Chetan Ahimsa: ಚಂದ್ರಯಾನ 3 ಯಶಸ್ಸಿನ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ರಾ ಚೇತನ್…? ವೈರಲ್ ಆಗಿದೆ ಚೇತನ್ ಟ್ವೀಟ್.
ಆಕ್ಷೇಪಾರ್ಹ ಪೋಸ್ಟ್ ಮಾಡುವ ಮೂಲಕ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾದ ಚೇತನ್ ಅಹಿಂಸಾ.
Chetan Ahimsa About Chandrayana 3: ಕನ್ನಡದ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ (Chetan Ahimsa) ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಬಾರಿ ಸುದ್ದಿಯಲ್ಲಿದ್ದಾರೆ. ನಟ ಚೇತನ್ ಒಂದಲ್ಲ ಒಂದು ವಿವಾದದಲ್ಲಿ ಸಿಲುಕುತ್ತಾರೆ. ಇದೀಗ ಚೇತನ್ ಅಹಿಂಸಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿರುವ ಕಾರಣ ಮತ್ತೆ ಸುದ್ದಿಯಾಗಿದ್ದಾರೆ.
ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿರುವ ಚೇತನ್ ಅಹಿಂಸಾ
ಈಗಾಗಲೇ ಸಾಕಷ್ಟು ಬಾರಿ ಚೇತನ್ ಅಹಿಂಸೆ ಅವರು ಅವಹೇಳನಕಾರಿ ಹೇಳಿಕೆ ನೀಡುರುವ ಕಾರಣ ಸುದ್ದಿಯಾಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಚೇತನ್ ಅವರ ಹೇಳಿಕೆಗೆ ಆಗಾಗ ಪರ ವಿರೋಧದ ಚರ್ಚೆ ನಡೆಯುತ್ತಲೇ ಇರುತ್ತದೆ. ಈ ಹಿಂದೆ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿರುವ ಕಾರಣ ಚೇತನ್ ಅವರು ನ್ಯಾಯಾಂಗ ಬಂಧನದಲ್ಲಿ ಇರಿಸಿಲಾಗಿತು.
ನಂತರ ಕಾನೂನು ಹೋರಾಟ ನಡೆಸಿ ಹೊರಬಂದಿದ್ದರು. ಇದೀಗ ಚೇತನ್ ಅವರು ಚಂದ್ರಯಾನ್ 3 ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಸದ್ಯ ನಟ ಚೇತನ್ ಅಹಿಂಸೆ ಅವರ ಪೋಸ್ಟ್ ಟ್ವಿಟ್ಟರ್ ನಲ್ಲಿ ಬಹಳ ವೈರಲ್ ಆಗಿದ್ದು ಈ ಪೋಸ್ಟ್ ಗೆ ಪರ ವಿರೋಧ ಕಮೆಂಟ್ ಬರುತ್ತಿರುವುದನ್ನ ನೋಡಬಹುದಾಗಿದೆ.
ಚಂದ್ರಯಾನ್ 3 ಯಶಸ್ಸಿನ ಬಗ್ಗೆ ಚೇತನ್ ಅಹಿಂಸಾ ವ್ಯಂಗ್ಯ
ಇನ್ನು ಆಗಸ್ಟ್ 23 ಬುಧವಾರ ಸಂಜೆ 6 .04 ನಿಮಿಷಕ್ಕೆ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ತುದಿಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ 140 ಕೋಟಿ ಭಾರತೀಯರ ಕನಸನ್ನು ನನಸು ಮಾಡಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದ ಟಾಪ್ 4 ದೇಶಗಳ ಪಟ್ಟಿಗೆ ಭಾರತ ಗ್ರಾಂಡ್ ಎಂಟ್ರಿ ಕೊಟ್ಟಿದೆ. ಇಡೀ ಭಾರತೀಯರು ಚಂದ್ರಯಾನ ಯಶಸ್ಸಿನ ಸಂಭ್ರದಲ್ಲಿದ್ದರೆ. ಈ ವೇಳೆ ನಟ ಚೇತನ್ ಅಹಿಂಸಾ ಚಂದ್ರಯಾನದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
Happy to see historic moment of #Chandrayaan3’s landing on the moon—who gets credit: our scientists or ‘Lord’ Tirupathi?
ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ನನಗೆ ಸಂತೋಷವಾಗಿದೆ—ಈ ಯಶಸ್ಸಿನ ಕೀರ್ತಿ/ಗುರುತು ಯಾರಿಗೆ ಸಲ್ಲುತ್ತದೆ: ನಮ್ಮ ವಿಜ್ಞಾನಿಗಳಿಗೆ ಅಥವಾ ‘ಲಾರ್ಡ್’ ತಿರುಪತಿಗೆ?
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) August 23, 2023
ಚೇತನ್ ಅಹಿಂಸಾ ಟ್ವೀಟ್
“ಚಂದ್ರಯಾನ 3 ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ನನಗೆ ಸಂತೋಷವಾಗಿದೆ. ಈ ಯಶಸ್ಸಿನ ಕೀರ್ತಿ ಅಥವಾ ಗುರುತು ಯಾರಿಗೆ ಸಲ್ಲುತ್ತದೆ. ನಮ್ಮ ವಿಜ್ಞಾನಿಗಳಿಗೆ ಅಥವಾ ಲಾರ್ಡ್ ತಿರುಪತಿಗೆ?” ಎಂದು ಟ್ವೀಟ್ ಮಾಡಿದ್ದಾರೆ. ನಟ ಚೇತನ್ ಅವರು ವಿಜ್ಞಾನಿಗಳು ತಿರುಪತಿಗೆ ಹೋಗಿ ಪೂಜೆ ಸಲ್ಲಿಸಿರುವುದರ ಕಾರಣ ಇದರ ಕೀರ್ತಿ ತಿರುಪತಿ ದೇವರಿಗೂ ಅಥವಾ ವಿಜ್ಞಾನಿಗಳಿಗೂ ಎಂದು ಪ್ರಶ್ನೆ ಮಾಡಿದ್ದಾರೆ. ಇದೀಗ ಚೇತನ್ ಅವರ ಟ್ವೀಟ್ ಗೆ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಪರ ವಿರೋಧ ವ್ಯಕ್ತವಾಗುತ್ತಿದೆ.