Ads By Google

Lunch Time For School Children: ಶಾಲೆಯಲ್ಲಿ ಊಟ ಮಾಡುವ ಎಲ್ಲಾ ಮಕ್ಕಳಿಗೆ ಹೊಸ ನಿಯಮ ಜಾರಿಗೆ ತಂದ ಸರ್ಕಾರ.

school lunch time change
Ads By Google

Lunch Time For School Children: ರಾಜ್ಯ ಮತ್ತು ಕೇಂದ್ರ ಸರ್ಕಾರ ಕೆಲವು ಅಗತ್ಯ ನಿಯಮಗಳನ್ನ ಜಾರಿಗೆ ತರವುದರ ಮೂಲಕ ಕೆಲವು ಬದಲಾವಣೆಗಳನ್ನ ಮಾಡುತ್ತಿದೆ ಎಂದು ಹೇಳಬಹುದು. ಹೌದು ರಾಜ್ಯದಲ್ಲಿ ಹಲವು ಸರ್ಕಾರೀ ಶಾಲೆಗಳು (Government School) ಇದ್ದು ಸರ್ಕಾರೀ ಶಾಲೆಯಲ್ಲಿ ಓದುವ ಮಕ್ಕಳಿಗಾಗಿ (School Childrens) ಈಗಾಗಲೇ ಹಲವು ನಿಯಮಗಳನ್ನ ಜಾರಿಗೆ ತರಲಾಗಿದೆ ಎಂದು ಹೇಳಬಹುದು.

Image Credit: thehindu

ಮಕ್ಕಳ ಪಠ್ಯ ಪುಸ್ತಕದಿಂದ ಹಿಡಿದು ಮಕ್ಕಳಿಗೆ ಹಲವು ಸವಲತ್ತುಗಳನ್ನ ಸರ್ಕಾರವೇ ನೀಡುತ್ತಿದ್ದು ಸದ್ಯ ಈಗ ಇನ್ನೊಂದು ಹೊಸ ನಿಯಮವನ್ನ ಜಾರಿಗೆ ತರಲು ಈಗ ಸರ್ಕಾರ ಮುಂದಾಗಿದೆ ಎಂದು ಹೇಳಬಹುದು.

ಊಟದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಸರ್ಕಾರ ಸಲಹೆ
ಹೌದು ಸರ್ಕಾರೀ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಇದ್ದು ಮಕ್ಕಳಿಗೆ ಶುಚಿಕಾರದ ಊಟದ ವ್ಯವಸ್ಥೆಯನ್ನ ಮಾಡಲಾಗುತ್ತದೆ.

ಹೌದು ಮಕ್ಕಳ ಓದು ಮತ್ತು ಅವರ ಆರೋಗ್ಯಕ್ಕೆ ಸಹಕಾರಿಯಾಗುವಂತಹ ಆಹಾರಗಳನ್ನ ಮಕ್ಕಳಿಗೆ ಶಾಲೆಗಳಲ್ಲಿ ಸರ್ಕಾರ ನೀಡುತ್ತಿದ್ದು ಮಕ್ಕಳಿಗೆ ಸರಿಯಾದ ಸಮಯಕ್ಕೆ ಊಟ ಸಿಗುತ್ತದೆ ಎಂದು ಹೇಳಬಹುದು.

Image Credit: news9live

ಊಟದ ಸಮಯದಲ್ಲಿ ಬದಲಾವಣೆ ಮಾಡಲು ಸೂಚನೆ
ಹೌದು ಮಕ್ಕಳಿಗೆ ಕೊಡಲಾಗುವ ಊಟದ ಸಮಯದಲ್ಲಿ ಬದಲಾವಣೆ ಮಾಡಲು ಈಗ ಸರ್ಕಾರ ಆಯಾ ಶಾಲೆಗಳಿಗೆ ಸೂಚನೆಯನ್ನ ನೀಡಿದೆ ಎಂದು ಹೇಳಬಹುದು.

ಮಧ್ಯಾಹ್ನ ನೀಡಲಾಗುವ ಬಿಸಿಯೂಟದ ಸಮಯದಲ್ಲಿ ಬದಲಾವಣೆ ಮಾಡಲು ಈಗ ಸರ್ಕಾರ ಸೂಚನೆಯನ್ನ ನೀಡಿದೆ. ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೆ ಒಂದೇ ಸಮಯದಲ್ಲಿ ಊಟವನ್ನ ಹಾಕಲಾಗುತ್ತದೆ.

ಎಲ್ಲಾ ಮಕ್ಕಳಿಗೆ ಒಂದೇ ಸಮಯದಲ್ಲಿ ಊಟವನ್ನ ಬಡಿಸುವ ಕಾರಣ ಆ ಸಮಯದಲ್ಲಿ ಮಕ್ಕಳ ನಡುವೆ ನೂಕುನುಗ್ಗಲು ಆರಂಭ ಆಗುತ್ತದೆ. ಇನ್ನು ಇಷ್ಟು ಮಾತ್ರವಲ್ಲದೆ ಊಟಮಾಡಿ ಬಟ್ಟಲು ತೊಳೆಯುವ ಸಮಯದಲ್ಲಿ ಕೂಡ ನೂಕುನುಗ್ಗಲು ಆಗುವ ಕಾರಣ ಮಕ್ಕಳ ಊಟದ ಸಮಯದಲ್ಲಿ ಬದಲಾವಣೆ ಮಾಡಲು ಸರ್ಕಾರ ಆಯಾ ಶಾಲೆಗಳಿಗೆ ಸೂಚನೆಯನ್ನ ನೀಡಿದೆ.

Image Credit: icrisat

ಯಾವ ಸಮಯಕ್ಕೆ ಯಾರಿಗೆ ಊಟ
1 ರಿಂದ 5 ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ 1 ಘಂಟೆಯಿಂದ 1 :45 ರ ಸಮಯದಲ್ಲಿ ಊಟವನ್ನ ಕೊಡಬೇಕು ಮತ್ತು 6-10 ನೇ ತರಗತಿ ಮಕ್ಕಳಿಗೆ 2 ಘಂಟೆಯಿಂದ 2:40 ರ ಸಮಯದಲ್ಲಿ ಊಟವನ್ನ ಕೊಡಬೇಕು ಎಂದು ಸರ್ಕಾರ ಶಾಲೆಗಳಿಗೆ ಸೂಚನೆಯನ್ನ ನೀಡಿದೆ.

ಇನ್ನು ಇದರ ಕುರಿತಂತೆ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಚರ್ಚೆಯನ್ನ ಮಾಡಬೇಕು ಎಂದು ಕೂಡ ಸರ್ಕಾರ ಸೂಚನೆಯನ್ನ ನೀಡಿದೆ.

ಅದೇ ರೀತಿಯಲ್ಲಿ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಊಟದ ಜೊತೆಗೆ ಇನ್ನಷ್ಟು ಪೌಷ್ಟಿಕ ಆಹಾರಗಳನ್ನ ನೀಡುವ ಬಗ್ಗೆ ಚರ್ಚೆಯನ್ನ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ನಿಯಮಗಳು ಜಾರಿಗೆ ಬರುವ ಸಾಧ್ಯತೆ ಕೂಡ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field