Chery EV: ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 408km ರೇಂಜ್, ಮಾರುಕಟ್ಟೆಗೆ ಬಂತು ಇನ್ನೊಂದು ಚಿಕ್ಕ Ev ಕಾರ್.

ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 408km ರೇಂಜ್ ನೀಡುವ ನೂತನ ಎಲೆಕ್ಟ್ರಿಕ್ ಕಾರ್.

Chery Electric Car : ಸದ್ಯ Electric ವಾಹನಗಳ ಮೇಲಿನ ಬೇಡಿಕೆ ಹೆಚ್ಚಿದೆ ಎನ್ನಬಹುದು. ದೇಶಿಯ ಮಾರುಕಟ್ಟೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕೂಡ electric ವಾಹನಗಳನ್ನು ಕ್ರೇಜ್ ಹುಟ್ಟಿಸಿವೆ. ಈಗಾಗಲೇ ವಿವಿಧ ವಿನ್ಯಾಸದ ಅತಿ ಹೆಚ್ಚಿನ ಮೈಲೇಜ್ ನೀಡುವಂತಹ ಅನೇಕ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ವಿವಿಧ ಕಂಪನಿಗಳು ಹೊಸ ಹೊಸ ಎಲೆಕ್ಟ್ರಿಕ್ ಕಾರ್ ಗಳನು ಪರಿಚಯಿಸುತ್ತಿರುವ ಕಾರಣ ಕ್ರಮೇಣ ಇಂಧನ ಚಾಲಿತ ವಾಹನಗಳು ಮೂಲೆ ಗುಂಪಾಗುತ್ತಿವೆ ಎನ್ನಬಹುದು. ಸದ್ಯ ಚೀನಾದ ಜನಪ್ರಿಯ ವಾಹನ ತಯಾರಕ ಕಂಪನಿಯಾದ Chery New Energy ಸದ್ಯ ತನ್ನ ಹೊಸ Electric Car ಅನ್ನು ಪರಿಚಯಿಸಿದೆ. ಈ ಎಲೆಕ್ಟ್ರಿಕ್ ಮಾದರಿ ಚಿಕ್ಕದಾಗಿದ್ದು ಕಡಿಮೆ ಬೆಲೆಯಲ್ಲಿ ಅಧಿಕ ಮೈಲೇಜ್ ನೀಡುತ್ತದೆ.

Chery Electric Car
Image Credit: Drivespark

Chery Electric Car
ಇನ್ನು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ Chery Electric Car ನ ಆರಂಭಿಕ ಬೆಲೆ 77900 ಯುವಾನ್ ಆಗಿದೆ. ಅಂದರೆ ಭಾರತೀಯ ಮೌಲ್ಯದಲ್ಲಿ ಅಂದಾಜು ರೂ. 8.92 ಲಕ್ಷ ಆಗಿದೆ. ಇನ್ನು Chery Electric Car ನ ಟಾಪ್ ರೂಪಾಂತವರು 82900 ಯುವಾನ್, ಅಂದರೆ ಭಾರತೀಯ ಮೌಲ್ಯದಲ್ಲಿ ಅಂದಾಜು ರೂ. 9.49 ಲಕ್ಷ ಆಗಿದೆ.

ಇನ್ನು Chery Electric ಆವೃತ್ತಿಯು ಚೆರಿ ನ್ಯೂ ಆಂಟ್ ಅನ್ನು ಕ್ಲಾಸಿಕ್ ಲಿಟಲ್ ನ ನವೀಕರಿಸಿದ ಆವೃತ್ತಿಯಾಗಿದೆ. ಒಟ್ಟು ಏಳು ಬಣ್ಣಗಳ ಆಯ್ಕೆಯಲ್ಲಿ ನೀವು Chery Electric Car ಅನ್ನು ಖರೀದಿಸಬಹುದು. ಇನ್ನು Dark Green, Light Green, Peach, Agave Blue, White and Grey ಬಣ್ಣಗಳಲ್ಲಿ ನಿಮಗೆ ಇಷ್ಟವಾದ ಬಣ್ಣದ ಕಾರನ್ನು ನೀವು ಖರೀದಿಸಬಹುದು.

408 km range on a single charge
Image Credit: Drivespark

ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 408km ರೇಂಜ್
Chery Electric Car ನಲ್ಲಿ ವಿಭಿನ್ನ ಸಂಯೋಜನೆಗಳಲ್ಲಿ ನೀವು ಮೂರು ಬ್ಯಾಟರಿ ಆಯ್ಕೆಯನ್ನು ನೋಡಬಹುದು. ಇನ್ನು 25 .05kWh ಲಿಥಿಯಂ ಐರನ್ ಫಾಸ್ಟೆಟ್ ಬ್ಯಾಟರಿಯಲ್ಲಿ 251 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಇನ್ನು 28.86kWh ಟರ್ನರಿ ಲಿಥಿಯಂ ಬ್ಯಾಟರಿಯಲ್ಲಿ 301 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಇನ್ನು 40 .03kWh ಟರ್ನರಿ ಲಿಥಿಯಂ ಬ್ಯಾಟರಿಯಲ್ಲಿ 408 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

Join Nadunudi News WhatsApp Group

Join Nadunudi News WhatsApp Group