Cheque Rules: ಇಂತಹ ಚೆಕ್ ನೀಡಿದರೆ 2 ವರ್ಷ ಜೈಲು ಶಿಕ್ಷೆ ಮತ್ತು ದಂಡ, ಚೆಕ್ ಕೊಡುವವರಿಗೆ RBI ಎಚ್ಚರಿಕೆ.

ಚೆಕ್ ನೀಡುವ ಸಮಯದಲ್ಲಿ ಈ ತಪ್ಪುಗಳನ್ನು ಮಾಡಿದರೆ ಕಟ್ಟಬೇಕು ಹೆಚ್ಚಿನ ದಂಡ.

Cheque Bounce Penalty: ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಹಣಕಾಸಿನ ವಹಿವಾಟುಗಳು UPI ಪೇಮೆಂಟ್ ಗಳ ಮೂಲಕ ನಡೆಯುತ್ತದೆ. ಆನ್ಲೈನ್ ವಹಿವಾಟುಗಳು (Online Payment) ಪ್ರಾರಂಭವಾದ ದಿನದಿಂದ ಬ್ಯಾಂಕ್ ಗಳಿಗೆ ಭೇಟಿ ನೀಡುವ ಕೆಲಸದಿಂದ ಜನರು ನಿರಾಳರಾಗಿದ್ದಾರೆ. ಯಾರೊಬ್ಬರಿಗೆ ಹಣವನ್ನು ಕಳಿಹಿಸಬೇಕಾದರು ಕೂಡ ಆನ್ಲೈನ್ ಮೂಲಕವೇ ಪಾವತಿಮಾಡುತ್ತಾರೆ.

ಇನ್ನು ಯುಪಿಐ ಅಪ್ಲಿಕೇಶನ್ ಗಳು ತನ್ನ ಸೇವೆಯನ್ನು ವಿಸ್ತರಿಸುತ್ತ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ. ಆನ್ಲೈನ್ ವಹಿವಾಟುಗಳು ಬಂದ ಮೇಲೆ ಚೆಕ್ ನಲ್ಲಿ ಹಣ ಪಡೆಯುವ ಮತ್ತು ನೀಡುವುದು ಕಡಿಮೆಯಾಗಿದೆ. ಹೆಚ್ಚಾಗಿ ಜನರು ಯುಪಿಐ ಪಾವತಿಯನ್ನೇ ಆರಿಸುತ್ತಾರೆ. ಆದರೂ ಕೂಡ ಕೆಲವೊಂದು ದೊಡ್ಡ ಮೊತ್ತದ ಹಣಕಾಸಿನ ವಹಿವಾಟುಗಳನ್ನು ಈಗಲೂ ಕೂಡ ಚೆಕ್ (Cheque) ನೀಡುವ ಮೂಲಕ ಮಾಡಲಾಗುತ್ತದೆ.

Cheque Bounce Penalty updates
Image Credit: Stelorder

ಯುಪಿಐ ನ ಮೂಲಕ ದೊಡ್ಡ ಮೊತ್ತದ ವಹಿವಾಟು ನಡೆಸಲು ಕಷ್ಟವಾಗುತ್ತದೆ. ಇನ್ನು ಈ ಚೆಕ್ ನೀಡುವ ಸಮಯದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಚೆಕ್ ನೀಡುವ ಸಮಯದಲ್ಲಿ ಈ ತಪ್ಪುಗಳನ್ನು ಮಾಡಿದರೆ ನೀವು ದಂಡ ಕಟ್ಟಬೇಕಾಗುತ್ತದೆ ಅಥವಾ ಜೈಲು ಪಾಲಾಗುವ ಸಂದರ್ಭ ಕೂಡ ಬರಬಹುದು. ಚೆಕ್ ನೀಡುವ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಚೆಕ್ ಬೌನ್ಸ್ ಆದರೆ ಕಟ್ಟಬೇಕು ಹೆಚ್ಚಿನ ದಂಡ
ಚೆಕ್ ಬರೆಯುವ ಸಂದರ್ಭದಲ್ಲಿ ಯಾವುದೇ ರೀತಿಯ ತಪ್ಪುಗಳು ಆದರು ಕೂಡ ಚೆಕ್ ಬೌನ್ಸ್ ಆಗುವ ಸಾಧ್ಯತೆ ಇರುತ್ತದೆ. ಖಾತೆಯಲ್ಲಿ ಬ್ಯಾಲೆನ್ಸ್ ಕೊರತೆ, ಸಹಿ ಬದಲಾವಣೆ, ಬರವಣಿಗೆಯಲ್ಲಿನ ತಪ್ಪು, ಖಾತೆ ಸಂಖ್ಯೆ ಬರೆಯುವಲ್ಲಿ ತಪ್ಪು, ತಿದ್ದಿ ಬರೆಯುವುದು, ಸಾಮತ್ಯದ ಮಿತಿಯ ಮುಕ್ತಾಯ, ಚೆಕ್ಕರ್ ಖಾತೆಯನ್ನು ಕ್ಲೋಸ್ ಮಾಡಿದರೆ, ಚೆಕ್ ನಲ್ಲಿ ಕಂಪನಿಯ ಮುದ್ರೆಯಲ್ಲಿನ ತಪ್ಪು, ಓವರ್ ಡ್ರಾಫ್ಟ್ ಮಿತಿಯನ್ನು ದಾಟಿದರೆ ನಿಮ್ಮ ಚೆಕ್ ಬೌನ್ಸ್ ಆಗುವ ಸಾಧ್ಯತೆಗಳು ಇರುತ್ತದೆ.

Cheque Bounce Penalty latest news
Image Credit: HindustanTimes

ಇಂತಹ ಚೆಕ್ ನೀಡಿದರೆ 2 ವರ್ಷ ಜೈಲು ಶಿಕ್ಷೆ ಮತ್ತು ದಂಡ
ಹಲವಾರು ಕಾರಣಗಳಿಂದ ಚೆಕ್ ಬೌನ್ಸ್ ಆಗುವ ಸಾಧ್ಯತೆ ಇರುತ್ತದೆ. ಚೆಕ್ ಬೌನ್ಸ್ (Cheque Bounce) ಆದಲ್ಲಿ ಬ್ಯಾಂಕುಗಳು ಚೆಕ್ ನೀಡಿದವರಿಗೆ ದಂಡವನ್ನು ವಿಧಿಸುತ್ತದೆ. ದೊಡ್ಡ ಮೊತ್ತದ ಚೆಕ್ ಬೌನ್ಸ್ ಮಾಡಿದರೆ ಜೈಲು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಕೂಡ ಇರುತ್ತದೆ.

Join Nadunudi News WhatsApp Group

ಚೆಕ್ ಬೌನ್ಸ್ ಆದರೆ ವಿವಿಧ ಬ್ಯಾಂಕ್ ಗಳಲ್ಲಿ ವಿಭಿನ್ನವಾಗಿ ದಂಡ ವಿಧಿಸಲಾಗುತ್ತದೆ. ಈ ದಂಡವು 150 ರಿಂದ 800 ರೂಗಳ ವರೆಗೆ ಇರುತ್ತದೆ. ಹಾಗೆಯೆ ಕೆಲವು ಸಂದರ್ಭದಲ್ಲಿ 2 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಚೆಕ್ ಬರೆಯುವ ಮುನ್ನ ಎಚ್ಚರದಿಂದಿರಬೇಕು.

Join Nadunudi News WhatsApp Group