Cheque: ಚೆಕ್ ವ್ಯವಹಾರ ಮಾಡುವವರಿಗೆ RBI ನಿಂದ ಹೊಸ ಮಾರ್ಗಸೂಚಿ ಪ್ರಕಟ, ನೀವೇ ಜವಾಬ್ದಾರರು.

ಚೆಕ್ ಮೂಲಕ ವ್ಯವಹಾರ ಮಾಡುವವರಿಗೆ RBI ಹೊಸ ನಿಯಮವನ್ನು ಜಾರಿಗೊಳಿಸಿದೆ.

Cheque Rule: ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಹಣಕಾಸಿನ ವಹಿವಾಟುಗಳು UPI ಪೇಮೆಂಟ್ ಗಳ ಮೂಲಕ ನಡೆಯುತ್ತದೆ. ಆನ್ಲೈನ್ ವಹಿವಾಟುಗಳು (Online Payment) ಪ್ರಾರಂಭವಾದ ದಿನದಿಂದ ಬ್ಯಾಂಕ್ ಗಳಿಗೆ ಭೇಟಿ ನೀಡುವ ಕೆಲಸದಿಂದ ಜನರು ನಿರಾಳರಾಗಿದ್ದಾರೆ. ಯಾರೊಬ್ಬರಿಗೆ ಹಣವನ್ನು ಕಳಿಹಿಸಬೇಕಾದರು ಕೂಡ ಆನ್ಲೈನ್ ಮೂಲಕವೇ ಪಾವತಿ ಮಾಡುತ್ತಾರೆ. ಆನ್ಲೈನ್ ವಹಿವಾಟುಗಳು ಬಂದ ಮೇಲೆ ಚೆಕ್ ನಲ್ಲಿ ಹಣ ಪಡೆಯುವ ಮತ್ತು ನೀಡುವುದು ಕಡಿಮೆಯಾಗಿದೆ.

ಆದರೂ ಕೂಡ ಕೆಲವೊಂದು ದೊಡ್ಡ ಮೊತ್ತದ ಹಣಕಾಸಿನ ವಹಿವಾಟುಗಳನ್ನು ಈಗಲೂ ಕೂಡ ಚೆಕ್ (Cheque) ನೀಡುವ ಮೂಲಕ ಮಾಡಲಾಗುತ್ತದೆ. ಇನ್ನು ಈ ಚೆಕ್ ನೀಡುವ ಸಮಯದಲ್ಲಿ ಬಹಳ ಜಾಗ್ರತೆಯಿಂದ ಇರಬೇಕಾಗುತ್ತದೆ. ಚೆಕ್ ನೀಡುವ ಸಮಯದಲ್ಲಿ ಈ ತಪ್ಪುಗಳನ್ನು ಮಾಡಿದರೆ ನೀವು ದಂಡ ಕಟ್ಟಬೇಕಾಗುತ್ತದೆ ಅಥವಾ ಜೈಲು ಪಾಲಾಗುವ ಸಂದರ್ಭ ಕೂಡ ಬರಬಹುದು. ಚೆಕ್ ನೀಡುವ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

Be careful before writing a check
Image Credit: Thehindubusinessline

ಚೆಕ್ ಬರೆಯುವ ಮುನ್ನ ಎಚ್ಚರ
ಚೆಕ್ ಬರೆಯುವ ಸಂದರ್ಭದಲ್ಲಿ ಯಾವುದೇ ರೀತಿಯ ತಪ್ಪುಗಳು ಆದರು ಕೂಡ ಚೆಕ್ ಬೌನ್ಸ್ ಆಗುವ ಸಾಧ್ಯತೆ ಇರುತ್ತದೆ. ಖಾತೆಯಲ್ಲಿ ಬ್ಯಾಲೆನ್ಸ್ ಕೊರತೆ, ಸಹಿ ಬದಲಾವಣೆ, ಬರವಣಿಗೆಯಲ್ಲಿನ ತಪ್ಪು, ಖಾತೆ ಸಂಖ್ಯೆ ಬರೆಯುವಲ್ಲಿ ತಪ್ಪು, ತಿದ್ದಿ ಬರೆಯುವುದು, ಸಾಮತ್ಯದ ಮಿತಿಯ ಮುಕ್ತಾಯ, ಚೆಕ್ಕರ್ ಖಾತೆಯನ್ನು ಕ್ಲೋಸ್ ಮಾಡಿದರೆ, ಚೆಕ್ ನಲ್ಲಿ ಕಂಪನಿಯ ಮುದ್ರೆಯಲ್ಲಿನ ತಪ್ಪು, ಓವರ್ ಡ್ರಾಫ್ಟ್ ಮಿತಿಯನ್ನು ದಾಟಿದರೆ ನಿಮ್ಮ ಚೆಕ್ ಬೌನ್ಸ್ ಆಗುವ ಸಾಧ್ಯತೆಗಳು ಇರುತ್ತದೆ.

ಚೆಕ್ ವ್ಯವಹಾರ ಮಾಡುವವರಿಗೆ RBI ನಿಂದ ಹೊಸ ಮಾರ್ಗಸೂಚಿ ಪ್ರಕಟ
*ನೀವು ಚೆಕ್ ನಲ್ಲಿ ಮೊತ್ತ ಬರೆಯುವಾಗ ಮೊತ್ತವನ್ನು ಅಕ್ಷರದಲ್ಲಿ ಬರೆದ ನಂತರ ‘ಮಾತ್ರ’ ಪದವನ್ನು ಬಳಸಿ, ಸಂಖ್ಯೆಯಲ್ಲಿ ಬರೆದಾಗ /- ಇದನ್ನು ಬಳಸಿದರೆ ವಂಚನೆಯಿಂದ ತಪ್ಪಿಸಿಕೊಳ್ಳಬಹುದು.

*ಇನ್ನು ಖಾಲಿ ಚೆಕ್ ನಲ್ಲಿ ಇಂದಿಗೂ ಸಹಿ ಮಾಡಬಾರದು. ಯಾವುದೇ ವ್ಯಕ್ತಿಗೆ ಚೆಕ್ ಬರೆಯುತಿದ್ದರೆ ಅವರ ಮಾಹಿತಿಯನ್ನು ಸರಿಯಾಗಿ ಬರೆಬೇಕು.

Join Nadunudi News WhatsApp Group

New guidelines issued by RBI for check transactions
Image Credit: Moinsheikh

*ಚೆಕ್ ನಲ್ಲಿ ಸಹಿ ಹಾಕುವಾಗ ಎಚ್ಚರವಹಿಸಿ. ಸಹಿ ಬದಲಾಗಿದ್ದರೆ ಚೆಕ್ ನ ಪಾವತಿಯನ್ನು ಬ್ಯಾಂಕುಗಳು ತೆರವುಗೊಳಿಸುವುದಿಲ್ಲ.

*ಚೆಕ್ ನಲ್ಲಿ ಬರೆಯುವಾಗ ಶಾಶ್ವತ ಇಂಕ್ ಅನ್ನು ಬಳಸಿ. ಇದರಿಂದ ಬರೆದಿರುವ ಚೆಕ್ ಅನ್ನು ತಿದ್ದಲು ಸಾಧ್ಯವಾಗುವುದಿಲ್ಲ.

*ಚೆಕ್ ಅನ್ನು ಪೋಸ್ಟ್ ಡೇಟಿಂಗ್ ಮಾಡುವುದನ್ನು ಕಡಿಮೆ ಮಾಡಿ. ಏಕೆಂದರೆ ಪೋಸ್ಟ್ ಡೇಟಿಂಗ್ ಚೆಕ್ ಒಂದು ರೀತಿಯ ಅಪಾಯವನ್ನು ನೀಡುತ್ತದೆ.

Join Nadunudi News WhatsApp Group