕುಗಳಲ್ಲಿ ಸಾಲವನ್ನ ಮ್ಸಡುವ ರೈತರು ನಂತರ ಆ ಸಾಲವನ್ನ ಕಟ್ಟಲಾಗದೆ ಪರದಾಡುತ್ತಾರೆ. ಬ್ಯಾಂಕುಗಳಲ್ಲಿ ಸಾಲವನ್ನ ಮಾಡಿದ ಮೇಲೆ ಪ್ರತಿ ತಿಂಗಳು ಸಾಲವನ್ನ ಸರಿಯಾದ ದಿನಗಳಲ್ಲಿ ಕಟ್ಟಬೇಕು ಮತ್ತು ಆ ಸಾಲಗಳ ಜೊತೆಗೆ ಬಡ್ಡಿಯನ್ನ ಕೂಡ ಅವಶ್ಯಕವಾಗಿ ಪಾವತಿ ಮಾಡಬೇಕು.

ಕೆಲವು ಖಾಸಗಿ ಬ್ಯಾಂಕುಗಳಲ್ಲಿ ಬಡ್ಡಿ ಅಧಿಕ
ಹೌದು ಕೆಲವು ಖಾಸಗಿ ಬ್ಯಾಂಕುಗಳಲ್ಲಿ ಸಾಲವನ್ನ ಮಾಡಿರುವ ರೈತರು ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿಯನ್ನ ಪಾವತಿ ಮಾಡುತ್ತಿದ್ದಾರೆ. ಹೌದು ರಾಷ್ಟ್ರೀಯ ಬ್ಯಾಂಕುಗಳಿಗೆ ಹೋಲಿಕೆ ಮಾಡಿದರೆ ಕೆಲವು ಖಾಸಗಿ ಬಂಕುಗಳಲ್ಲಿ ಬಡ್ಡಿದರ ಬಹಳ ಹೆಚ್ಚಾಗಿದ್ದು ಅಲ್ಲಿ ಸಾಲವನ್ನ ಮಾಡಿರುವ ಕೆಲವು ರೈತರು ಸಾಲದ ಬಡ್ಡಿಯನ್ನ ಕಟ್ಟಲಾಗದೆ ಕಣ್ಣೀರು ಹಾಕುತ್ತಿದ್ದಾರೆ.

Image Credit: economictimes.indiatimes

ಸಾಲ ಪಾವತಿ ಮಾಡದಿದ್ದರೆ ಆಸ್ತಿ ಮುಟ್ಟುಗೋಲು
ಹೌದು ಸಾಮಾನ್ಯ ಜನರು ಮಾತ್ರವಲ್ಲದೆ ರೈತರು ಸಾಲವನ್ನ ಪಾವತಿ ಮಾಡದೆ ಇದ್ದಾರೆ ಬ್ಯಾಂಕುಗಳು ಕೆಲವು ನಿಯಮಗಳ ಅಡಿಯಲ್ಲಿ ರೈತರು ಅಡವಿಟ್ಟ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳುತ್ತಾರೆ. ಹೌದು ಬ್ಯಾಂಕುಗಳು ಸಾಲವನ್ನ ನೀಡುವ ಸಮಯದಲ್ಲಿ ಕೆಲವು ಅಗತ್ಯ ದಾಖಲೆಗಳಿಗೆ ಸಹಿಯನ್ನ ಮಾಡಿಕೊಳ್ಳುತ್ತಾರೆ ಮತ್ತು ಅದರಲ್ಲಿ ಆಸ್ತಿ ಮುಟ್ಟುಗೋಲು ಕೂಡ ಒಂದಾಗಿದೆ.

ರೈತರು ಸರಿಯಾದ ದಿನಗಳಲ್ಲಿ ಸಾಲವನ್ನ ಮರುಪಾವತಿ ಮಾಡದೆ ಇದ್ದಾರೆ ಬ್ಯಾಂಕುಗಳು ರೈತರ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನ ಹೊಂದಿದೆ.

ಹೊಸ ನಿಯಮ ಜಾರಿಗೆ ತರಲು ಬೊಮ್ಮಾಯಿ ನಿರ್ಧಾರ
ಹೌದು ರೈತರ ಅಸ್ತಿ ಮುಟ್ಟುಗೋಲು ವಿಷಯಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನ ಜಾರಿಗೆ ತರಲು ರಾಜ್ಯದ ಮುಖ್ಯ ಮಂತ್ರಿಗಳ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ತೀರ್ಮಾನವನ್ನ ಮಾಡಿದ್ದಾರೆ.

Image Credit: economictimes.indiatimes

ಮುಂದಿನ ದಿನಗಳಲ್ಲಿ ಬ್ಯಾಂಕುಗಳು ರೈತರ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳುವ ನಿಯಮವನ್ನ ರದ್ದು ಮಾಡಲಾಗುತ್ತದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸಹಕಾರಿ ಸಂಘಗಳು, ಖಾಸಗಿ ಮತ್ತು ಎಲ್ಲಾ ಸರ್ಕಾರೀ ಬ್ಯಾಂಕುಗಳು ರೈತರ ಸಾಲಕ್ಕೆ ಸಂಬಂಧಿಸಿದಂತೆ ಆಸ್ತಿ ಜಪ್ತಿ ಮಾಡುವ ನಿಯಮಕ್ಕೆ ಕಡಿವಾಣ ಹಾಕಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ರೈತರ ಸಾಲ ಮರುಪಾವತಿ ಆಗದೆ ಇದ್ದರೆ ಅವರಿಗೆ ಸಮಯಾವಕಾಶಗಳನ್ನ ನೀಡಬೇಕು ಮತ್ತು ಅವರ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳಬಾರದು. ಇನ್ನು ಆಸ್ತಿ ಜಪ್ತಿ ನಿಯಮಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಹೊಸ ನಿಯಮಗಳನ್ನ ಜಾರಿಗೆ ತರಲಾಗುತ್ತದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಈ ಹೊಸ ನಿಯಮ ಜಾರಿಗೆ ಬಂದರೆ ರೈತರು ತಮ್ಮ ಆಸ್ತಿಯನ್ನ ಕಳೆದುಕೊಳ್ಳುವುದು ಬಹಳ ಕಡಿಮೆ ಆಗುತ್ತದೆ. ಬಸವರಾಜ್ ಬೊಮ್ಮಾಯಿ ಅವರ ಈ ನಿರ್ಧಾರಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field