Chetan Latest: ಹೆಣ್ಣು ಮಕ್ಕಳು ಇಂತಹ ಬಟ್ಟೆ ಧರಿಸಬೇಕು, ಸಲ್ಮಾನ್ ಖಾನ್ ಮೇಲೆ ಕಿಡಿಕಾರಿದ ಚೇತನ್.

ಹೆಣ್ಣು ಮಕ್ಕಳು ಯಾವ ಬಟ್ಟೆ ಧರಿಸಬೇಕು ಎಂದು ಮಾತನಾಡಿದ ಸಲ್ಮಾನ್ ಖಾನ್ ಬಗ್ಗೆ ಕಿಡಿಕಾರಿದ ನಟ ಚೇತನ್ ಅಹಿಂಸಾ.

Salman Khan And Chetan Ahimsa: ನಟ ಸಲ್ಮಾನ್ ಖಾನ್ ಇದೀಗ ಸುದ್ದಿಯಲ್ಲಿದ್ದಾರೆ. ಹೆಣ್ಣು ಮಕ್ಕಳ ಬಟ್ಟೆಯ ವಿಚಾರಾವಾಗಿ ಮಾತನಾಡಿದ ಸಲ್ಮಾನ್ ಖಾನ್ (Salman Khan)ಅವರಿಗೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದು ನಟ ಚೇತನ್ ಅಹಿಂಸಾ (Chetan Ahimsa) ಅವರು ಇದೀಗ ಸಲ್ಮಾನ್ ಖಾನ್ ಅವರ ಮಾತಿಗೆ ಕಿಡಿಕಾರಿದ್ದಾರೆ.

Salman Khan And Chetan Ahimsa
Image Source: Public Tv

ಹೆಣ್ಣು ಮಕ್ಕಳ ಬಟ್ಟೆಯ ಬಗ್ಗೆ ಮಾತನಾಡಿ ಸಂಕಷ್ಟಕ್ಕೆ ಸಿಲುಕಿಕೊಂಡ ನಟ ಸಲ್ಮಾ ಖಾನ್
ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ಹೆಣ್ಣು ಮಕ್ಕಳ ಬಟ್ಟೆ ವಿಚಾರವಾಗಿ ನೀಡಿರುವ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಲ್ಮಾನ್ ಖಾನ್ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಲ್ಮಾನ್ ಖಾನ್ ಯಾವಾಗಲು ವಿವಾದಾತ್ಮಕ ಹೇಳಿಕೆ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಮಹಿಳೆಯರ ಬಟ್ಟೆ ವಿಚಾರವಾಗಿ ಮಾತನಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಲ್ಮಾನ್ ಖಾನ್ ವಿರುದ್ಧ ಕಿಡಿಕಾರಿದ ನಟ ಚೇತನ್
ಸ್ವಲ್ಪ ದಿನಗಳ ಹಿಂದೆ ನಟಿ ಪಾಲಕ್ ತಿವಾರಿ ಶೂಟಿಂಗ್ ಸೆಟ್ ನಲ್ಲಿ ಹೆಣ್ಣುಮಕ್ಕಳು ಮೈ ತುಂಬಾ ಬಟ್ಟೆ ಹಾಕಿಕೊಂಡು ಬರಬೇಕು ಎಂದು ಸಲ್ಮಾನ್ ಖಾನ್ ನಿಯಮ ಮಾಡಿದ್ದರು ಎಂದು ಹೇಳಿದ್ದರು. ಈ ವಿಚಾರದ ಬಗ್ಗೆ ಸ್ವತಃ ಸಲ್ಮಾನ್ ಖಾನ್ ಅವರೇ ಮಾತನಾಡಿದ್ದಾರೆ.

Salman Khan And Chetan Ahimsa
Image Source: NDTV.Com

ಸಂದರ್ಶನದಲ್ಲಿ ಮಾತನಾಡಿದ ಸಲ್ಮಾ ಖಾನ್ ಮಹಿಳೆಯರು ಮೈ ತುಂಬಾ ಬಟ್ಟೆ ಧರಿಸಬೇಕು ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ಹೇಳಿಕೆಗೆ ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಕಿಡಿ ಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೇತನ್ ಸಲ್ಮಾನ್ ಖಾನ್ ಮಾತು ಅತ್ಯಂತ ವ್ಯಂಗ್ಯವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಅವರು ನೈತಿಕ ಪೊಲೀಸ್ ಗಿರಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

Join Nadunudi News WhatsApp Group

ಮಹಿಳೆಯರ ದೇಹವು ಅಮೂಲ್ಯ, ದೇಹವನ್ನು ಅವರು ಹೆಚ್ಚು ಮುಚ್ಚಿಕೊಂಡಷ್ಟು ಒಳ್ಳೆಯದು ಎಂದು ಫಿಲಂ ಸ್ಟಾರ್ ಸಲ್ಮಾನ್ ಖಾನ್ ಹೇಳಿದ್ದಾರೆ. ಅವರ ಈ ಮಾತು ಅತ್ಯಂತ ವ್ಯಂಗ್ಯವಾಗಿ ಕಾಣುತ್ತಿದೆ. ಸಲ್ಮಾನ್ ಖಾನ್ ಈಗ ಮಹಿಳೆಯರು ಹೇಗೆ ಬಟ್ಟೆ ಧರಿಸಬೇಕು ಅನ್ನುವುದರ ಕುರಿತು ನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದಾರೆ ಎಂದು ಚೇತನ್ ಕಿಡಿ ಕಾರಿದ್ದಾರೆ.

Salman Khan And Chetan Ahimsa
Image Source: Times Of India

Join Nadunudi News WhatsApp Group